ಲೀಲಾವತಿ ಓರ್ವ ಶ್ರೇಷ್ಠ ಕಲಾವಿದೆ. ಅವರ ಅಗಲಿಕೆ ತುಂಬಲಾರದ ನಷ್ಟ: ಉಡುಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
(Udupi) ಉಡುಪಿ: ಸ್ಯಾಂಡಲ್ ವುಡ್ ನ ಶ್ರೇಷ್ಠ ಕಲಾವಿದೆಯಾದ ಲೀಲಾವತಿ ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಲೀಲಾವತಿಯವರು ನಮ್ಮ ಊರಿನವರು. ಸಿಕ್ಕಿದಾಗಲೆಲ್ಲ ತುಳುವಿನಲ್ಲೇ ಮಾತುಕತೆ ಮಾಡುತ್ತಿದ್ದೆವು. ಇಲ್ಲಿಂದ ಬೆಂಗಳೂರಿಗೆ ಹೋಗಿ ನಟಿಯಾದವರು. ನಟನೆ ಮತ್ತು ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅವರ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಅವರ ಪುತ್ರ ವಿನೋದ್ ರಾಜ್ ಕುಟುಂಬ ಮತ್ತು ಚಿತ್ರರಂಗಕ್ಕೆ ದೇವರು ನೀಡಲಿ ಎಂದು ಹೇಳಿದರು.
