Tag: police

ಅಪರಾಧ ದೇಶ-ವಿದೇಶ

ಒಂದೇ ಸೀರೆಯಲ್ಲಿ ಅಕ್ಕ, ತಂಗಿ ನೇಣಿಗೆ ಶರಣು.!

ಧಾರವಾಡ: ಸೀರೆಯೊಂದಕ್ಕೆ ಅಕ್ಕ, ತಂಗಿ ಇಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಧಾರವಾಡದ ಕಲಘಟಗಿ ಪಟ್ಟಣದಲ್ಲಿ ನಡೆದಿದೆ. ಕಲಘಟಗಿಯ ಬೆಂಡಿಗೇರಿ ಓಣಿಯಲ್ಲಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಸಹೋದರಿಯರು ಮನೆಯಲ್ಲಿ ತಾಯಿ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾವೇರಿ ಹಡಪದ (19) ಹಾಗೂ ಭೂಮಿಕಾ ಹಡಪದ (17) ಎಂಬುವರೇ ಆತ್ಮಹತ್ಯೆಗೆ ಶರಣಾದ ಸಹೋದರಿಯರು. ಈ ಬಗ್ಗೆ ಕಲಘಟಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪೊಲೀಸರ ತನಿಖೆ ನಂತರ ಸಹೋದರಿಯರು ಆತ್ಮಹತ್ಯೆಗೆ ಕಾರಣ ಏನು ಎಂಬುದು […]

ಅಪರಾಧ ಕರಾವಳಿ

ಮಣಿಪಾಲ ಹಕುನ ಮಟಾಟ ರೆಸ್ಟೋರೆಂಟ್ ನಲ್ಲಿ ಅಗ್ನಿ ಅವಘಡ: 40ಲಕ್ಷಕ್ಕೂ ಅಧಿಕ ಮೌಲ್ಯದ ನಷ್ಟ

ಮಣಿಪಾಲ ಈಶ್ವರನಗರ ಸಮೀಪದ ಹಕುನ ಮಟಾಟ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ‌ ಇಂದು ಮುಂಜಾನೆ ಆಕಸ್ಮಿಕವಾಗಿ ಅಗ್ನಿವಘಡ ಸಂಭವಿಸಿದ್ದು, ಸುಮಾರು 40 ಲಕ್ಷಕ್ಕೂ ಅಧಿಕ ಮೌಲ್ಯದ ನಷ್ಟ ಸಂಭವಿಸಿದೆ. ರೆಸ್ಟೋರೆಂಟ್ ನ ಕಿಚನ್ ರೂಮ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗಲಿದ್ದು, ಅಪಾರ ಪ್ರಮಾಣದ ಉಪಕರಣಗಳು ಬೆಂಕಿಗಾಹುತಿಯಾಗಿದೆ ಎಂದು ತಿಳಿದುಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

ಅಪರಾಧ ದೇಶ-ವಿದೇಶ

ಕಣ್ಣು ಕಾಣದ ವೃದ್ಧೆಯ ಮೇಲೆ ಅತ್ಯಾಚಾರ ಮಾಡಿದ ದುಷ್ಕರ್ಮಿ, ಮನನೊಂದು ವೃದ್ಧೆ ಆತ್ಮಹತ್ಯೆ; ಅಮಾನವೀಯ ಘಟನೆ ವರದಿ

  ವಿಜಯನಗರ; ಕಣ್ಣು ಕಾಣದ 58 ವರ್ಷದ ವೃದ್ಧೆಯ ಮೇಲೆ ಕಾಮುಕನೊಬ್ಬ ಅತ್ಯಾಚಾರ ವೆಸಗಿದ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವ್ಯಾಸಪುರ ತಾಂಡದಲ್ಲಿ ನಡೆದಿದೆ.  ಲೋಕೇಶ ನಾಯ್ಕ್ ಎಂಬಾತನೇ ವೃದ್ಧೆಯ ಮೇಲೆ ಅತ್ಯಾಚಾರ ನಡೆಸಿದ ದುಷ್ಕರ್ಮಿ.   ಕಣ್ಣು ಕಾಣ ವೃದ್ಧೆ ಮೇಲೆ ಅತ್ಯಾಚಾರವೆಸಗಿ ಆರೋಪಿ ಲೋಕೇಶ ನಾಯ್ಕ್ ಪರಾರಿಯಾಗಿದ್ದ. ಕಾಮುಕನ ಕೃತ್ಯಕ್ಕೆ ಮನನೊಂದು ವೃದ್ಧೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.  ಲೋಕೇಶ್ ಗೆ ಮದುವೆಯಾಗಿ ಮಕ್ಕಳಿದ್ದಾರೆ‌‌. ಹಗರಿ ಬೊಮ್ಮನಹಳ್ಳಿ ತಾಲೂಕಿನ ವ್ಯಾಸಾಪುರ ತಾಂಡದ ಲೋಕೇಶ ನಾಯ್ಕ್‌ನನ್ನು ಪೊಲೀಸರು ಬಂಧಿಸಿದ್ದಾರೆ. […]

