Tag: police

ಅಪರಾಧ

ಚಂದ್ರಬಾಬು ನಾಯ್ಡುಗೆ 14 ದಿನಗಳ ನ್ಯಾಯಾಂಗ ಬಂಧನ

ಚಂದ್ರಬಾಬು ನಾಯ್ಡುಗೆ 14 ದಿನಗಳ ನ್ಯಾಯಾಂಗ ಬಂಧನ ವಿಜಯವಾಡ : ತೆಲುಗು ದೇಶಂ ಪಕ್ಷದ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಅವರನ್ನು ಭ್ರಷ್ಟಾಚಾರ ಆರೋಪದ ಪ್ರಕರಣದಲ್ಲಿ ಸೆಪ್ಟೆಂಬರ್ 10 ರಂದು ವಿಜಯವಾಡದ ಭ್ರಷ್ಟಾಚಾರ ವಿರೋಧಿ ಬ್ಯೂರೋ ನ್ಯಾಯಾಲಯವು ಸೆ 23 ರವರೆಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಕಾನೂನು ಸುವ್ಯವಸ್ಥೆಯ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸಂಬಂಧಿಸಿದ ಅಧಿಕಾರಿಗಳು ಸಿಆರ್‌ಪಿಸಿಯ ಸೆಕ್ಷನ್ 144 ಅನ್ನು ವಿಧಿಸಿದ್ದಾರೆ. ಇನ್ನು ಆಂಧ್ರ ರಾಜ್ಯಾದ್ಯಂತ, ಮತ್ತು ಜನರು ಗುಂಪುಗಳಾಗಿ ಚಲಿಸದಂತೆ ಮತ್ತು ಯಾವುದೇ ಮಾರಣಾಂತಿಕ ಆಯುಧಗಳನ್ನು […]

ರಾಜಕೀಯ

ಚಂದ್ರಬಾಬು ನಾಯ್ಡು ಬಂಧನ: ರಸ್ತೆಯಲ್ಲೇ ಮಲಗಿ ಪವನ್ ಕಲ್ಯಾಣ್ ಪ್ರತಿಭಟನೆ – ಪೊಲೀಸ್ ವಶಕ್ಕೆ

 ಚಂದ್ರಬಾಬು ನಾಯ್ಡು ಬಂಧನ: ರಸ್ತೆಯಲ್ಲೇ ಮಲಗಿ ಪವನ್ ಕಲ್ಯಾಣ್ ಪ್ರತಿಭಟನೆ – ಪೊಲೀಸ್ ವಶಕ್ಕೆ  ಆಂಧ್ರಪ್ರದೇಶ, ಸೆ 10 : ಆಂಧ್ರಪ್ರದೇಶ ಪೊಲೀಸರು ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಮತ್ತು ಅದರ ಹಿರಿಯ ನಾಯಕ ನಾದೆಂಡ್ಲಾ ಮನೋಹರ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪವನ್ ಕಲ್ಯಾಣ್ ಅವರನ್ನು ವಿಜಯವಾಡಕ್ಕೆ ಸ್ಥಳಾಂತರಿಸಲಾಗುತ್ತಿದ್ದು, ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಪವನ್ ಕಲ್ಯಾಣ್ ಅವರು ಶನಿವಾರ ನಂದ್ಯಾಲದಲ್ಲಿ ನಡೆದ […]

ಅಪರಾಧ

ಚಿಕ್ಕೋಡಿ ರಸ್ತೆ ಅಪಘಾತದಲ್ಲಿ ಭಾರತೀಯ ಯೋಧ ಸಾವು

ಚಿಕ್ಕೋಡಿ ರಸ್ತೆ ಅಪಘಾತದಲ್ಲಿ ಭಾರತೀಯ ಯೋಧ ಸಾವು ಬೆಳಗಾವಿ : ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧನೊಬ್ಬ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಗುರುವಾರ ತಡರಾತ್ರಿ ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದಿದೆ. ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಯೋಧ ಲಕ್ಷಣ ಮೃತ ದುರ್ದೈವಿ.  ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಲಕ್ಷ್ಮಣ ರಜೆ ಹಿನ್ನಲೆಯಲ್ಲಿ ಸ್ವ ಗ್ರಾಮಕ್ಕೆ ಆಗಮಿಸಿದ್ದರು.  ಬೈಕ್ ನಲ್ಲಿ ತೆರಳುವಾಗ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸಹ ಸವಾರ ಯುವಕ ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತ ಯೋಧನ […]

