ಬಂಟ್ವಾಳ: ದೈವಸ್ಥಾನ, ಭಜನಾ ಮಂದಿರದಿಂದ ಸರಣಿ ಕಳವು (Bantwala : Theft at Bhajana mandira)
ಬಂಟ್ವಾಳ: ದೈವಸ್ಥಾನ, ಭಜನಾ ಮಂದಿರದಿಂದ ಸರಣಿ ಕಳವು (Bantwala) ಬಂಟ್ವಾಳ: ಎರಡು ಗ್ರಾಮಗಳ ಎರಡು ಧಾರ್ಮಿಕ ಕೇಂದ್ರ ಹಾಗೂ ಶಿಶುಮಂದಿರವೊಂದಕ್ಕೆ ಕಳ್ಳರು ನುಗ್ಗಿ ಸಾವಿರಾರು ರೂ. ನಗದು ಕಳವು ಮಾಡಿದ ಘಟನೆ ಆದಿತ್ಯವಾರ ಮಧ್ಯ ರಾತ್ರಿ ವೇಳೆ ನಡೆದಿದ್ದು ಸೋಮವಾರ ಬೆಳಕಿಗೆ ಬಂದಿದೆ. ನರಿಕೊಂಬು ಗ್ರಾಮದಲ್ಲಿರುವ ಪೊಯಿತಾಜೆ ಏರಮಲೆ ಶ್ರೀ ಕೋದಂಡ ರಾಮ ಭಜನಾ ಮಂದಿರದ ಮುಂಬಾಗಿಲು ಮುರಿದು ಮಂದಿರದೊಳಗೆ ಇದ್ಧ ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು 3000 ಸಾವಿರ ನಗದನ್ನು ಕಳವು ಮಾಡಿದಲ್ಲದೆ, ಗೋದ್ರೇಜ್ ಬೀರುವಿನ ಬಾಗಿಲು ಮುರಿದು […]