ಅಪರಾಧ ದೇಶ-ವಿದೇಶ

ಮದುವೆಯಾದ ಮೊದಲ ರಾತ್ರಿ ಬೆಳಗಾಗುವುದರಲ್ಲಿ ದಂಪತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

  ಉತ್ತರ ಪ್ರದೇಶ: ಮದುವೆಯಾದ ಮೊದಲ ರಾತ್ರಿ ಬೆಳಗಾಗುವುದರಲ್ಲಿ ದಂಪತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ದಾರುಣ ಘಟನೆ ಉತ್ತರ ಪ್ರದೇಶದ ಬಹ್ಮಚ್ ಜಿಲ್ಲೆಯಲ್ಲಿ ನಡೆದಿದೆ.  ಮೃತರನ್ನು ಪ್ರತಾಪ್ ಯಾದವ್ (22), ಪುಷ್ಪಾ (20) ಎಂದು ತಿಳಿದು ಬಂದಿದೆ. ಇವರಿಗೆ ಮೇ 30ರಂದು ವಿವಾಹವಾಗಿದ್ದರು. ಮದುವೆ © ಮೊದಲ ರಾತ್ರಿ ಮನೆಯವರು ದಂಪತಿಯನ್ನು ಕೋಣೆಗೆ ಬಿಟ್ಟು   ಬಂದಿದ್ದರು. ಆದರೆ, ಬೆಳಗ್ಗೆ ಕೋಣೆಯ ಬಾಗಿಲು ತೆರೆಯದಿದ್ದ ಹಿನ್ನೆಲೆಯಲ್ಲಿ ಮನೆಯವರು ಬಾಗಿಲು ಮುರಿದು ನೋಡಿದಾಗ ದಂಪತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಬ್ಬರೂ ಆತ್ಮಹತ್ಯೆ […]

ಅಪರಾಧ

ತರೀಕೆರೆ: ಶಾಸಕರ ಅಭಿನಂದನಾ ಕಾರ್ಯಕ್ರಮದಲ್ಲಿ ಜಗಳ: ಚಾಕು ಇರಿತದಿಂದ ಯುವಕ ಸಾವು

ಚಿಕ್ಕಮಗಳೂರು: ನೂತನ ಕಾಂಗ್ರೆಸ್ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಯುವಕನ ಕೊಲೆಯಾದ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದಲ್ಲಿ ನಡೆದಿದೆ. ಕೊಲೆಯಾದ ಯುವಕ ವರುಣ್ ಎಂದು ಗುರುತಿಸಲಾಗಿದೆ. ತರೀಕೆರೆ ಶಾಸಕ ಶ್ರೀನಿವಾಸ್‌ ಅವರಿಗೆ ಅಭಿಮಾನಿಗಳು ಅಭಿನಂದನಾ ಸಮಾರಂಭವನ್ನ ಏರ್ಪಡಿಸಿದರು. ಈ ವೇಳೆ ಆರ್ಕೆಸ್ಟ್ರಾದಲ್ಲಿ ಹಾಡು ಬದಲಿಸುವ ವಿಚಾರದಲ್ಲಿ ಕಬಾಬ್ ಮೂರ್ತಿ ಹಾಗೂ ವರುಣ್ ಮಧ್ಯೆ ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದು ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ. ಆರ್ಕೆಸ್ಟ್ರಾ ಮುಗಿಯುತ್ತಿದ್ದಂತೆ ಕಬಾಬ್ ಮೂರ್ತಿ, ವರುಣ್‌ಗೆ ಡ್ರ್ಯಾಗರ್ ಹಾಕಿದ್ದಾನೆ. ವರುಣ್‌ […]