ಅಪರಾಧ

  ಮಲ್ಪೆ ರಾಷ್ಟ್ರಮಟ್ಟದ ಬಾಕ್ಸಿಂಗ್ ಪಟು ಆತ್ಮಹತ್ಯೆ

  ಮಲ್ಪೆ ರಾಷ್ಟ್ರಮಟ್ಟದ ಬಾಕ್ಸಿಂಗ್ ಪಟು ಆತ್ಮಹತ್ಯೆ  ಉಡುಪಿ: ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಶಾಂತಿನಗರದ ನಿವಾಸಿ, ಬಾಕ್ಸಿಂಗ್ ಕ್ಷೇತ್ರದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಘಟಸಿದೆ.  ಶಾಂತಿನಗರ ನಿವಾಸಿ ವಿರಾಜ್ ಮೆಂಡನ್ (29) ಆತ್ಮಹತ್ಯೆ ಮಾಡಿಕೊಂಡ ಯುವಕ. ಇತ್ತೀಚೆಗೆ ವಿರಾಜ್‌ ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ. ಮಲ್ಪೆ ಶಾಂತಿನಗರದಲ್ಲಿರುವ ತಮ್ಮ ಮನೆಯ ಕೊಠಡಿಯಲ್ಲಿ ನೇಣು ಬಿಗಿದು ವಿರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಅಸಹಜ […]

ಅಪರಾಧ

ಉಡುಪಿ: ಭಿಕ್ಷಾಟನೆ ನಡೆಸುತ್ತಿದ್ದ 16 ಮಂದಿಯ ರಕ್ಷಣೆ

ಉಡುಪಿ: ಭಿಕ್ಷಾಟನೆ ನಡೆಸುತ್ತಿದ್ದ 16 ಮಂದಿಯ ರಕ್ಷಣೆ ಉಡುಪಿ: ಭಿಕ್ಷಾಟನಾ ನಿಷೇಧ ಕಾಯಿದೆ ಅನ್ವಯ ಭಿಕ್ಷಾಟನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ  ಉಡುಪಿ ನಗರದ ವಿವಿಧೆಡೆ ಭಿಕ್ಷಾಟನೆ ನಡೆಸುತ್ತಿದ್ದ 16 ಮಂದಿ ನಿರಾಶ್ರಿತರನ್ನು ರಕ್ಷಿಸಲಾಗಿದೆ.  ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕರು ಹಾಗೂ ಕಾರ್ಯಪಾಲಕ ಸಿಬ್ಬಂದಿ ವರ್ಗ ಹಾಗೂ ಸಮಾಜ ಸೇವಕ ನಿತ್ಯಾನಂದ ಒಳಕಾಡು ಸಹಕಾರದೊಂದಿಗೆ ನಗರದ ಕೃಷ್ಣ ಮಠ, ಸರ್ವಿಸ್ ಬಸ್ ನಿಲ್ದಾಣ ಹಾಗೂ ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷಾಟನೆಯನ್ನು ಮಾಡುತಿದ್ದ 16 ಮಂದಿ ನಿರಾಶ್ರಿತರನ್ನು […]

