Tag: police

ಅಪರಾಧ

ಚೈತ್ರಾ ವಂಚನೆ ಪ್ರಕರಣ: ಕುಂದಾಪುರ ಹೆಸರು ಬಳಸದಂತೆ ಗಣೇಶ್‌ ಎಂಬವರಿಂದ ಕೋರ್ಟ್‌ಗೆ​​ ಮೊರೆ

ಚೈತ್ರಾ ವಂಚನೆ ಪ್ರಕರಣ: ಕುಂದಾಪುರ ಹೆಸರು ಬಳಸದಂತೆ ಗಣೇಶ್‌ ಎಂಬವರಿಂದ ಕೋರ್ಟ್‌ಗೆ​​ ಮೊರೆ ಬೆಂಗಳೂರು  : ವಿಧಾನಸಭಾ ಚುನಾವಣೆಗೆ ಟಿಕೆಟ್​ ಕೊಡಿಸುವುದಾಗಿ ಹೇಳಿ ಉದ್ಯಮಿ ಗೋವಿಂದ ಬಾಬು ಪೂಜಾರಿಯವರಿಂದ ಕೋಟ್ಯಾಂತರ ರೂ. ವಂಚನೆ ನಡೆಸಿರುವ ಪ್ರಕರಣದಲ್ಲಿ ಚೈತ್ರಾ ಹೆಸರಿನ ಜೊತೆಗೆ ‘ಕುಂದಾಪುರ’ ಹೆಸರನ್ನು ಬಳಸದಂತೆ ವ್ಯಕ್ತಿಯೊಬ್ಬರು ಕೋರ್ಟ್​ ಮೊರೆ ಹೋಗಿದ್ದಾರೆ. ಸಾಮಾಜಿಕ ಜಾಲತಾಣ ಹಾಗೂ ಮಾದ್ಯಮಗಳಲ್ಲಿ ಕುಂದಾಪುರ ಹೆಸರು ತೆಗೆದುಹಾಕುವಂತೆ ಕೋರಿ ನಗರದ ಸಿಟಿ ಸಿವಿಲ್​ ಕೋರ್ಟ್​ಗೆ ಕುಂದಾಪುರ ಮೂಲದ ಉದ್ಯಮಿ, ಪ್ರಸ್ತುತ ಬೆಂಗಳೂರು ಹನುಮಂತ ನಗರದ ನಿವಾಸಿ […]

ಅಪರಾಧ ವಿಡಿಯೋ

  ಮತ್ತೊಂದು ಪ್ರಕರಣ ಬೆಳಕಿಗೆ: ಬಟ್ಟೆ ಅಂಗಡಿ ಹಾಕಿಕೊಡುವುದಾಗಿ ಐದು ಲಕ್ಷ ವಂಚಿಸಿದ ಚೈತ್ರಾ ಕುಂದಾಪುರ

ಮತ್ತೊಂದು ಪ್ರಕರಣ ಬೆಳಕಿಗೆ: ಬಟ್ಟೆ ಅಂಗಡಿ ಹಾಕಿಕೊಡುವುದಾಗಿ ಐದು ಲಕ್ಷ ವಂಚಿಸಿದ ಚೈತ್ರಾ ಕುಂದಾಪುರ   ಉಡುಪಿ: ಉದ್ಯಮಿ ಗೋವಿಂದ ಬಾಬು ಪೂಜಾರಿಯವರಿಗೆ ಬಿಜೆಪಿ ಎಮ್ ಎಲ್ ಎ ಟಿಕೇಟ್ ನೀಡುವುದಾಗಿ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣದ ಬೆನ್ನಲ್ಲೇ ಚೈತ್ರಾ ಕುಂದಾಪುರ ಇನ್ನೋರ್ವ ವ್ಯಕ್ತಿಗೆ ವಂಚಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.  ಕೋಟದ ವ್ಯಕ್ತಿಯೋರ್ವರಿಗೆ ಬಟ್ಟೆ ಅಂಗಡಿಯನ್ನು ಹಾಕಿಕೊಡುವುದಾಗಿ ನಂಬಿಸಿ ಅವರಿಂದ ಸುಮಾರು ಐದು ಲಕ್ಷ ರೂಪಾಯಿಯನ್ನು ಪಡೆದು ಬಟ್ಟೆ ಅಂಗಡಿಯನ್ನು ಹಾಕಿ ಕೊಡದೆ, ಬಳಿಕ ಹಣವನ್ನೂ ಮರಳಿಸದೆ […]

