Tag: kapu

ಕರಾವಳಿ

ಕಾಪುವಿನ  ಹೊಸಮಾರಿಗುಡಿಯಲ್ಲಿ  ಶಾಸ್ತ್ರೋಕ್ರವಾಗಿ ತಾತ್ಕಾಲಿಕ ನಿರ್ಮಿಸಲಾದ ಗರ್ಭಗುಡಿ ಉದ್ಘಾಟಿಸಿದ ಉಡುಪಿ ಜಿಲ್ಲಾಧಿಕಾರಿ

ಕಾಪುವಿನ  ಹೊಸಮಾರಿಗುಡಿಯಲ್ಲಿ  ಶಾಸ್ತ್ರೋಕ್ರವಾಗಿ ತಾತ್ಕಾಲಿಕ ನಿರ್ಮಿಸಲಾದ ಗರ್ಭಗುಡಿ ಉದ್ಘಾಟಿಸಿದ ಉಡುಪಿ ಜಿಲ್ಲಾಧಿಕಾರಿ ಸಮಗ್ರ ಜೀರ್ಣೋದ್ಧಾರ ಪ್ರಕ್ರಿಯೆಗಾಗಿ ಶಾಸ್ತ್ರೋಕ್ರವಾಗಿ ನಿರ್ಮಿಸಲಾದ ತಾತ್ಕಾಲಿಕ ಗರ್ಭಗುಡಿಯನ್ನು ಸೋಮವಾರ ಉಡುಪಿ ಜಿಲ್ಲಾಧಿಕಾರಿ ಡಾ| ಕೂರ್ಮಾ ರಾವ್ ಎಂ ಉದ್ಘಾಠಿಸಿದರು. ಅವರು ಈ ಸಂದರ್ಭ ಮಾತನಾಡಿ,  ಕಾಪು ಹೊಸ ಮಾರಿಗುಡಿಯ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ದೊರಕಿರುವುದು ಜೀವಮಾನದಲ್ಲಿ ಶ್ರೇಷ್ಟ ಸೌಭಾಗ್ಯವಾಗಿದೆ. ದೇಶ ವಿದೇಶಗಳ ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಮಾರಿಗುಡಿಯ ಅಭಿವೃದ್ಧಿ ಕಾರ್ಯಗಳು ಸಾಂಗವಾಗಿ ನೆರವೇರುವಂತಾಗಲಿ. ಸರಕಾರ ಮತ್ತು ಜಿಲ್ಲಾಡಳಿತದ ವತಿಯಿಂದ ಅಗತ್ಯ ಸಹಕಾರ ನೀಡಲು […]

ಕರಾವಳಿ ಪ್ರಚಲಿತ

ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನ ಜೀರ್ಣೋದ್ಧಾರ ಪ್ರಕ್ರಿಯೆ; ತಾತ್ಕಾಲಿಕ ಗುಡಿಯಲ್ಲಿ ಮಾರಿಯಮ್ಮ,ಉಚ್ಚಂಗಿ  ಸಾನಿಧ್ಯ ಪ್ರತಿಷ್ಠೆ

 ಕಾಪು, ಜೂ. ೧೨ : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನಡೆಯುತ್ತಿರುವ ಸುಮಾರು ೩೫ ಕೋಟಿ ರೂಪಾಯಿ ವೆಚ್ಚದ ಪ್ರಥಮ ಹಂತದ ಜೀರ್ಣೋದ್ಧಾರ ಯೋಜನೆಗಳಿಗೆ ಪೂರಕವಾಗಿ ದೇಗುಲದ ಪಕ್ಕದಲ್ಲಿ ನಿರ್ಮಿಸಲಾದ ತಾತ್ಕಾಲಿಕ ಗುಡಿಯಲ್ಲಿ ಸೋಮವಾರ ಬೆಳಿಗ್ಗೆ ೮ ಗಂಟೆಗೆ ಶ್ರೀ ಮಾರಿಯಮ್ಮ ದೇವಿ ಮತ್ತು ಶ್ರೀ ಉಚ್ಚಂಗಿ ದೇವಿ ಸಾನಿಧ್ಯ ಪ್ರತಿಷ್ಠೆ ಹಾಗೂ ನಿರ್ಮಾಣ ಹಂತದ ಶಿಲಾಮಯ ಗರ್ಭಗುಡಿಯ ಮಹಾದ್ವಾರ ಸ್ಥಾಪನಾ ಪೂಜೆ ನಡೆಯಿತು.  ಕಾಪು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ, ವ್ಯವಸ್ಥಾಪನಾ ಸಮಿತಿ […]

