Tag: police

ಅಪರಾಧ ಕರಾವಳಿ

ಕುಂದಾಪುರ: ಯುವಕನಿಂದ ಅಸಭ್ಯ ವರ್ತನೆ, ಯುವತಿಯಿಂದ ದೂರು ದಾಖಲು

ಕುಂದಾಪುರ: ಹಾಸ್ಟೆಲ್​ನಿಂದ ಕಾಲೇಜಿಗೆ ತೆರಳುತ್ತಿದ್ದಾಗ ಹಿಂಬಾಲಿಸಿ ಬಂದು ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ ರೋಡ್ ರೋಮಿಯೋ ಯುವಕನಿಗೆ ವಿದ್ಯಾರ್ಥಿನಿ ಚಪ್ಪಲಿ ಏಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಕುಂದಾಪುರ ತಾಲೂಕಿನ ವಕ್ವಾಡಿ ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಬಾರ್ಕೂರು ಮೂಲದ ಸದ್ಯ ಈ ಭಾಗದಲ್ಲಿ ಶ್ಯಾಮಿಯಾನ ಮೊದಲಾದ ಕೂಲಿ ಕೆಲಸ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸವಿರುವ ನಜೀರ್ (35) ಆರೋಪಿ. ಘಟನೆ ವಿವರ: ವಿದ್ಯಾರ್ಥಿನಿಯೋರ್ವಳು ಬೀಜಾಡಿ-ವಕ್ವಾಡಿ ರಸ್ತೆಯಲ್ಲಿರುವ ಬಾಲಕಿಯರ ವಿದ್ಯಾರ್ಥಿನಿಲಯದಿಂದ ಬೆಳಿಗ್ಗೆ ಕಾಲೇಜಿಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ […]

ಅಪರಾಧ ಕರಾವಳಿ

ಉಡುಪಿ: ತಾಲೂಕು ಪಂಚಾಯತ್ ಮಾಜಿ ಸದಸ್ಯ ಭಾಸ್ಕರ್ ಕೋಟ್ಯಾನ್ ನಿಧನ

 ಉಡುಪಿ: ಹಿರಿಯ ಕಾಂಗ್ರೆಸಿಗ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಭಾಸ್ಕರ್ ಕೋಟ್ಯಾನ್ (67) ಹೃದಯಾಘಾತದಿಂದ ನಿಧನ ಹೊಂದಿದರು.  ಉಡುಪಿ ತಾಲೂಕು ಪಂಚಾಯತಿಗೆ ಉದ್ಯಾವರ ಕ್ಷೇತ್ರದಿಂದ ಒಂದು ಬಾರಿ ಆಯ್ಕೆಯಾಗಿದ್ದ ಇವರು, ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.  ಉದ್ಯಾವರ ಬಿಲ್ಲವ ಮಹಾಜನ ಸಂಘ ಇದರ ಮಾಜಿ ಅಧ್ಯಕ್ಷರಾಗಿದ್ದ ಇವರು, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಇದ್ದುದನ್ನು ನೇರವಾಗಿ ಹೇಳುತ್ತಿದ್ದ ಇವರು ಉದ್ಯಾವರದಲ್ಲಿ ಹಲವು ವರ್ಷಗಳ ಹಿಂದೆ ನಡೆದ ಫಿಶ್ ಮಿಲ್ […]

ಅಪರಾಧ

ಲಾರಿ ಡಿಕ್ಕಿ: ತಂದೆ-ಮಗ ಸ್ಥಳದಲ್ಲೇ ಸಾವು

 ಕೋಲಾರ: ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿಯಾಗಿ ಸವಾರರಾದ ತಂದೆ ಮತ್ತು ಮಗ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕೋಲಾರದ ಮುಳಬಾಗಿಲು ಬಳಿ ನಡೆದಿದೆ.  ಬೆಂಗಳೂರಿನ ರಾಜಾನಕುಂಟೆ ನಿವಾಸಿಗಳಾದ ಶಿವಪ್ಪ (49), ನಿತಿನ್ ( 25) ಮೃತರು ಎಂದು ಗುರುತಿಸಲಾಗಿದೆ.  ಕೆಲಸದ ನಿಮಿತ್ತ ಇಬ್ಬರು ಮುಳಬಾಗಿಲಿಗೆ ಆಗಮಿಸಿ ಬೆಂಗಳೂರಿಗೆ ವಾಪಸ್‌ ಆಗುವ ವೇಳೆ ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಘಟನೆ ಸಂಭವಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ, ಡಿವೈಎಸ್ಪಿ ಟಿ. ಆರ್ ಜಯಶಂಕರ್, ನಗರಠಾಣೆ ಇನ್‌ಸ್ಪೆಕ್ಟರ್‌ ಆರ್. ಸುರೇಶ್ ಸ್ಥಳಕ್ಕೆ […]

