Tag: Karavali

ಕರಾವಳಿ

ಚಂಡಮಾರುತದ ಪ್ರಭಾವ ಮೂಳೂರಿನಲ್ಲಿ ತೀವ್ರಗೊಂಡ ಕಡಲ್ಕೊರೆತ

  ಬಿಫರ್‌ ಜಾಯ್ ಚಂಡಮಾರುತದ ಪ್ರಭಾವ ರಾಜ್ಯದ ಕರಾವಳಿಗೆ ಜೋರಾಗಿಯೇ ತಟ್ಟಿದ್ದು, ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ.  ಪರಿಣಾಮವಾಗಿ ಬುಧವಾರ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂಳೂರು ಭಾಗದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಮೂಳೂರಿನಲ್ಲಿ ಕಡಲ್ಕೊರೆತದಿಂದ ದಡದಲ್ಲಿ ನಿರ್ಮಿಸಿದ ಕಲ್ಲು ಬಂಡೆಗಳ ತಡೆಗೋಡೆ ಸಮುದ್ರ ಪಾಲಾಗುತ್ತಿವೆ. ಜೊತೆಗೆ ಸಮುದ್ರ ತೀರದ ತೆಂಗಿನ ಮರಗಳು, ಭೂ ಭಾಗಗಳು ಸಮುದ್ರ ಪಾಲಾಗಿ,  ಕಡಲತೀರದ ನಿವಾಸಿಗಳು ಆತಂಕದಲ್ಲಿ ದಿನ ದೂಡುವಂತಾಗಿದೆ.   ಈ ಭಾಗದಲ್ಲಿ ಕಳೆದ ವರ್ಷ ಕಡಲ್ಕೊರೆತ ದೊಡ್ಡ ಪ್ರಯಾಣದಲ್ಲಿ ಆದಾಗ ಸಂಸದರು, […]

ಕರಾವಳಿ

ಮುಂದಿನ 5 ದಿನಸಮುದ್ರತೀರಕ್ಕೆಪ್ರವೇಶಿಸಿದಂತೆಎಚ್ಚರಿಕೆ

ಮುಂದಿನ 5 ದಿನ ಸಮುದ್ರ ತೀರಕ್ಕೆ ಪ್ರವೇಶಿಸಿದಂತೆ ಎಚ್ಚರಿಕೆ ಮಂಗಳೂರು: ಭಾರತೀಯ ಹವಾಮಾನ ಇಲಾಖೆ  ಕರ್ನಾಟಕದ ಕರಾವಳಿ ಭಾಗದಲ್ಲಿ “ಹೈ ವೇವ್‌ ಅಲರ್ಟ್‌”ನ್ನು ಘೋಷಣೆ ಮಾಡಿದೆ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ಕರಾವಳಿ ತೀರದಲ್ಲಿ ಅರಬ್ಬೀ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಪಶ್ಚಿಮ ಕರಾವಳಿಗೆ “ಬಿಪರ್‌ ಜಾಯ್‌” ಚಂಡಮಾರುತವು ಅಪ್ಪಳಿಸುವ ಸಾಧ್ಯತೆಗಳು ಇರುತ್ತದೆ. ಈ ಚಂಡಮಾರುತದ ತೀವ್ರತೆಯ ಪರಿಣಾಮದಿಂದ ಸಮುದ್ರದ ಅಲೆಗಳ ಎತ್ತರ 3 ರಿಂದ 4 ಮೀ. ನಷ್ಟು ಇರಲಿದ್ದು, […]