ಕರಾವಳಿ

ಜೂ. 11-12 ರಂದು ಕಾಪು ಶ್ರೀ ಹೊಸಮಾರಿಗುಡಿ ಮಾರಿಯಮ್ಮ ಮತ್ತು ಉಚ್ಛಂಗಿ ದೇವಿ ಗದ್ದುಗೆಯ ತಾತ್ಕಾಲಿಕ ಗುಡಿಗೆ ಸಾನಿಧ್ಯ ಚಾಲನೆ

ಕಾಪು, : ಸುಮಾರು ಮೂವತ್ತೈದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಶ್ರೀ ಮಾರಿಯಮ್ಮ ಮತ್ತು ಶ್ರೀ ಉಚ್ಛಂಗಿ ದೇವಿ ಗದ್ದುಗೆಯ ತಾತ್ಕಾಲಿಕ ಗುಡಿಗೆ ಸಾನಿಧ್ಯ ಚಲನೆ ಧಾರ್ಮಿಕ ಕಾರ್ಯಕ್ರಮವು ಜೂ. 11 ಮತ್ತು 12 ರಂದು ನಡೆಯಲಿದೆ ಎಂದು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ತಿಳಿಸಿದರು. ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಶುಕ್ರವಾರ ಜರಗಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, […]

ಕರಾವಳಿ ತಂತ್ರಜ್ಞಾನ

ಬಂಟಕಲ್ ಕಾಲೇಜಿನಲ್ಲಿ “ಹ್ಯಾಕೋತ್ಸವ ೨೦೨೩ರ” ಸಮಾರೋಪ ಸಮಾರಂಭ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿAಗ್ ವಿಭಾಗವು ಕಾಲೇಜಿನ ಇನ್ನೋವೇಶನ್ ಘಟಕ ಮತ್ತು ಐಎಸ್‌ಟಿಇ ಘಟಕದ ಸಹಯೋಗದೊಂದಿಗೆ ರಾಜ್ಯಮಟ್ಟದ ೨೪ ಗಂಟೆಗಳ ಹ್ಯಾಕಥಾನ್ ಹ್ಯಾಕೋತ್ಸವ ೨೦೨೩ರ ಸಮಾರೋಪ ಸಮಾರಂಭವು ಕಾಲೇಜಿನ ಆವರಣದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮಂಗಳೂರಿನ ಕಂಬಳ ಸೊಲ್ಯುಶನ್ಸ್, ಬಿವಾಮ್ ಇಂಡಿಯ ಮತ್ತು ನಿವ್ಯಸ್ ಸೊಲ್ಯುಶನ್ಸ್ ಪ್ರಾಯೊಜಕತ್ವ ನೀಡಿದ್ದರು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಿವ್ಯಸ್ ಸೊಲ್ಯುಶನ್ಸ್ ಡಾಟಾ ಆರ್ಕಿಟೆಕ್ಟ್ ಶ್ರೀ ಪ್ರಸಾದ್ ಪೈ […]

ಕರಾವಳಿ ವ್ಯವಹಾರ

ತೆಂಕ ಎರ್ಮಾಳು ಕಿನಾರಾ ಆಂಗ್ಲ ಮಾಧ್ಯಮ ಶಾಲಾ ನೂತನ ಕಟ್ಟಡ ಉದ್ಘಾಟನೆ

ತೆಂಕ ಎರ್ಮಾಳು ಕಿನಾರಾ ಆಂಗ್ಲ ಮಾಧ್ಯಮ ಶಾಲಾ ನೂತನ ಕಟ್ಟಡ ಉದ್ಘಾಟನೆ ತೆಂಕ ಎರ್ಮಾಳು ಎಜ್ಯುಕೇಶನ್ ಸೊಸೈಟಿ ಆಡಳಿತಕ್ಕೊಳಪಟ್ಟಿರುವ ಅದಮಾರು ಮಠದ ಶ್ರೀ ವಿಬುದೇಶ ತೀರ್ಥ ಶ್ರೀಪಾದರ ಸಂಸ್ಮರಣಾರ್ಥವಾಗಿ ನಿರ್ಮಾಣಗೊಂಡಿರುವ ಕಿನಾರಾ ಆಂಗ್ಲ ಮಾಧ್ಯಮ ಶಾಲಾ ನೂತನ ಕಟ್ಟಡವನ್ನು ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ  ನಾಡೋಜ ಡಾ.ಜಿ.ಶಂಕರ್ ಉದ್ಘಾಠಿಸಿದರು. ಅವರು ಈ ಸಂದರ್ಭ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಅಧಿಕವಾಗುತ್ತಿದ್ದು, ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡಿದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಯಾಗಿ ಗುರುತಿಸಲು ಸಾಧ್ಯವಿದೆ ಎಂದರು.   ಮುಖ್ಯ […]

