ಸೌಜನ್ಯ ಹೋರಾಟ ಸಮಿತಿಯಿಂದ ಸಾಲಿಗ್ರಾಮದಲ್ಲಿ ಬ್ರಹತ್ ಪ್ರತಿಭಟನಾ ಸಭೆ

ಸಾಲಿಗ್ರಾಮ: ಧರ್ಮದ ತಳಹದಿ ಇರುವ ಕ್ಷೇತ್ರದಲ್ಲಿ ಸೌಜನ್ಯನಿಗೆ ನ್ಯಾಯ ದೊರಕುತ್ತದೆ – ಅಂಬಿಕಾ ಪ್ರಭು
ಕೋಟ: ಧರ್ಮದ ತಳಹದಿ ಇರುವ ಕ್ಷೇತ್ರದಲ್ಲಿ ಸೌಜನ್ಯನಿಗೆ ನ್ಯಾಯ ಸಿಕ್ಕೆ ಸಿಗುತ್ತದೆ ಇದಕ್ಕೆ ಅಲ್ಲಿರುವ ದೇವರುಗಳೇ ಸಾಕ್ಷಿ ಎಂದು ವಕೀಲೆ ಅಂಬಿಕಾ ಪ್ರಭು ಹೇಳಿದರು.

ಶನಿವಾರ ಸಾಲಿಗ್ರಾಮದಲ್ಲಿ ಕೋಟ, ಸಾಲಿಗ್ರಾಮ, ಸಾಸ್ತಾನ ಸೌಜನ್ಯ ಹೋರಾಟ ಸಮಿತಿ ಹಮ್ಮಿಕೊಂಡ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೂ ಸಮಾಜ ಅನ್ಯಾಯದ ವಿರುದ್ಧ ಸದಾ ಧ್ವನಿ ಎತ್ತಿ ನ್ಯಾಯ ದೊರಕಿಸಿದ ಇತಿಹಾಸಗಳಿಗೆ, ಅದೇ ರೀತಿ ಕಳೆದ ೧೨ವರ್ಷಗಳ ಹಿಂದೆ ಅತ್ಯಾಚಾರದಿಂದ ಹತ್ಯೆಗೊಳಗಾದ ಸೌಜನ್ಯ ಕುಟುಂಬಕ್ಕೆ ನ್ಯಾಯ ದೇವತೆ ಕಣ್ತೆರೆದು ನಿಂತಿದ್ದಾಳೆ. ಇದಕ್ಕೆ ಇತ್ತೀಚಿನ ಹೋರಾಟಗಳೇ ಸಾಕ್ಷಿ. ರಾಜ್ಯದ ಮುಖ್ಯಮಂತ್ರಿಗಳು ಭರವಸೆ ನೀಡುತ್ತಾರೆ ಆದರೆ ಗೃಹಸಚಿವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. ಹಾಗಾದರೆ ನ್ಯಾಯ ಕೇಳುವುದೇ ತಪ್ಪಾ? ಈ ಪ್ರಕರಣವನ್ನು ಹಳ್ಳ ಹಿಡಿಸಲು ಪ್ರಯತ್ನಿಸುವ ಯತ್ನ ಯಶಸ್ಸು ಕಾಣದು. ಇಡೀ ಪ್ರಕರಣವನ್ನು ದಿಕ್ಕು ತಪ್ಪಿಸುವ ಕೆಲವೊಂದು ವ್ಯಕ್ತಿಗಳ ಹುನ್ನಾರದ ವಿರುದ್ಧ ಹರಿಹಾಯ್ದರು.