ಕರಾವಳಿ

ಉದ್ಯಾವರ : ಶುದ್ಧ ಕುಡಿಯುವ ನೀರಿನ ಘಟಕದ ಲೋಕಾರ್ಪಣೆ

 ಉದ್ಯಾವರ : ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ವೆಂಕಟರಮಣ ಸ್ಪೋರ್ಟ್ಸ್ ಮತ್ತು ಕಲ್ಚರಲ್ (ರಿ) ಪಿತ್ರೋಡಿ, ಉದ್ಯಾವರ ಇವರ ನೇತೃತ್ವದಲ್ಲಿ ಇತ್ತೀಚಿಗೆ ನಿಧನರಾಗಿದ್ದ ಸಂಸ್ಥೆಯ ಮಾಜಿ ಅಧ್ಯಕ್ಷ, ಪ್ರಖ್ಯಾತ ಟೆನ್ನಿಸ್ ಬಾಲ್ ಕ್ರಿಕೆಟಿಗ ಸಿಎ ಮಲ್ಲೇಶ್ ಬಂಗೇರ ಇವರ ಸ್ಮರಣಾರ್ಥ ಶುದ್ಧ ಕುಡಿಯುವ ನೀರಿನ ಘಟಕದ ಲೋಕಾರ್ಪಣೆ ನಡೆಯಿತು. ಉದ್ಯಾವರ ಗ್ರಾಮ ಪಂಚಾಯತ್ ಮೈದಾನದಲ್ಲಿ ಅಳವಡಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ದಿವಂಗತ ಮಲ್ಲೇಶ್ ರವರ ತಾಯಿ ಬೇಬಿ ಬಂಗೇರ ಲೋಕಾರ್ಪಣೆಗೊಳಿಸಿದರು. ಇದೇ ಸಂದರ್ಭದಲ್ಲಿ ದಿವಂಗತ […]

ಅಪರಾಧ

 ಚಂಡಮಾರುತದಿಂದ ಪ್ರಕ್ಷುಬ್ಧಗೊಂಡ ಸಮುದ್ರ; ನೀರುಪಾಲಾದ ಐವರು ಬಾಲಕರು, ಓರ್ವನ ಮೃತದೇಹ ಪತ್ತೆ, ಇಬ್ಬರು ನಾಪತ್ತೆ

ಬಿಪರ್‌ಜೋಯ್ ಚಂಡಮಾರುತದಿಂದ ಪ್ರಕ್ಷುಬ್ಧಗೊಂಡ ಸಮುದ್ರ;ಮುನ್ನೆಚ್ಚರಿಕೆ ಹೊರತೆಗಿಯೂ ಸಮುದ್ರಕ್ಕಿಳಿದ ನೀರುಪಾಲಾದ ಐವರು ಬಾಲಕರು, ಓರ್ವನ ಮೃತದೇಹ ಪತ್ತೆ, ಇಬ್ಬರು ನಾಪತ್ತೆ ಮುಂಬೈ; ಬಿಪರ್‌ಜೋಯ್ ಚಂಡಮಾರುತದ ಪ್ರಭಾವದಿಂದ ಸಮುದ್ರ ಪ್ರಕ್ಷುಬ್ಧವಾಗಿದ್ದು, ನಿನ್ನೆ ಮುಂಬೈನ ಜುಹು ಬೀಚ್‌ನಲ್ಲಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ ಐದು ಜನರಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಐವರಲ್ಲಿ ಒಬ್ಬರು ಮೃತಪಟ್ಟಿದ್ದು, ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಬ್ಬನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಜುಹು ಕೋಳಿವಾಡದಲ್ಲಿ ಘಟನೆ ಸಂಭವಿಸಿದ್ದು, 12 ರಿಂದ 15 ವರ್ಷದೊಳಗಿನ […]

ಕರಾವಳಿ ತಂತ್ರಜ್ಞಾನ

ಉಡುಪಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೊ ಮೋಹನ್ ಅವರ ಚಿತ್ರಕ್ಕೆ ಸ್ವರ್ಣ ಪದಕ

ಉಡುಪಿ:  4 ನೇ ಕ್ರಿಯೇಟಿವ್ ಇಂಟರ್ ನ್ಯಾಷನಲ್ ಛಾಯಾಗ್ರಹಣ ಸ್ಪರ್ಧೆಯಲ್ಲಿ ಉದಯವಾಣಿ ಪತ್ರಿಕೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೊ ಮೋಹನ್ ಅವರ ಚಿತ್ರಕ್ಕೆ ಸ್ವರ್ಣ ಪದಕ ಪ್ರಾಪ್ತವಾಗಿದೆ. ಫೋಟೋ ಟ್ರಾವೆಲ್ ವಿಭಾಗದಲ್ಲಿ ಶ್ರವಣಬೆಳಗೊಳದ ಗೋಮಟಶ್ವರ ಮೂರ್ತಿ ಚಿತ್ರಕ್ಕೆ ಈ ಪ್ರತಿಷ್ಠಿತ ಪುರಸ್ಕಾರ ಲಭಿಸಿದೆ.