ಅಪರಾಧ

ಬಂಟ್ವಾಳದಲ್ಲಿ ಹಾಡುಹಗಲೇ ಮನೆಕಳ್ಳತನ‌: ಆರೋಪಿಗಳಿಬ್ಬರ ಬಂಧನ: 15,56 ಲ.ರೂ.ಮೌಲ್ಯದ ಸೊತ್ತು ವಶ

ಬಂಟ್ವಾಳದಲ್ಲಿ ಹಾಡುಹಗಲೇ ಮನೆಕಳ್ಳತನ‌: ಆರೋಪಿಗಳಿಬ್ಬರ ಬಂಧನ: 15,56 ಲ.ರೂ.ಮೌಲ್ಯದ ಸೊತ್ತು ವಶ  ದ.ಕ\ಬಂಟ್ವಾಳ: ಹಾಡುಹಗಲೇಮನೆಯಿಂದ ಚಿನ್ನಾಭರಣ ಕಳವುಗೈದ ಕುಖ್ಯಾತ ಚೋರರಿಬ್ಬರನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.  ಬಂಧಿತರನ್ನು ಮಂಗಳೂರು ತಾಲೂಕಿನ‌ ಕಸಬಾ ಬೆಂಗ್ರೆಯ ಮಸೀದಿ ಬಳಿಯ ಬೆಂಗ್ರೆ ಭದ್ರಪಳ್ಳಿ ನಿವಾಸಿ ಮಹಮ್ಮದ್ ಆಯೂಬ್ ಎಂಬವರ ಪುತ್ರ ಫರಾಜ್ (27) ಹಾಗೂ ಸುರತ್ಕಲ್ ಚೊಕ್ಕಬೆಟ್ಟು,ಕೃಷ್ಣಾಪುರ ನಿವಾಸಿ ಅಬ್ಬಾಸ್ ಎಂಬವರ ಪುತ್ರ ತೌಸಿಫ್ ಆಹಮ್ಮದ್ (34) ಎಂದು ಹೆಸರಿಸಲಾಗಿದೆ.ಬಂಧಿತ ಆರೋಪಿಗಳಿಂದ 12,23,000 ರೂ.ಮೌಲ್ಯದ 223 ಗ್ರಾಂ ಚಿನ್ನಾಭರಣ, 3000 […]

ಅಪರಾಧ

ಕಟಪಾಡಿಯ ಮಣಿಪುರದಲ್ಲಿ ಪತಿ ಮೈಮೇಲೆ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರು ಎರಚಿದ ಪತ್ನಿ

ಕಟಪಾಡಿಯ ಮಣಿಪುರದಲ್ಲಿ ಪತಿ ಮೈಮೇಲೆ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರು ಎರಚಿದ ಪತ್ನಿ ಕಾಪು\ಉಡುಪಿ:  ಕ್ಷುಲ್ಲಕ ಕಾರಣಕ್ಕಾಗಿ ಪತ್ನಿ ತನ್ನ ಪತಿಯ ಮೈಮೇಲೆ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರನ್ನು ಎರಚಿ ಗಂಭೀರವಾಗಿ ಗಾಯಗೊಳಿಸಿರುವ ಅಮಾನವೀಯ ಘಟನೆ  ಕಟಪಾಡಿ ಸಮೀಪದ ಮಣಿಪುರ ಗ್ರಾಮದ ಗುಜ್ಜಿ ಎಂಬಲ್ಲಿ ನಡೆದಿದೆ.  ಮುಖ, ದೇಹ, ಎಡಗೈ, ಎದೆ, ಬೆನ್ನು ಬಲಕೈ ಸುಟ್ಟು ಹೋಗಿ ಗಂಭೀರವಾಗಿ ಗಾಯಗೊಂಡಿರುವ ಇನ್ನಾ ಮಡ್ಮಣ್ ನಿವಾಸಿ ಮುಹಮ್ಮದ್ ಆಸೀಫ್(22) ಎಂಬವರು ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ […]

ಅಪರಾಧ

ಗೋವಿಂದ ಬಾಬು ಪೂಜಾರಿ ವಿರುದ್ಧ ಇಡಿಗೆ ಪತ್ರ ಬರೆದಿದ್ಲು ಚೈತ್ರಾ ಕುಂದಾಪುರ

ಗೋವಿಂದ ಬಾಬು ಪೂಜಾರಿ ವಿರುದ್ಧ ಇಡಿಗೆ ಪತ್ರ ಬರೆದಿದ್ಲು ಚೈತ್ರಾ ಕುಂದಾಪುರ ಬೆಂಗಳೂರು: ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಂದ ಐದು ಕೋಟಿ ರೂಪಾಯಿ ಹಣ ಪಡೆದ ಬಳಿಕ ಟಿಕೆಟ್ ಹಂಚಿಕೆಯಾಗದ ಹಿನ್ನೆಲೆಯಲ್ಲಿ ವಂಚಿಸಿದ್ದ ಹಣ ವಾಪಾಸ್ ಕೇಳಿದ್ದ ಗೋವಿಂದ ಬಾಬು ಪೂಜಾರಿ ಅವರಿಗೆ ಖೆಡ್ಡಾ ತೋಡಲು ಚೈತ್ರಾ ಕುಂದಾಪುರ ಮುಂದಾಗಿದ್ದ ವಿಚಾರ ಬಯಲಾಗಿದೆ.  ಗೋವಿಂದ ಬಾಬು ಪೂಜಾರಿ ಅವರು ಹಣ ಮರಳಿ ಕೇಳುವ ಇಲ್ಲವೇ ಪೋಲಿಸ್ ದೂರು ದಾಖಲಿಸುವ ಬಗ್ಗೆ ಮಾತುಕತೆ ಆಡುತ್ತಿದ್ದಾಗಲೇ ಈ‌ ಕಿಲಾಡಿ […]