ಅಪರಾಧ ದೇಶ-ವಿದೇಶ

ಉತ್ತರ ಪ್ರದೇಶ: ಕೇಂದ್ರ ಸಚಿವರ ಮನೆಯಲ್ಲಿ ಶವ ಪತ್ತೆ; ಸಚಿವರ ಮಗನ ಬಂದೂಕಿನಿಂದಲೇ ಗುಂಡಿನ ದಾಳಿ

ಉತ್ತರ ಪ್ರದೇಶ: ಕೇಂದ್ರ ಸಚಿವರ ಮನೆಯಲ್ಲಿ ಶವ ಪತ್ತೆ; ಸಚಿವರ ಮಗನ ಬಂದೂಕಿನಿಂದಲೇ ಗುಂಡಿನ ದಾಳಿ ಲಕ್ನೋ: ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದ ಕೌಶಲ್ ಕಿಶೋರ್ ಅವರ ನಿವಾಸದಲ್ಲಿ 30 ವರ್ಷದ ವ್ಯಕ್ತಿಯ ಶವ ಪತ್ತೆಯಾಗಿದೆ.  ಗುಂಡೇಟಿನಿಂದ ಈ ವ್ಯಕ್ತಿ ಮೃತಪಟ್ಟಿದ್ದು, ಗುಂಡಿನ ದಾಳಿಗೆ ಬಳಸಿದ ಪಿಸ್ತೂಲ್ ಸಚಿವರ ಪುತ್ರ ವಿಕಾಸ್ ಕಿಶೋರ್ ಅವರದ್ದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಪಶ್ಚಿಮ ಲಕ್ನೋದ ಉಪ ಪೊಲೀಸ್ ಆಯುಕ್ತ ರಾಹುಲ್ ರಾಜ್, ಮೃತರನ್ನು ವಿನಯ್ […]

ಅಪರಾಧ ದೇಶ-ವಿದೇಶ

21ವರ್ಷದ ಗರ್ಭಿಣಿ ಮಹಿಳೆಯ ಗುಂಡಿಟ್ಟು ಹತ್ಯೆ ;  ಅಮೇರಿಕಾ ಪೊಲೀಸರ ಕೃತ್ಯ

21ವರ್ಷದ ಗರ್ಭಿಣಿ ಮಹಿಳೆಯ ಗುಂಡಿಟ್ಟು ಹತ್ಯೆ ;  ಅಮೇರಿಕಾ ಪೊಲೀಸರ ಕೃತ್ಯ ವಾಷಿಂಗ್ಟನ್ ; ಕಳ್ಳತನದ ಆರೋಪದಲ್ಲಿ 21 ವರ್ಷದ ಗರ್ಭಿಣಿ ಮಹಿಳೆಯನ್ನು ಪೊಲೀಸರು ಗುಂಡಿಕ್ಕಿ ಹತ್ಯೆಗೈದ ಘಟನೆ ಅಮೆರಿಕದ ಓಹಿಯೊ ರಾಜ್ಯದಲ್ಲಿ ನಡೆದಿದೆ.  ವೆಸ್ಟರ್‌ವಿಲ್ಲೆಯಲ್ಲಿನ ಕಿರಾಣಿ ಅಂಗಡಿಯ ಬಳಿ ಟಾಕಿಯಾ ಯಂಗ್ ಎಂಬ ಗರ್ಭಿಣಿ ಕಾರಿನಲ್ಲಿ ಕುಳಿತಿದ್ದಾಗ ಅಲ್ಲಿಗೆ ಬಂದ ಪೊಲೀಸರು ಆಕೆಯನ್ನು ತಡೆದಿದ್ದಾರೆ‌.  ಮಹಿಳೆ ಅಂಗಡಿಯಿಂದ ಮದ್ಯದ ಬಾಟಲಿಗಳನ್ನು ಕದ್ದಿರುವುದಾಗಿ ಅಂಗಡಿಯವರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ತಪಾಸಣೆಗೆ ಬಂದಿದ್ದು, ಮಹಿಳೆ ಇದನ್ನು ನಿರಾಕರಿಸಿ […]

ಅಪರಾಧ

  ಪಡುಬಿದ್ರಿ: ಟ್ಯಾಂಕರ್- ಸ್ಕೂಟರ್ ಅಪಘಾತ -ಗಂಭೀರ ಗಾಯಗೊಂಡಿದ್ದ ಸಹ ಸವಾರ ಮೃತ್ಯು

ಪಡುಬಿದ್ರಿ: ಟ್ಯಾಂಕರ್- ಸ್ಕೂಟರ್ ಅಪಘಾತ -ಗಂಭೀರ ಗಾಯಗೊಂಡಿದ್ದ ಸಹ ಸವಾರ ಮೃತ್ಯು  ಪಡುಬಿದ್ರಿ:  ಹೆಜಮಾಡಿ  ಕನ್ನಂಗಾರಿನಲ್ಲಿ ರಶಹೆ ೬೬ರಲ್ಲಿ ಸ್ಕೂಟರ್‌ ಮತ್ತು ಟ್ಯಾಂಕರ್‌ ಮಧ್ಯೆ ನಡೆದ  ಅಪಘಾತದಲ್ಲಿ ಸ್ಕೂಟರ್‌ನ ಸಹ ಸವಾರ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಇಂದು ಮೃತಪಟ್ಟಿದ್ದಾರೆ. ಮೃತ ಯುವಕ ಜಾರ್ಖಂಡ್‌  ಮೂಲದ ಹೆಜಮಾಡಿ ಬ್ರಹ್ಮಸ್ಥಾನ ಬಳಿ ಬಾಡಿಗೆ ಮನೆಯೊಂದರ  ನಿವಾಸಿ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಸದ್ದಾಂ ಅನ್ಸಾರಿ (20). ಸ್ಕೂಟರ್‌ ಸವಾರ ಪರ್ವೇಜ್ ಸಣ್ಣ ಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.   ತಮ್ಮ ಮನೆಯಿಂದ […]