ಪ್ರಚಲಿತ

ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ.) ವತಿಯಿಂದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಅಭಿನಂದನಾ ಸಮಾರಂಭ

 ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ.) ವತಿಯಿಂದ ಕಾಪು ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಅಭಿನಂದನಾ ಸಮಾರಂಭ    ಕುಡ್ಲ ಪೆವಿಲಿಯನ್ ಸಭಾಂಗಣದಲ್ಲಿ ನೆರವೇರಿತು.  ಈ ಸಂದರ್ಭದಲ್ಲಿ ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ.) ಸ್ಥಾಪಕಾಧ್ಯಕ್ಷರಾದ ಕೆ. ಸದಾನಂದ, ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ಮೋಹನ್ ಆಳ್ವ, ಡಾ. ಭಾಸ್ಕರ್ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಮೋನಪ್ಪ ಭಂಡಾರಿ, ಉದ್ಯಮಿಗಳಾದ ದೇವಾನಂದ ಶೆಟ್ಟಿ, ಕೆ.ಎಂ.ಎಫ್ ಅಧ್ಯಕ್ಷರಾದ ಸುಚರಿತ ಶೆಟ್ಟಿ, […]

ರಾಜಕೀಯ

ಮಜೂರು ಗ್ರಾಮ ಪಂಚಾಯತ್ ನಲ್ಲಿ ಕಾಪು ಶಾಸಕರಿಂದ ಅಹವಾಲು ಸ್ವೀಕಾರ, ಸವಲತ್ತು ವಿತರಣೆ

ಮಜೂರು ಗ್ರಾಮ ಪಂಚಾಯತಿ ಸಭಾಭವನದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿಯವರು ಮಂಗಳವಾರ ಬೆಳಿಗ್ಗೆ ೧೧ ಗಂಟೆಗೆ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದರು. ಇದೇ ಸಂದರ್ಭ ಶೇಕಡ ೫ ರ ನಿಧಿಯಿಂದ ವಿಕಲಚೇತನರ ಕಲ್ಯಾಣ ನಿಧಿಯ ಸವಲತ್ತು ವಿತರಣೆ,  ಇಂದಿರಾ ಗಾಂಧಿ ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ ಆದೇಶ ಪತ್ರವನ್ನು ವಿತರಿಸಿದರು. ಮಜೂರು ಗ್ರಾಮ ಪಂಚಾಯತ್‌ ವತಿಯಿಂದ  ನೂತನ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರನ್ನುರಿಗೆ ಅಭಿನಂಧಿಸಲಾಯಿತು.  ಈ ಸಂದರ್ಭ ಗುರ್ಮೆ ಸುರೇಶ್‌ ಶೆಟ್ಟಿ ಮಾತನಾಡಿ,   ಅಧಿಕಾರಿಗಳು […]

ಅಪರಾಧ

ಕಾಪುವಿನಲ್ಲಿ ಮಹಿಳೆಯ ಕುತ್ತಿಗೆಯಿಂದ ಚೈನ್‌ ಎಗರಿಸಿ ಪರಾರಿಯಾದ ಕಳ್ಳ

 ಕಾಪು ಸಮೀಪ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ಕಳ್ಳರು ಮದುವೆಗೆ ಹೋಗಿ ವಾಪಸಾಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಚೈನ್‌ ಎಗರಿಸಿ ಪರಾರಿಯಾದ ಘಟನೆ ನಿನ್ನೆ ಸಂಭವಿಸಿದೆ. ಕಾಪು ಬ್ರಾಹ್ಮಣರ ತೋಟ ನಿವಾಸಿ ಶಕುಂತಳಾ ಎಂಬುವವರು ಮದುವೆಗೆ ಹೋಗಿ ವಾಪಸಾಗುತ್ತಿದ್ದಾಗ ಈ ಘಟನೆ ನಡೆದಿದ್ದು, ಅಂದಾಜು ಎಂಟು ಪವನ್‌ ತೂಕದ ಎರಡು ಚಿನ್ನದ ಸರ ಕಳೆದುಕೊಂಡಿದ್ದಾರೆ. ಶಕುಂತಳಾ ಅವರು ಕಾಪು ರಾ. ಹೆ. 66ರ ಪಕ್ಕದ ಸರ್ವೀಸ್‌ ರಸ್ತೆಯಲ್ಲಿ ನಡೆದುಕೊಂಡು ಬಂದು, ಮಾರಿಗುಡಿ ದರ್ಶನ ಪಾತ್ರಿಗಳ ಮನೆ ಬಳಿಯಿಂದ ರಸ್ತೆಯಲ್ಲಿ ಮನೆಗೆ […]

