• Home  
  • BIG BREAKING ಗಂಗೊಳ್ಳಿಯಲ್ಲಿ ಹನ್ನೊಂದು   ಮೀನುಗಾರಿಕಾ ಬೋಟಿಗೆ ಬೆಂಕಿ : ಸುಟ್ಟು ಕರಕಲಾದ ಮೀನುಗಾರಿಕಾ ಬೋಟುಗಳು (major fire at gangolli: 11 fishing boats got fire)
- ಅಪರಾಧ - ವಿಡಿಯೋ

BIG BREAKING ಗಂಗೊಳ್ಳಿಯಲ್ಲಿ ಹನ್ನೊಂದು   ಮೀನುಗಾರಿಕಾ ಬೋಟಿಗೆ ಬೆಂಕಿ : ಸುಟ್ಟು ಕರಕಲಾದ ಮೀನುಗಾರಿಕಾ ಬೋಟುಗಳು (major fire at gangolli: 11 fishing boats got fire)

Share: ಗಂಗೊಳ್ಳಿಯಲ್ಲಿ ಹನ್ನೊಂದು   ಮೀನುಗಾರಿಕಾ ಬೋಟಿಗೆ ಬೆಂಕಿ : ಸುಟ್ಟು ಕರಕಲಾದ ಮೀನುಗಾರಿಕಾ ಬೋಟುಗಳು (kundapura) ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಗಂಗೊಳ್ಳಿಯ ಮ್ಯಾಗನೀಸ್ ರಸ್ತೆಯಲ್ಲಿ ಹನ್ನೊಂದು   ಮೀನುಗಾರಿಕಾ ಬೋಟಿಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ‌ ಎಂದು ಮಾಹಿತಿ‌ ತಿಳಿದು ಬಂದಿದೆ.  ಈ ದುರ್ಘಟನೆಯಿಂದ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದೆ. ಯಾವುದೇ ಸಾವು-ನೋವು ಉಂಟಾಗಿಲ್ಲ. ಅಗ್ನಿ ಶಾಮಕ ದಳ, ಸಾರ್ವಜನಿಕರು ಬೆಂಕಿ ನಂದಿಸಲು ಹರ ಸಾಹಸ ಪಡುತ್ತಿದ್ದಾರೆ.   ಸಮುದ್ರದಿಂದ ಬೋಟನ್ನು ಮೇಲಕ್ಕೆತ್ತಿ ದುರಸ್ತಿ ಕಾರ್ಯ ನಡೆಯುತ್ತಿತ್ತು. […]

ಗಂಗೊಳ್ಳಿಯಲ್ಲಿ ಹನ್ನೊಂದು   ಮೀನುಗಾರಿಕಾ ಬೋಟಿಗೆ ಬೆಂಕಿ : ಸುಟ್ಟು ಕರಕಲಾದ ಮೀನುಗಾರಿಕಾ ಬೋಟುಗಳು

(kundapura) ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಗಂಗೊಳ್ಳಿಯ ಮ್ಯಾಗನೀಸ್ ರಸ್ತೆಯಲ್ಲಿ ಹನ್ನೊಂದು   ಮೀನುಗಾರಿಕಾ ಬೋಟಿಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ‌ ಎಂದು ಮಾಹಿತಿ‌ ತಿಳಿದು ಬಂದಿದೆ.

 ಈ ದುರ್ಘಟನೆಯಿಂದ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದೆ. ಯಾವುದೇ ಸಾವು-ನೋವು ಉಂಟಾಗಿಲ್ಲ. ಅಗ್ನಿ ಶಾಮಕ ದಳ, ಸಾರ್ವಜನಿಕರು ಬೆಂಕಿ ನಂದಿಸಲು ಹರ ಸಾಹಸ ಪಡುತ್ತಿದ್ದಾರೆ.

  ಸಮುದ್ರದಿಂದ ಬೋಟನ್ನು ಮೇಲಕ್ಕೆತ್ತಿ ದುರಸ್ತಿ ಕಾರ್ಯ ನಡೆಯುತ್ತಿತ್ತು. ಬೋಟ್ ದುರಸ್ತಿ ಮತ್ತು ಪೇಂಟಿಂಗ್ ಕಾರ್ಯಕ್ಕೆ ದಡದಲ್ಲಿ ಇರಿಸಲಾಗಿತ್ತು. ಕೆಲ ಬೋಟ್ ಗಳ ಮೇಲೆ ತೆಂಗಿನ ಗರಿಗಳನ್ನು ಹಾಸಲಾಗಿತ್ತು.

ಆರಂಭದಲ್ಲಿ ಬೋಟ್ ಮೇಲೆ ಹಾಸಿದ್ದ ತೆಂಗಿನ ಗರಿಗಳಿಗೆ ತಗುಲಿದ ಬೆಂಕಿ, ಬೆಂಕಿಯ ಕೆನ್ನಾಲಿಗೆ 11  ಬೋಟ್ ಗಳಿಗೆ ವ್ಯಾಪಿಸಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗಲಿರುವ ಸಾಧ್ಯತೆ ಇದೆ ಎಂದು ಗಂಗೊಳ್ಳಿ ಪೊಲೀಸರಿಂದ ಮಾಹಿತಿ ದೊರಕಿದೆ.

ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.