ಕಾರ್ಕಳ ಜಮಾತುಲ್ ಫಲಹ ಇವರ ಸಹಯೋಗದಲ್ಲಿ ಇಂದು ಬೃಹತ್ ರಕ್ತದಾನ
ಕಾರ್ಕಳ; ಟಿ. ಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳ (TMA Pai Rotary Hosphital Karkala), ಇವರ ನೇತೃತ್ವದಲ್ಲಿ ಕಾರ್ಕಳ ಜಮಾತುಲ್ ಫಲಹ ಇವರ ಸಹಯೋಗದಲ್ಲಿ ಇಂದು ಬೃಹತ್ ರಕ್ತದಾನ ಶಿಬಿರ ಜರುಗಿತು.
ರಕ್ತದಾನ ಶಿಬಿರವನ್ನು ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ಜಾನ್ ಡಿ ಸಿ ಲ್ವ (John D’silva) ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಮಾತ್ ಫಲ್ಹ, ಕಾರ್ಕಳ ಘಟಕದ ಅಧ್ಯಕ್ಷರಾದ ಅಶ್ಪಾಕ್ ಅಹಮದ್ ಮಾತನಾಡಿ (Ashpak Ahmad), ದಾನಗಳಲ್ಲಿ ಅತ್ಯಂತ ಶ್ರೇಷ್ಠವಾದ ದಾನ ರಕ್ತದಾನ ವಾಗಿದೆ. ಒಬ್ಬ ರಕ್ತದಾನಿಯಿಂದ ಮೂವರ ಪ್ರಾಣವನ್ನು ಉಳಿಸಬಹುದು
ವೇದಿಕೆಯಲ್ಲಿ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ. ಕೀರ್ತಿನಾಥ್ ಬಳ್ಳಾಲ್ )DR Keerthinath Ballal), ಡಾ. ಭರತೇಶ್ (DR Bharatesh), ಹಾಗೂ ಜಮತುಲ್ ಫಲಹ ಕಾರ್ಯದರ್ಶಿ ಸೈಯದ್ ಅಬ್ಬಾಸ್̈ (Sayyad Abbas)ಉಪಸ್ಥಿರಿದ್ದರು.
ಇಕ್ಬಾಲ್ ಅಹಮದ್ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