ಕರಾವಳಿ

ಕಾಪುವಿನಲ್ಲಿ ಸಮುದ್ರ ಪ್ರಕ್ಷ್ಯಬ್ಧ: ಸಮುದ್ರಕ್ಕಿಳಿಯದಂತೆ  ತಾಲೂಕು ಆಡಳಿತ ತಾಕೀತು

ಕಾಪುವಿನಲ್ಲಿ ಸಮುದ್ರ ಪ್ರಕ್ಷ್ಯಬ್ಧ: ಸಮುದ್ರಕ್ಕಿಳಿಯದಂತೆ  ತಾಲೂಕು ಆಡಳಿತ ತಾಕೀತು    ಚಂಡ ಮಾರುತದ ಅಬ್ಬರದಿಂದಾಗಿ ಕಾಪುವಿನಲ್ಲೂ ಕಡಲು ಪ್ರಕ್ಷ್ಯಬ್ಧಗೊಂಡಿದೆ. ಆಪ್ರಯುಕ್ತ ಯಾರೂ ಸಮುದ್ರಕ್ಕೆ ಇಳಿಯದಂತೆ ಕಾಪು ತಾಲೂಕು ಆಡಳಿತ ತಾಕೀತು ಮಾಡಿದೆ. ಕಾಪು ಬೀಚ್, ಲೈಟ್ ಹೌಸ್ ಸುತ್ತಮುತ್ತ, ಉಚ್ಚಿಲ, ಮೂಳೂರು, ಪೊಲಿಪು, ಉಳಿಯಾರಗೋಳಿ ಯಾರ್ಡ್ ಬೀಚ್ ಮತ್ತು ಕೈಪುಂಜಾಲ್ ಬೀಚ್‌ಗಳಲ್ಲಿಯೂ ಬೃಹತ್ ಅಲೆಗಳು ಏಳುತ್ತಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಪ್ರಸಿದ್ಧ ಪ್ರವಾಸಿ ತಾಣವಾದ ಕಾಪು ಲೈಟ್ ಹೌಸ್ ಬಳಿ ಸಮುದ್ರ ದೊಡ್ಡದಾಗಿದ್ದು ಬೃಹತ್ ಅಲೆಗಳು ಮೇಲೇಳುತ್ತಾ […]

ಕರಾವಳಿ

ಉಡುಪಿ ಶಾಸಕ ಯಶ್ಪಾಲ್‌ ಸುವರ್ಣರೊಂದಿಗೆ ಮೀನುಗಾರಿಕಾ ಇಲಾಖೆ,  ಬಂದರು ಇಲಾಖೆಯ ಅಧಿಕಾರಿಗಳು ಹಾಗೂ ಮೀನುಗಾರ ಸಂಘಟನೆಯ ಪ್ರಮುಖರ ಸಭೆ

ಉಡುಪಿ ಶಾಸಕ ಯಶ್ಪಾಲ್‌ ಸುವರ್ಣರೊಂದಿಗೆ ಮೀನುಗಾರಿಕಾ ಇಲಾಖೆ,  ಬಂದರು ಇಲಾಖೆಯ ಅಧಿಕಾರಿಗಳು ಹಾಗೂ ಮೀನುಗಾರ ಸಂಘಟನೆಯ ಪ್ರಮುಖರ ಸಭೆ ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ  ಯಶ್ ಪಾಲ್ ಸುವರ್ಣ ರವರು ಮಲ್ಪೆ ಮೀನುಗಾರರ ಸಂಘದ ಸಭಾಂಗಣದಲ್ಲಿ ಮೀನುಗಾರಿಕೆ ಇಲಾಖೆ ಮತ್ತು ಬಂದರು ಇಲಾಖೆಯ ಅಧಿಕಾರಿಗಳು ಹಾಗೂ ಮೀನುಗಾರ ಸಂಘಟನೆಯ ಪ್ರಮುಖರೊಂದಿಗೆ  ಸಭೆ ನಡೆಸಿದರು.  ಸಭೆಯಲ್ಲಿ ಮುಂದಿನ ಮೀನುಗಾರಿಕಾ ಋತುವಿನ ಚಟುವಟಿಕೆಗೆ ಪೂರಕವಾಗಿ ಪಾಸ್ ಬುಕ್ ನವೀಕರಣ, ಬಂದರು ಸ್ವಚ್ಚತೆ, ಭದ್ರತೆ ಹಾಗೂ ಸುವ್ಯಸ್ಥಿತ ನಿರ್ವಹಣೆಗೆ ಸ್ಥಳೀಯ […]

eMedia Kannada  @2025. All Rights Reserved.