ಅಪರಾಧ

ಉದ್ಯಮಿಗೆ ವಿಧಾನಸಭೆ ಟಿಕೆಟ್ ಕೊಡಿಸುವ ಪ್ರಕರಣ:  ಅಭಿನವ ಹಾಲಶ್ರೀ ಯವರಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ

ಉದ್ಯಮಿಗೆ ವಿಧಾನಸಭೆ ಟಿಕೆಟ್ ಕೊಡಿಸುವ ಪ್ರಕರಣ:  ಅಭಿನವ ಹಾಲಶ್ರೀ ಯವರಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ  ಬೆಂಗಳೂರು : ಉದ್ಯಮಿಗೆ ವಿಧಾನಸಭೆ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 3ನೇ ಆರೋಪಿ ಅಭಿನವ ಹಾಲಶ್ರೀ ಕೊರ್ಟ್ ಮೊರೆ ಹೋಗಿದ್ದಾರೆ.  ಬಂಧನದ ಭೀತಿಯಿಂದ ತಲೆಮರೆಸಿಕೊಂಡಿರುವ ಅಭಿನವ ಹಾಲಶ್ರೀ ಅಜ್ಞಾತ ಸ್ಥಳದಿಂದಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಅಭಿನವ ಹಾಲಶ್ರೀ ಪರ ವಕೀಲರು 57ನೇ CCH ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.  MLA ಟಿಕೆಟ್ ಡೀಲಿಂಗ್ ಹಿಂದೆ ಇರೋ […]

ಅಪರಾಧ

ಮೂಲ್ಕಿಯಲ್ಲಿ ಭೀಕರ ಬೈಕ್-ಕಾರು ಅಪಘಾತ – ಯುವತಿ ದುರ್ಮರಣ

ರಾಷ್ಟ್ರೀಯ ಹೆದ್ದಾರಿ 66ರ ಮೂಲ್ಕಿ ವಿಜಯ ಸನ್ನಿಧಿ ಜಂಕ್ಷನ್ ಬಳಿ ಬೈಕ್‌ಗೆ ಕಾರು ಡಿಕ್ಕಿಯಾಗಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಸಹಸವಾರೆ ಕೊನೆಯುಸಿರೆಳೆದು ಸವಾರ ಗಾಯಗೊಂಡ ಘಟನೆ ಶುಕ್ರವಾರ ಸಾಯಂಕಾಲ ಸಂಭವಿಸಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬೈಕ್‌ಗೆ ಮೂಲ್ಕಿ ರಾಷ್ಟ್ರೀಯ ಹೆದ್ದಾರಿ ವಿಜಯ ಸನ್ನಿಧಿ ಬಳಿ ಕಿನ್ನಿಗೋಳಿ ಕಡೆಯಿಂದ ಮೂಲ್ಕಿ ಕಡೆಗೆ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಹೋಂಡಾ ಕಾರು ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಕಾರು ಬೈಕನ್ನು ದೂಡಿಕೊಂಡು ಹೋಗಿದ್ದು, ಬೈಕ್ ಹಿಂಭಾಗದಲ್ಲಿ ಕುಳಿತಿದ್ದ ಸಹಸವಾರ ಪ್ರೀತಿಕಾ ಶೆಟ್ಟಿ […]

ಅಪರಾಧ ವಿಡಿಯೋ

 ಬಟ್ಟೆ ತೊಳೆಯುವ ಸಾಬೂನಿನ ನೊರೆ ಬಾಯಿಗೆ ಹಾಕಿ ಮೂರ್ಚೆ ಹೋದಂತೆ ನಟಿಸಿದ ಚೈತ್ರಾ – ಸಿಸಿಬಿ ಪೋಲಿಸರ ಮುಂದೆ ನಾಟಕ