ಎಟಿಎಂ ಎನ್ನುವ ಹೇಳಿಕೆ ಅಸಂಬದ್ಧ
ಸೌಜನ್ಯ ಕುಟುಂಬ ನ್ಯಾಯಕ್ಕಾಗಿ ಸರಕಾರದ ಮುಂದೆ ಕದತಟ್ಡುತ್ತಿದ್ದರೆ ಇತ್ತ ಹೋರಾಟದ ದಿಕ್ಕು ತಪ್ಪಿಸುವ ವ್ಯಕ್ತಿಗಳು ಸೌಜನ್ಯ ಕುಟುಂಬ ಹಾಗೂ ಅದರ ಪರ ಹೋರಾಟಗಾರರ ವಿರುದ್ಧ ಎಟಿಎಂ ಪದ ಬಳಸುತ್ತಿದ್ದಾರೆ. ಹಾಗಾದರೆ ಹೆಣ್ಣು ಹೆತ್ತವರು ನ್ಯಾಯ ಕೇಳುವುದೇ ತಪ್ಪಾ?. ನಮ್ಮ ಉಡುಪಿ ಜಿಲ್ಲೆ ಜನ ಸಜ್ಜನರು. ಆದರೆ ಇಲ್ಲಿನ ಒರ್ವ ವ್ಯಕ್ತಿ ಬಕೆಟ್ ಹಿಡಿಯುವ ಬರದಲ್ಲಿ ಆ ಕುಟುಂಬಕ್ಕೆ ಮಸಿ ಬಡಿಯುವ ಕೆಲಸ ಮಾಡುತ್ತಿದ್ದಾನೆ. ಇದಕ್ಕೆ ನಾವುಗಳು ಪ್ರತ್ಯುತ್ತರ ನೀಡಲಿದ್ದೇವೆ ಎಂದು ರಾಷ್ಟ್ರೀಯ ಮಾನವಹಕ್ಕು ರಾಜ್ಯ ಸಮಿತಿ ಪ್ರದಾನಕಾರ್ಯದರ್ಶಿ ಡಾ.ದಿನೇಶ್ ಗಾಣಿಗ ಸಭೆಯಲ್ಲಿ ಗುಡುಗಿದರು.
ತಾಯಿ ಕುಸುಮಾ ಹೇಳಿಕೆ, ಕಣ್ಣೀರು
ಸೌಜನ್ಯ ತಾಯಿ ಮಾತನಾಡಿ, ತನ್ನ ಮಗಳನ್ನು ಅತ್ಯಾಚಾರಗೈದ ವ್ಯಕ್ತಿಗಳಿಗೆ ಕಠಿಣ ಗಲ್ಲು ಶಿಕ್ಷೆಯಾಗಬೇಕು ,ಎಲ್ಲೆಡೆ ಹೋರಾಟದ ಕಿಚ್ಚು ತನ್ನ ಮಗಳ ನ್ಯಾಯಕ್ಕಾಗಿ ಧ್ವನಿ ಎತ್ತಿದೆ.ಮುಖ್ಯಮಂತ್ರಿಯಿAದ ನ್ಯಾಯ ದೊರಕುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಇತ್ತ ಗೃಹಸಚಿವರು ಅವರ ಪರವಾಗಿ ಹೇಳಿಕೆ ನೀಡಿದಂತಿದೆ.ನಮ್ಮ ಹೋರಾಟ ನಿರಂತವಾಗಿ ನ್ಯಾಯ ದಿರಕುವವರೆಗೂ ವಿರಮಿಸುವುದಿಲ್ಲ ಎಂದು ಕಣ್ಣೀರಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಸೌಜನ್ಯ ಭಾವಚಿತ್ರಕ್ಕೆ ಪ್ರತಿಭಟನಾಕಾರರು ಪುಷ್ಭಾರ್ಚನೆಗೈದರು.
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಮೆರವಣಿಗೆ ಮೂಲಕ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರತಿಭಟನಾ ಸಭೆಗೆ ಆಗಮಿಸಿತು.
ಸಭೆಯಲ್ಲಿ ಗಮನ ಸೆಳೆದ ವ್ಯಕ್ತಿ
ಪ್ರತಿಭಟನಾ ಸಭೆಯಲ್ಲಿ ಈ ಹೋರಾಟದ ರೂವಾರಿ ತಿಮರೋಡಿ ಮಹೇಶ ಶೆಟ್ಟಿಯವರನ್ನು ಹೊಲುವ ವ್ಯಕ್ತಿ ಸಾಲಿಗ್ರಾಮದ ಪ್ರಶಾಂತ್ ಗಾಣಿಗ ವಿಶೇಷವಾಗಿ ಗಮನ ಸೆಳೆದರು.
ಹೋರಾಟ ಸಮಿತಿ ಪ್ರಮುಖ ನಾಗರಾಜ ಗಾಣಿಗ ಪ್ರಾಸ್ತಾವನೆ ಸಲ್ಲಿಸಿದರು.
ಕುಂದಾಪುರ ಸೌಜನ್ಯ ಹೋರಾಟ ಸಮಿತಿ ಪ್ರಮುಖ ಸುಧೀರ್ ಮಲ್ಯಾಡಿ, ಸೌಜನ್ಯ ಸಹೋದ ಮಾವ ವಿಠ್ಠಲ ಗೌಡ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಸಾದ್ ಬಿಲ್ಲವ ನಿರೂಪಿಸಿದರು.