ಕರಾವಳಿ ರಾಜಕೀಯ

ಕಾಪುವಿನಲ್ಲಿ ಬಿಜೆಪಿಯಿಂದ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ

 ಭಾರತೀಯ ಜನತಾ ಪಾರ್ಟಿ ಕಾಪು ವಿಧಾನಸಭಾ ಕ್ಷೇತ್ರದ ವತಿಯಿಂದ   ಕಾಪು ಪೇಟೆಯಲಿ ಕಾಂಗ್ರೆಸ್ ನೇತ್ರತ್ವದ ರಾಜ್ಯ ಸರಕಾರದ ವಿರುಧ್ಧ ಪ್ರತಿಭಟನಾ ಸಭೆ ನಡೆಯಿತು.  ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ರಾಜ್ಯ ಸರಕಾರ 200 ಯುನಿಟ್ ವಿದ್ಯುತ್ ಎಲ್ಲರಿಗೂ ಉಚಿತ ಎಂದು ಹೇಳಿ ಇದೀಗ ವಾರ್ಷಿಕ ಸರಾಸರಿಯ ಶೇ.10 ರಷ್ಟು ಹೆಚ್ಚು ಮಾತ್ರ ಉಚಿತ ಎಂದು ಹೇಳಿ ಜನರಿಗೆ ಕೊಟ್ಟ ವಚನ ಮುರಿದು ವಚನಭ್ರಷ್ಟ ರಾಗಿದ್ದಾರೆ.  ಅಲ್ಲದೆ ಪ್ರತಿ ಯುನಿಟ್ ವಿದ್ಯುತ್ […]

ದೇಶ-ವಿದೇಶ ಪ್ರಯಾಣ ರಾಜಕೀಯ

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರಿಂದ ಮುಂಬಯಿಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಭೇಟಿ

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರಿಂದ ಮುಂಬಯಿಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಭೇಟಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ  ಗುರ್ಮೆ ಸುರೇಶ್ ಶೆಟ್ಟಿಯವರು ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿಗಳಾದ ಏಕನಾಥ ಶಿಂಧೆಯವರನ್ನು   ಮುಂಬೈನಲ್ಲಿರುವ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಭೇಟಿಯಾದರು.  ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಪು ಕ್ಷೇತ್ರಕ್ಕೆ ಗುರ್ಮೆ ಸುರೇಶ್‌ ಶೆಟ್ಟಿಯವರ  ಪರವಾಗಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಮುಖ್ಯಮಂತ್ರಿ ಅವರಿಗೆ ಗುರ್ಮೆ ಕೃತಜ್ಞತೆ ಸಲ್ಲಿಸಿದರು.  ಕಾಪು ಕ್ಷೇತ್ರ ಸರ್ವಾಂಗೀಣ ರೀತಿಯಲ್ಲಿ ಅಭಿವೃದ್ಧಿ ಹೊಂದುವಂತಾಗಲಿ ಎಂದು […]

ಕರಾವಳಿ

ಪಡು ಕುತ್ಯಾರಿನಲ್ಲಿ ಜುಲೈ 3 ರಿಂದ ಸೆಪ್ಟಂಬರ್ 29 ರ ವರೆಗೆ ಆನೆಗುಂದಿ ಕಾಳಹಸ್ತೇಂದ್ರ ಸ್ವಾಮಿಯವರ 19ನೇ ವರ್ಷದ ಚಾತುರ್ಮಾಸ್ಯ  ವೃತಾಚರಣೆ

  ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರರಾದ ಪರಮ ಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 19ನೇ ವರ್ಷದ ಶೋಭಕ್ಕೃತ್ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯು 2023 ಜುಲೈ 3 ರಿಂದ ಸೆಪ್ಟಂಬರ್ 29 ರ ವರೇಗೆ ಪಡು ಕುತ್ಯಾರಿನಲ್ಲಿ ನಡೆಯಲಿದೆ. ವರ್ಷಂಪ್ರತಿ ನಡೆಯುವ ಚಾತುರ್ಮಾಸ್ಯ ಪೂರ್ವಭಾವೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇಗುಲಗಳಲ್ಲಿ 2023 ಜೂನ್ 8 ರಿಂದ 29 ರವರೆಗೆ ಅಂಕೋಲಾ, ಕೊಲಕಾಡಿ, ಪಡುಪಣಂಬೂರು, ಹಳೆಯಂಗಡಿ, ಮಂಗಳೂರು, ಮಧೂರು, ಆರಿಕ್ಕಾಡಿ ಕಾರ್ಳೆ,ಬಂಗ್ರ ಮಂಜೇಶ್ವರ, […]

ಜೀವನಶೈಲಿ

  ಮುಂಡ್ಕೂರು- ಚಿಕಿತ್ಸೆಗಾಗಿ ನೆರವು

ಕಾರ್ಕಳ: ಸಾಮಾಜಿಕ ಕಳಕಳಿಯ ಕಾರ್ಕಳ ತಾಲೂಕಿನ ನಮ್ಮ ಫ್ರೆಂಡ್ (ರಿ. ) ಮುಂಡ್ಕೂರು ಇದರ ವತಿಯಿಂದ 40ನೇ ಹೆಜ್ಜೆಯ ಅಂಗವಾಗಿ ಮುಂಡ್ಕೂರು ಜೇಪೆ ಮನೆ ಕುಮಾರಿ ಪ್ರತಿಕ್ಷಾ ಅವರು ಹೃದಯ ರೋಗದಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ವೈದ್ಯಕೀಯ ನೆರವಿನ ಚೆಕ್ ನ್ನು ನಮ್ಮ ಫ್ರೆಂಡ್ಸ್‌ನ ಸಂಚಾಲಕ ಆನಂದ ಸಾಲ್ಯಾನ್ ವಿತರಿಸಿದರು. ಈ ಸಂದರ್ಭದಲ್ಲಿ ನಮ್ಮ ಫ್ರೆಂಡ್ಸಿನ ಗೌರವ ಅಧ್ಯಕ್ಷ ಜಗದೀಶ್ ಶೆಟ್ಟಿ ಪುಣೆ, ಅಧ್ಯಕ್ಷ ಅರುಣ್ ರಾವ್, ನಿಕಟ ಪೂರ್ವ ಅಧ್ಯಕ್ಷ ಪ್ರಕಾಶ್ ನಾಯಕ್, ಗೌರವ ಸಲಹೆಗಾರ ಪ್ರಭಾಕರ್ […]

ಕರಾವಳಿ ಫ್ಯಾಷನ್

ಲಯನ್ಸ್ ಕ್ಲಬ್ ಕುರ್ಕಾಲ್ – ವಿಶ್ವ ಪರಿಸರ ದಿನಾಚರಣೆ

ಲಯನ್ಸ್ ಕ್ಲಬ್ ಕುರ್ಕಾಲ್, ಉಡುಪಿ ಜಿಲ್ಲಾ ನರ್ಸರಿಮೆನ್ ಅಸೋಸಿಯೇಶನ್ ಜಂಟಿ ಆಶ್ರಯದಲ್ಲಿ ಕುರ್ಕಾಲ್ ಪರಿಸರದಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಯಿತು. ಲಯನ್ಸ್ ಅಧ್ಯಕ್ಷ ಡಿ. ಆರ್. ಕೋಟ್ಯಾನ್, ಕಾರ್ಯದರ್ಶಿ ಡೋಮಿಯನ್ ನೊರೋಹ್ನಾ, ಖಜಾಂಜಿ ವಿಕ್ಟರ್ ಮಿನೇಜಸ್, ನಿಯೋಜಿತ ಅಧ್ಯಕ್ಷ ಸ್ಟೀವನ್ ಕ್ಯಾಸ್ತಲಿನೋ,  ನಿಯೋಜಿತ ಕಾರ್ಯದರ್ಶಿ  ಹಾಗೂ ನರ್ಸರಿಮೆನ್ ಅಸೋಸಿಯೇಶನ್ ಅಧ್ಯಕ್ಷ ಸುರೇಶ್ ಕುರ್ಕಾಲ್, ವನಸುಮ ವೇದಿಕೆ ಅಧ್ಯಕ್ಷ ಬಾಸುಮ ಕೊಡಗು ಉಪಸ್ಥಿತರಿದ್ದರು.

eMedia Kannada  @2025. All Rights Reserved.