Tag: kapu tahashildar

ದೈವ - ದೇವರು ವಿಡಿಯೋ

 ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇಗುಲದ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ ಸಂಪನ್ನ (Uchila Sri Mahalingeshwara Temple Flag hoisting ceremony)

ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇಗುಲದ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ ಸಂಪನ್ನ  (Uchila) ಉಚ್ಚಿಲ: ಪುರಾಣ ಪ್ರಸಿದ್ಧ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ರಥೋತ್ಸವದ ಪ್ರಯುಕ್ತ ಶುಕ್ರವಾರ ಬೆಳಿಗ್ಗೆ ಧ್ವಜಾರೋಹಣ ನೆರವೇರಿತು.  ಉಚಿಲ ದೇಗುಲದ ರಥೋತ್ಸವವು ಮಾರ್ಚ್ ಹನ್ನೊಂದರ ಸೋಮವಾರ ನೆರವೇರಲಿದೆ . ಧ್ವಜಾರೋಹಣದ ಸಂದರ್ಭ ದೇವಸ್ಥಾನದ ಆಡಳಿತ ಅಧಿಕಾರಿ, ಕಾಪು ತಹಶೀಲ್ದಾರ್ ಶ್ರೀಮತಿ ಡಾ. ಪ್ರತಿಭಾ (Kaup Thahashildar Prathibha R), ದೇಗುಳದ ಅರ್ಚಕರು ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಉಪಸ್ಥಿತರಿದ್ದರು.

ಪ್ರಚಲಿತ

  ಕಾಪು   ಆಡಳಿತ ಸೌಧದ ತಾಲ್ಲೂಕು ಕಚೇರಿ ಸಭಾಭವನದಲ್ಲಿ ಕಾಪು ತಾಲ್ಲೂಕು ಮಟ್ಟದ ಪಿಂಚಣಿ ಅದಾಲತ್ ಸಂಪನ್ನ (Kaup thaluk level pension Adalath)

ಕಾಪು   ಆಡಳಿತ ಸೌಧದ ತಾಲ್ಲೂಕು ಕಚೇರಿ ಸಭಾಭವನದಲ್ಲಿ ಕಾಪು ತಾಲ್ಲೂಕು ಮಟ್ಟದ ಪಿಂಚಣಿ ಅದಾಲತ್ ಸಂಪನ್ನ   (Kaup) ಕಾಪು: ಕಾಪು ಆಡಳಿತ ಸೌಧದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ  ಶುಕ್ರವಾರ ಬೆಳಿಗ್ಗೆ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರಾದ ರಶ್ಮಿ ಎಸ್ ಆರ್ (Rashmi SR) ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಪಿಂಚಣಿ ಅದಾಲತ್ ನಡೆಯಿತು. ಸಾಮಾಜಿಕ ಭದ್ರತಾ ಯೋಜನೆಗಳಾದ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲ ವೇತನ, ನಿರ್ಗತಿಕ ವಿಧವಾ ವೇತನ, ಮೈತ್ರಿ […]

ಅಪರಾಧ

ಪಡುಬಿದ್ರಿಯಲ್ಲಿ”ಗೃಹಜ್ಯೋತಿ” ಹೆಸರಲ್ಲಿ ಬಡ ಜನರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಸೈಬರ್ ಕೇಂದ್ರಗಳು

ಪಡುಬಿದ್ರಿಯಲ್ಲಿ”ಗೃಹಜ್ಯೋತಿ” ಹೆಸರಲ್ಲಿ ಬಡ ಜನರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಸೈಬರ್ ಕೇಂದ್ರಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳುವೆ: ತಹಶಿಲ್ದಾರ್ ಇಪ್ಪತ್ತು ರೂಪಾಯಿ ಪಡೆಯ ಬೇಕಾಗಿದ್ದ ಗೃಹಜ್ಯೋತಿ ಯೋಜನೆಯ ನೋಂದಾವಣಿಗೆ ಪಡುಬಿದ್ರಿ ಸೈಬರ್ ವೊಂದರಲ್ಲಿ 100 ರೂಪಾಯಿ ಪಡೆಯುತ್ತಿರುವುದನ್ನು ವಿರೋಧಿಸಿದ ಗ್ರಾ.ಪಂ. ಸದಸ್ಯರ ದೂರಿನನ್ವಯ ಕಾಪು ತಹಶಿಲ್ದಾರ್ ಅಂಥಹ ಸೈಬರ್ ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಪಡುಬಿದ್ರಿ ಗ್ರಾ.ಪಂ. ಸದಸ್ಯೆ ಜ್ಯೋತಿ ಮೆನನ್, ಸರ್ಕಾರ ಬಡವರಿಗಾಗಿ ನೀಡುವ  “ಗೃಹಜ್ಯೋತಿ” […]

eMedia Kannada  @2025. All Rights Reserved.