ಸಾಲಿಗ್ರಾಮ – ಪಾರಂಪಳ್ಳಿ ಸಂಪರ್ಕಿಸುವ ರಸ್ತೆ ಅವ್ಯವಸ್ಥೆ ವಿರುದ್ಧ ನಾಟಿ ನೆಟ್ಟು ಪ್ರತಿಭಟನೆ
ಸಾಲಿಗ್ರಾಮ – ಪಾರಂಪಳ್ಳಿ ಸಂಪರ್ಕಿಸುವ ನಗರಿಹಳ್ಳ ಕೆರೆ ಸಮೀಪದ ರಸ್ತೆ ಅವ್ಯವಸ್ಥೆ ವಿರುದ್ಧ ನಾಟಿಗೈದು ಪ್ರತಿಭಟನೆ ಕೋಟ: ಇಲ್ಲಿನ ಸಾಲಿಗ್ರಾಮ ಪಟ್ಟಣಪಂಚಾಯತ್ ಹಾಗೂ ಕೋಟತಟ್ಟು ಗ್ರಾಮಪಂಚಾಯತ್ ನಡುವಿನ ನಗರಿಹಳ್ಳ ರಸ್ತೆ ಕೆಸರಿನಿಂದ ಆವರಿಸಿದ್ದು, ಅತ್ತ ಸಾಲಿಗ್ರಾಮ ಪ.ಪಂ ಇತ್ತ ಕೋಟತಟ್ಟು ಗ್ರಾಮ ಪಂಚಾಯತ್ ಇದರ ಬಗ್ಗೆ ಮುತುವರ್ಜಿ ವಹಿಸದೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಶೇಕಡಾ ೯೦ರಷ್ಟು ರಸ್ತೆ ಸಾಲಿಗ್ರಾಮ ಪ.ಪಂ ವ್ಯಾಪ್ತಿಯನ್ನು ಹೊಂದಿದ್ದು, ಕಳೆದ ಸಾಕಷ್ಟು ವರ್ಷಗಳಿಂದ ರಸ್ತೆ ಅವ್ಯವಸ್ಥೆ ಆಗರವಾಗಿ ಜನ ಸಾಮಾನ್ಯರಿಗೆ ಸಂಚರಿಸಲು ಕ್ಲಿಷ್ಟಕರವಾಗಿದೆ. […]