ಅಪರಾಧ

ಬಂಟ್ವಾಳ: ಕು| ಭಾರತಿ, ಶಿವಪ್ಪ ಬಂಗೇರ ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹ

ಬಂಟ್ವಾಳ: ಕು| ಭಾರತಿ, ಶಿವಪ್ಪ ಬಂಗೇರ ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹ ಬಂಟ್ವಾಳ: ಸೌಜನ್ಯ ಕೊಲೆ ಪ್ರಕರಣದ ಹೋರಾಟದ ಬಿಸಿಯ ಜೊತೆ 20 ವರ್ಷಗಳ ಹಿಂದೆ ನಡೆದ ಬಂಟ್ವಾಳದ ಸಿದ್ಧಕಟ್ಟೆಯ ಕು|ಭಾರತಿ ಕೊಲೆ ಮತ್ತು ದಲಿತ ಮುಖಂಡ ಬಾಂಬಿಲ ಶಿವಪ್ಪ ಬಂಗೇರ ಕೊಲೆ ಪ್ರಕರಣದ ಮರು ತನಿಖೆ ನಡೆಸಲು ಒತ್ತಾಯಿಸಿ  ಶುಕ್ರವಾರ ಬಂಟ್ವಾಳ ತಹಶಿಲ್ದಾರರ ಮೂಲಕ ಮಾಜಿ ಜಿ.ಪಂ. ಉಪಾಧ್ಯಕ್ಷರಾದ ಯಂ. ತುಂಗಪ್ಪ ಬಂಗೇರರ ನೇತೃತ್ವದಲ್ಲಿ ಮುಖ್ಯಮಂತ್ರಿಗೆ  ಮನವಿ ನೀಡಲಾಯಿತು.  ಈ ಸಂಧರ್ಭದಲ್ಲಿ ಪಿಲಾತಬೆಟ್ಟು ಗ್ರಾ. […]

ಅಪರಾಧ

ಕಾಪು ಪೊಲೀಸರಿಂದ ಚಿನ್ನಾಭರಣ ಕಳ್ಳನ ಬಂಧನ, ಲಕ್ಷಾಂತರ ಮೌಲ್ಯದ ಸೊತ್ತು ವಶ

ಕಾಪು ಪೊಲೀಸರಿಂದ ಚಿನ್ನಾಭರಣ ಕಳ್ಳನ ಬಂಧನ, ಲಕ್ಷಾಂತರ ಮೌಲ್ಯದ ಸೊತ್ತು ವಶ ಉಡುಪಿ: ಉದ್ಯಾವರ ಬೊಳ್ಜೆ ನಿವಾಸಿ ಅನಿತಾ ಡಿ. ಸಿಲ್ವಾ ಅವರ ಮನೆಯಲ್ಲಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕಳ್ಳನನ್ನು ಕಾಪು ಪೊಲೀಸರು ಬಂಧಸಿದ್ದು ಚಿನ್ನಾಭರಣ, ನಗದು, ಸ್ಕೂಟಿ ಸಹಿತ ೮,೦೨,೦೮೩ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕಟಪಾಡಿ ಏಣಗುಡ್ಡೆ ಗ್ರಾಮದ ಅಚ್ಚಡ ನಿವಾಸಿ ಜೋನ್ ಪ್ರಜ್ವಲ್ ಫೆರ್ನಾಂಡಿಸ್ (೩೨) ಬಂಧಿತ ಆರೋಪಿ. ಬಂಧಿತನಿಂದ ೬,೯೦,೭೧೩ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು, ಮೋಟಾರು ಸೈಕಲ್ ಸಹಿತ ಬೆಲೆಬಾಳುವ […]

eMedia Kannada  @2025. All Rights Reserved.