• Home  
  • (Kapu kalya mari gudi) ಕಾಪುವಿನ ಕಲ್ಯ ಶ್ರೀ ಮಾರಿಗುಡಿ ದೇಗುಲದಲ್ಲಿ ಶರನ್ನವರಾತ್ರಿ ಪ್ರಯುಕ್ತ ಚಂಡಿಕಾ ಮಹಾಯಾಗ, ಪೂರ್ಣಾಹುತಿ ದರ್ಶನ ಸೇವೆ, ಅನ್ನ ಸಂತರ್ಪಣೆ
- ಕರಾವಳಿ - ವಿಡಿಯೋ

(Kapu kalya mari gudi) ಕಾಪುವಿನ ಕಲ್ಯ ಶ್ರೀ ಮಾರಿಗುಡಿ ದೇಗುಲದಲ್ಲಿ ಶರನ್ನವರಾತ್ರಿ ಪ್ರಯುಕ್ತ ಚಂಡಿಕಾ ಮಹಾಯಾಗ, ಪೂರ್ಣಾಹುತಿ ದರ್ಶನ ಸೇವೆ, ಅನ್ನ ಸಂತರ್ಪಣೆ

Share: ಕಾಪುವಿನ ಕಲ್ಯ ಶ್ರೀ ಮಾರಿಗುಡಿ ದೇಗುಲದಲ್ಲಿ ಶರನ್ನವರಾತ್ರಿ ಪ್ರಯುಕ್ತ ಚಂಡಿಕಾ ಮಹಾಯಾಗ, ಪೂರ್ಣಾಹುತಿ ದರ್ಶನ ಸೇವೆ, ಅನ್ನ ಸಂತರ್ಪಣೆ (Udupi) ಉಡುಪಿ\ಕಾಪು: ಕಾಪು ಮಹತೋಬಾರ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ ಆಡಳಿತಕ್ಕೊಳಪಟ್ಟ ಶ್ರೀ ಮೂರನೇ ಮಾರಿಗುಡಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಚಂಡಿಕಾ ಮಹಾಯಾಗ, ಪೂರ್ಣಾಹುತಿ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ  ಸಂಪನ್ನಗೊಂಡಿತು.  ದೇಗುಲದ ತಂತ್ರಿ ಅನಂತರಾಮ ಕಲ್ಯ ಮಾರ್ಗದರ್ಶನದಲ್ಲಿ ಕೆ.ಪಿ.ಶ್ರೀನಿವಾಸ ತಂತ್ರಿ ಮಡುಂಬು ನೇತೃತ್ವದಲ್ಲಿ ಅರ್ಚಕ ನಾರಾಯಣ ತಂತ್ರಿ ಹಾಗೂ ವೈದಿಕರ ಸಹಕಾರದೊಂದಿಗೆ ಚಂಡಿಕಾ ಮಹಾಯಾಗದ […]

kaup kalya marigudi chandika yaaga

ಕಾಪುವಿನ ಕಲ್ಯ ಶ್ರೀ ಮಾರಿಗುಡಿ ದೇಗುಲದಲ್ಲಿ ಶರನ್ನವರಾತ್ರಿ ಪ್ರಯುಕ್ತ ಚಂಡಿಕಾ ಮಹಾಯಾಗ, ಪೂರ್ಣಾಹುತಿ ದರ್ಶನ ಸೇವೆ, ಅನ್ನ ಸಂತರ್ಪಣೆ

(Udupi) ಉಡುಪಿ\ಕಾಪು: ಕಾಪು ಮಹತೋಬಾರ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ ಆಡಳಿತಕ್ಕೊಳಪಟ್ಟ ಶ್ರೀ ಮೂರನೇ ಮಾರಿಗುಡಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಚಂಡಿಕಾ ಮಹಾಯಾಗ, ಪೂರ್ಣಾಹುತಿ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ  ಸಂಪನ್ನಗೊಂಡಿತು.

 ದೇಗುಲದ ತಂತ್ರಿ ಅನಂತರಾಮ ಕಲ್ಯ ಮಾರ್ಗದರ್ಶನದಲ್ಲಿ ಕೆ.ಪಿ.ಶ್ರೀನಿವಾಸ ತಂತ್ರಿ ಮಡುಂಬು ನೇತೃತ್ವದಲ್ಲಿ ಅರ್ಚಕ ನಾರಾಯಣ ತಂತ್ರಿ ಹಾಗೂ ವೈದಿಕರ ಸಹಕಾರದೊಂದಿಗೆ ಚಂಡಿಕಾ ಮಹಾಯಾಗದ ವಿವಿಧ ಧಾರ್ಮಿಕ ವಿಧಾನ ಸಂಪನ್ನಗೊಂಡಿತು. ಮಧ್ಯಾಹ್ನ ಚಂಡಿಕಾಯಾಗ ಪೂರ್ಣಾಹುತಿ, ಮಹಾಅನ್ನಸಂತರ್ಪಣೆ, ಸಂಜೆ ದೇವಿ ದರ್ಶನ, ಪ್ರಸಾದ ವಿತರಣೆ ನೆರವೇರಿತು. ಭಜನಾ ತಂಡಗಳಿಂದ ಭಜನೆ ಕಾರ್ಯಕ್ರಮ ನಡೆಯಿತು.

ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು (ravi basrooru) ಭೇಟಿ ನೀಡಿ ದೇವಿಯ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ,(gurme suresh Shetty) ಶ್ರೀ ಮೂರನೇ ಮಾರಿಗುಡಿ, ದೇವಸ್ಥಾನ ಕಾರ್ಯ ನಿರ್ವಹಣಾಧಿಕಾರಿ ಅರುಣ್ ಕುಮಾರ್ ,(arunkumar) ಗೌರವ ಸಲಹೆಗಾರ ಕೆ.ಪಿ. ಆಚಾರ್ಯ (k p acharya)ಸೇರಿದಂತೆ  ಸಾವಿರಾರು ಮಂದಿ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡರು.

Leave a comment

Your email address will not be published. Required fields are marked *

eMedia Kannada  @2025. All Rights Reserved.