ರಾಜಕೀಯ

ಪೊಲೀಸರು ಕುಂಕುಮ, ವಿಭೂತಿ ಹಚ್ಚಿಕೊಳ್ಳಬಾರದು ಎಂದಿಲ್ಲ, ತಪ್ಪು ಮಾಹಿತಿ ನೀಡಿದವರ ವಿರುದ್ದ ಕ್ರಮ: ಡಾ.ಜಿ.ಪರಮೇಶ್ವರ್ ಎಚ್ಚರಿಕೆ

ಬೆಂಗಳೂರು: ಪೊಲೀಸರು ಹಣೆಗೆ ಕುಂಕುಮ, ವಿಭೂತಿ ಹಚ್ಚಿಕೊಳ್ಳಬಾರದು ಎಂದು ನಾನು ಯಾವುದೇ ಸೂಚನೆಗಳನ್ನು ಕೊಟ್ಟಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದು, ತಪ್ಪು ಮಾಹಿತಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಬೊಟ್ಟು, ವಿಭೂತಿ ಏನು ಬೇಕಾದರೂ ಇಟ್ಟುಕೊಳ್ಳಬಹುದು.  ಅವರು ಯುನಿಫಾರ್ಮ್ ನಲ್ಲಿ ಕೆಲಸ ಮಾಡಬೇಕು. ಅವರಿಗೆ ಅವರದ್ದೇ ಆದ ಪೊಲೀಸ್ ರೂಲ್ಸ್ ಚೌಕಟ್ಟು ಇದೆ. ಅದರೊಳಗೆ ಏನೂ ಬೇಕಾದರೂ ಮಾಡಬಹುದು.  ನಾನು ಏನನ್ನೂ ಹೇಳಿಲ್ಲ. ಸ್ಪಷ್ಟವಾಗಿ […]

ಅಪರಾಧ ದೇಶ-ವಿದೇಶ

ಠಾಣೆಯಲ್ಲಿ ‘ಲೀವ್ ಇನ್ ರಿಲೇಶನ್’ ನಲ್ಲಿದ್ದ ಸಂಗಾತಿಯನ್ನು ಕೊಂದು 12 ತುಂಡುಗಳಾಗಿ ಕತ್ತರಿಸಿ ಕುಕ್ಕರ್ ನಲ್ಲಿ ಬೇಯಿಸಿದ!

ಮಹಾರಾಷ್ಟ್ರ: ವ್ಯಕ್ತಿಯೊಬ್ಬ ತನ್ನ ಸಹಜೀವನ ಸಂಗಾತಿ ಮಹಿಳೆಯನ್ನು ಕೊಂದು ದೇಹದ ತುಂಡುಗಳಾಗಿ ಕತ್ತರಿಸಿ ಕುಕ್ಕರ್ ನಲ್ಲಿ ಬೇಯಿಸಿರುವ ಪ್ರಕರಣ ಮಹಾರಾಷ್ಟ್ರದ ಥಾಣೆಯಲ್ಲಿ ಬಯಲಾಗಿದೆ. ಮೃತ ಮಹಿಳೆಯನ್ನು ಸರಸ್ವತಿ ವೈದ್ಯ (32) ಎಂದು ಗುರುತಿಸಲಾಗಿದ್ದು ಆರೋಪಿಯನ್ನು 56 ವರ್ಷದ ಮನೋಜ್ ಸಹಾನಿ ಎಂದು ಗುರುತಿಸಲಾಗಿದೆ. 3-4 ದಿನಗಳ ಹಿಂದೆ ಸರಸ್ವತಿಯನ್ನು ಕೊಂದಿದ್ದ ಮನೋಜ್, ಟ್ರೀ ಕಟ್ಟರ್ ಅನ್ನು ಖರೀದಿಸಿ ಆಕೆಯ ದೇಹವನ್ನು 12-13 ತುಂಡು ಮಾಡಿದ್ದ. ಬಳಿಕ ಪ್ರಶರ್ ಕುಕ್ಕರ್ ನಲ್ಲಿ ಬೇಯಿಸಿ, ಹೊರಗೆ ಎಸೆಯುವ ಉದ್ದೇಶದಿಂದ ಪ್ಲಾಸ್ಟಿಕ್ ಪೇಪರ್ […]