ಬಟ್ಟೆ ತೊಳೆಯುವ ಸಾಬೂನಿನ ನೊರೆ ಬಾಯಿಗೆ ಹಾಕಿ ಮೂರ್ಚೆ ಹೋದಂತೆ ನಟಿಸಿದ ಚೈತ್ರಾ – ಸಿಸಿಬಿ ಪೋಲಿಸರ ಮುಂದೆ ನಾಟಕ ಬೆಂಗಳೂರು: ಬಹುಕೋಟಿ ವಂಚನೆಯ ಬೃಹನ್ನಾಟಕ ಸೂತ್ರಧಾರಿ ಚೈತ್ರಾ ಕುಂದಾಪುರ ಸಿಸಿಬಿ ಪೋಲಿಸರ ಮುಂದೆ ಮತ್ತೊಂದು ನಾಟಕ ಮಾಡಿರುವ ಅನುಮಾನ ಮೂಡಿದೆ‌.   ಇಂದು ಮುಂಜಾನೆ ಮೂರ್ಚೆ ಬಂದಂತೆ ನಟಿಸಿದ್ದ ಚೈತ್ರಾ ಬಾಯಲ್ಲಿ ನೊರೆ ಬರಲು ಬಟ್ಟೆ ತೊಳೆಯುವ ಸಾಬೂನಿನ ನೊರೆ ಹಾಕಿಕೊಂಡ ಶಂಕೆ ವ್ಯಕ್ತವಾಗಿದೆ.  ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಸಿಬಿ ಕಚೇರಿಯಲ್ಲಿರುವ ವಾಶ್​ ರೂಮ್ ಅನ್ನು ಪೊಲೀಸರು […]

ಅಪರಾಧ

UDUPI BREAKING NEWS…..ಗ್ರಾನೈಟ್ ಅನ್ ಲೋಡ್ ಮಾಡುವಾಗ ಅವಘಡ- ಇಬ್ಬರು ಒಡಿಸಾ ಮೂಲದ ಕಾರ್ಮಿಕರ ದಾರುಣ ಸಾವು

ಗ್ರಾನೈಟ್ ಅನ್ ಲೋಡ್ ಮಾಡುವಾಗ ಅವಘಡ- ಇಬ್ಬರು ಒಡಿಸಾ ಮೂಲದ ಕಾರ್ಮಿಕರ ದಾರುಣ ಸಾವು  ಮಲ್ಪೆ: ಮಲ್ಪೆ ಸಮೀಪದ ತೊಟ್ಟಂ ಎಂಬಲ್ಲಿ ಭಾರೀ ಅವಘಡ ಸಂಭವಿಸಿದ್ದು, ಇಬ್ಬರು ಒಡಿಸಾ ಮೂಲದ ಕಾರ್ಮಿಕರು ಮೃತಪಟ್ಟ ಘಟನೆ ಸಂಭವಿಸಿದೆ.  ಇವರು ನಿರ್ಮಾಣ ಹಂತದ ಮನೆಯೊಂದಕ್ಕೆ ಬಂದ ಗ್ರಾನೈಟ್ ನ್ನು ಲಾರಿಯಿಂದ ಅನ್ ಲೋಡ್ ಮಾಡುವಾಗ ಗ್ರಾನೈಟ್ ಮೈಮೇಲೆ ಬಿದ್ದು ಈ ಅವಘಡ ಸಂಭವಿಸಿದೆ. ಸುಮಾರು 30 ರಿಂದ 35 ವರ್ಷದ ಈ ಯುವಕರು ಇಲ್ಲಿ ಕೂಲಿಗಳಾಗಿ ಕೆಲಸ ಮಾಡುತ್ತಿದ್ದರು. ಮೃತರನ್ನು […]

ಅಪರಾಧ

ಮಧ್ಯಪ್ರದೇಶ: ಗುಂಪು ಘರ್ಷಣೆಯಲ್ಲಿ ಐವರ  ಹತ್ಯೆ

ಮಧ್ಯಪ್ರದೇಶ: ಗುಂಪು ಘರ್ಷಣೆಯಲ್ಲಿ ಐವರ  ಹತ್ಯೆ ಮಧ್ಯಪ್ರದೇಶ: ಮಧ್ಯಪ್ರದೇಶದ ದಾತಿಯಾ ಜಿಲ್ಲೆಯಲ್ಲಿ ಸಾಕು ಪ್ರಾಣಿಗಳನ್ನು ಮೇಯಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಪರಸ್ಪರ ಗುಂಡು ಹಾರಿಸಿದ ಪರಿಣಾಮ ಐವರು ಸಾವನ್ನಪ್ಪಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲದಿಂದ ತಿಳಿದು ಬಂದಿದೆ. ಪ್ರಕಾಶ್ ಡಾಂಗಿ, ರಾಮ್ ನರೇಶ್ ಡಾಂಗಿ, ಸುರೇಂದ್ರ ಡಾಂಗಿ, ರಾಜೇಂದ್ರ ಪಾಲ್ ಹಾಗೂ ರಾಘವೇಂದ್ರ ಪಾಲ್ ಅವರು ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದರ […]

eMedia Kannada  @2025. All Rights Reserved.