ಅಪರಾಧ

breaking news ಮಂಗಳೂರಿನಲ್ಲಿ ಯುವತಿಯೋರ್ವಳು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣು

ಮಂಗಳೂರಿನಲ್ಲಿ ಯುವತಿಯೋರ್ವಳು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣು ಮಂಗಳೂರು :  ಯುವತಿಯೋರ್ವಳು ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಪಲದ ಚಿತ್ರಂಜಲಿ ನಗರದಲ್ಲಿ ಗುರುವಾರ ಘಟಿಸಿದೆ. ಕುಂಪಲ ಚಿತ್ರಾಂಜಲಿ  ನಗರದ ನಿವಾಸಿ ಅಶ್ವಿನಿ ಬಂಗೇರ (25) ಎಂದು ತಿಳಿದುಬಂದಿದೆ. ಅಶ್ವಿನಿಯ ಸ್ನೇಹಿತೆ ಬಂದು ಕೋಣೆಯ ಬಾಗಿಲು ಒಡೆದು ನೋಡಿದಾಗ, ಅಶ್ವಿನಿ ಫ್ಯಾನಿಗೆ ನೀನು ಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಅಶ್ವಿನಿ ಬರೆದ 24 ಡೆತ್ ಪುಟಗಳ ಡೆತ್‌ ನೋಟ್‌ ಪೊಲೀಸರಿಗೆ ದೊರೆತಿದೆ. ಬ್ಯಾಂಕ್ ಸಾಲದಿಂದ […]

ಅಪರಾಧ ದೇಶ-ವಿದೇಶ

breaking news ಆಂಧ್ರಪ್ರದೇಶದಲ್ಲಿ ಮೀನಿನ ಕಂಟೇನರ್ ಮತ್ತು ಸರಕು ಲಾರಿ ಮದ್ಯ ಅಪಘಾತ ಓರ್ವ ಸಾವು, ಇನ್ನೋರ್ವ ಗಂಭೀರ

ಆಂಧ್ರಪ್ರದೇಶದಲ್ಲಿ ಮೀನಿನ ಕಂಟೇನರ್ ಮತ್ತು ಸರಕು ಲಾರಿಯ ಮಧ್ಯೆ ನಡೆದ ಅಪಘಾತದಲ್ಲಿ ಉಚ್ಚಿಲ ಬಡಾ ಗ್ರಾಮದ ಭಾಸ್ಕರ ನಗರದ ನಿವಾಸಿ ಬಶೀರ್ ಎಂಬತ ತೀವ್ರ ಗಾಯಗೊಂಡು ಎದುರಿನ ಲಾರಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಗುರುವಾರ ಬೆಳಿಗ್ಗೆ ಸಂಭವಿಸಿದೆ. ಘಟನೆಯ ಸಂಪೂರ್ಣ ಮಾಹಿತಿ ಇನ್ನಷ್ಟು ತಿಳಿಯಬೇಕಿದೆ. ಆಂಧ್ರಪ್ರದೇಶ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಶೀರ್‌ನ ಸಂಬಂಧಿಕರು ಉಚ್ಚಿಲ ಬಡಾ  ಗ್ರಾಮದಿಂದ ಆಂಧ್ರಪ್ರದೇಶಕ್ಕೆ ತೆರಳಿದ್ದಾರೆ.

Uncategorised

ಎಡಿಜಿಪಿಯಾಗಿದ್ದ ಅಲೋಕ್ ಕುಮಾರ್ ಸೇರಿ ನಾಲ್ವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು; ಎಡಿಜಿಪಿಯಾಗಿದ್ದ ಅಲೋಕ್ ಕುಮಾರ್ ಸೇರಿ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.  ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಅವರನ್ನು ಸಂಚಾರ ಮತ್ತು ರಸ್ತೆ ಸುರಕ್ಷತೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ.  ಅಪರಾಧಗಳು ಮತ್ತು ತಾಂತ್ರಿಕ ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಆರ್.ಹಿತೇಂದ್ರ ಅವರನ್ನು ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರನ್ನಾಗಿ ಇದೀಗ ನೇಮಕ ಮಾಡಲಾಗಿದೆ. ಬೆಂಗಳೂರು;ಎಡಿಜಿಪಿಯಾಗಿದ್ದ ಅಲೋಕ್ ಕುಮಾರ್ ಸೇರಿ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ […]

ಅಪರಾಧ ದೇಶ-ವಿದೇಶ

ಕೇರಳ; ರೈಲಿನೊಳಗೆ ಬೆಂಕಿ ಹಚ್ಚಲು ಯತ್ನ, ಆರೋಪಿಗೆ ಮಾನಸಿಕ ಅಸ್ವಸ್ಥ ಎಂಬ ಶಂಕೆ

 ಕೋಝಿಕೋಡ್: ಕಣ್ಣೂರು-ಎರ್ನಾಕುಲಂ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ಗೆ ಬೆಂಕಿ ಹಚ್ಚಲು ಯತ್ನಿಸಿದ ನಂತರ ಪ್ರಯಾಣಿಕರು ಆರ್‌ಪಿಎಫ್‌ಗೆ ಹಸ್ತಾಂತರಿಸಿದ ಆರೋಪಿಗೆ ರಿಮಾಂಡ್ ಮಾಡಲಾಗಿದೆ. ಮಹಾರಾಷ್ಟ್ರದ ಲೋಹರಾ ಅಕೋಲಾ ಮೂಲದ ಸಚಿನ್ ಪ್ರಮೋದ್ ಬಾಕಲ್ (20) ಎಂಬಾತನನ್ನು ಕೋಝಿಕ್ಕೋಡ್ ಜುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ 14 ದಿನಗಳ ಕಾಲ ರಿಮಾಂಡ್ ವಿಧಿಸಿದೆ. ಈತ ಮಾನಸಿಕ ಅಸ್ವಸ್ಥ ಎಂದು ಪೊಲೀಸರು ದೃಢಪಡಿಸಿದ್ದರೂ,  ಎಲತ್ತೂರು ಮತ್ತು ಕಣ್ಣೂರು ರೈಲಿಗೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ರೈಲ್ವೆ ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ವರದಿಯಾಗಿದೆ.   ಈತನ […]

ರಾಜಕೀಯ

ಡ್ರಗ್ಸ್ , ಮಟ್ಕಾ ದಂಧೆಗೆ ಕಡಿವಾಣ- ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ್

ಉಡುಪಿ: ಜಿಲ್ಲಾ ಪ್ರವಾಸದಲ್ಲಿರುವ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಉಡುಪಿ ಎಸ್ಪಿ ಕಚೇರಿಯಲ್ಲಿ ಸಮಾಲೋಚನಾ  ಸಭೆ ನಡೆಸಿದರು. ಎಡಿಜಿಪಿ ಅಲೋಕ್ ಕುಮಾರ್ , ಐಜಿಪಿ ಚಂದ್ರಗುಪ್ತ, ಉಡುಪಿ ಎಸ್ಪಿ ಅಕ್ಷಯ್ , ಎಎನ್ ಎಫ್ ಎಸ್ ಪಿ ಪ್ರಕಾಶ್ ನಿಕ್ಕಂ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾದರು.  ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವರು ,ಕರಾವಳಿ ಪ್ರದೇಶದಲ್ಲಿ ನಡೆಯುತ್ತಿರುವ ಘಟನೆಗಳ ಮಾಹಿತಿ ಪಡೆದಿದ್ದೇನೆ. ನೈತಿಕ ಪೊಲೀಸ್ ಗಿರಿ ಹತ್ತಿಕ್ಕುವ ಕ್ರಮದ ಬಗ್ಗೆ ಚರ್ಚೆಯಾಗಿದೆ. […]

eMedia Kannada  @2025. All Rights Reserved.