ಅಪರಾಧ

ನಾಗಮಂಡಲದಲ್ಲಿ ಲಾರಿಗೆ ಕಾರು ಡಿಕ್ಕಿ: ನಾಲ್ವರ ಸಾವು

ನಾಗಮಂಡಲ:  ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲಿ ಧಾರುಣವಾಗಿ ಮೃತ ಪಟ್ಟ ಘಟನೆ ನಾಗಮಂಡಲ ತಾಲೂಕಿನ ತಿರುಮಲಪುರ ಬಳಿ ಇಂದು ಬೆಳಿಗ್ಗೆ ಘಟಿಸಿದೆ.  ಘಟನೆಯಲ್ಲಿ ನವೀನ, ಹೇಮತ್‌ ಶರತ್‌ ಹಾಗೂ ಮತ್ತೋರ್ವ ಮೃತಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಬೆಂಗಳೂರು ಕಡೆಯಿಂದ ಚನ್ನರಾಯನ ಪಟ್ಟಣ ಕಡೆ ಸರಕು  ಹೇರಿಕೊಂಡು ಸಾಗುತ್ತಿದ್ದ ಲಾರಿಗೆ ಕಾರು ಹಿಂದಿನಿಂದ ಗುದ್ದಿದೆ. ಕಾರಿನಲ್ಲಿದ್ದ ನಾಲ್ವರು ಸ್ಥಳ ದಲ್ಲಿಯೇ ಮೃತಪಟ್ಟಿದ್ದಾರೆ. ನಾಗಮಂಡಲ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ.

ಅಪರಾಧ ಜೀವನಶೈಲಿ ವ್ಯವಹಾರ

ಮಣಿಪಾಲ: ಗಾಂಜಾ ಸೇವನೆ- ನಾಲ್ವರು ವಶಕ್ಕೆ

ಮಣಿಪಾಲ: ಗಾಂಜಾ ಸೇವನೆಗೆ ಸಂಬಂಧಿಸಿ ನಾಲ್ವರನ್ನು ಮಣಿಪಾಲ ಪೊಲೀಸರು ವಿದ್ಯಾರತ್ನ ನಗರದ ವಿದ್ಯಾರತ್ನ ರೆಸಿಡೆನ್ಸಿ ಬಳಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಓಡಿಸ್ಸಾದ ಸಾತ್ವಿಕ್ ಸಾಹೂ(21), ಅಸ್ಸಾಮಿನ ರಿಷಿರಾಜ್ ಮೊಮಿನ್(21),   ಅಮನ್ ಗೊಗೈ(21), ಬಿಹಾರದ ಅಮನ್ ಕುಮಾರ್(21) ಎಂಬುವವರನ್ನು ವಶಕ್ಕೆ ಪಡೆದು ಮಣಿಪಾಲ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು, ವರದಿಯಲ್ಲಿ ಇವರೆಲ್ಲರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಣಿಪಾಲ: ಗಾಂಜಾ […]

ಅಪರಾಧ ದೇಶ-ವಿದೇಶ

ಕೋಲಾರದಲ್ಲಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ

6,000 ರೂ. ಲಂಚ ಪಡೆಯುತ್ತಿದ್ದಾಗಲೇ ಕೋಲಾರ ಜಿಲ್ಲೆಯ ಗೃಹ ರಕ್ಷಕ ದಳದ ಡೆಪ್ಯೂಟಿ ಕಮಾಂಡೆಂಟ್ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕೋಲಾರದ ಗೃಹ ರಕ್ಷಕ ದಳದ ಡೆಪ್ಯೂಟಿ ಕಮಾಂಡೆಂಟ್ ಆಗಿದ್ದ ರಾಜೇಂದ್ರನ್ ಅವರು ಬೆಂಗಳೂರು ಮೆಟ್ರೋದಲ್ಲಿ ಕೆಲಸಕ್ಕೆ ನಿಯೋಜನೆ ಮಾಡಲು ಸುಬಾನಾಯಕ್ ಎಂಬುವವರಿಂದ 6,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಸುಬಾನಾಯಕ್ ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಲಂಚ ಪಡೆಯುತ್ತಿದ್ದಾಗಲೇ ಕೋಲಾರ ಲೋಕಾಯುಕ್ತ ಎಸ್ಪಿ ಉಮೇಶ್ ನೇತೃತ್ವದಲ್ಲಿ ದಾಳಿ ನಡೆಸಿ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.

ಅಪರಾಧ ದೇಶ-ವಿದೇಶ ರಾಜಕೀಯ

ಕೇಂದ್ರ ರೈಲ್ವೆ ಸಚಿವರು ರಾಜೀನಾಮೆ ನೀಡಬೇಕು: ಕಾಂಗ್ರೆಸ್ ನಾಯಕ

ಕೇಂದ್ರ ರೈಲ್ವೆ ಸಚಿವರು ರಾಜೀನಾಮೆ ನೀಡಬೇಕು: ಕಾಂಗ್ರೆಸ್ ನಾಯಕ ಒಡಿಶಾ ರೈಲು ದುರಂತದ ನೈತಿಕ ಹೊಣೆಹೊತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರಾಜೀನಾಮೆ ನೀಡಬೇಕು ಎಂದು ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕ ಬಾಳಾಸಾಹೇಬ್ ಥೋರಟ್ ಒತ್ತಾಯಿಸಿದ್ದಾರೆ.ಕೇಂದ್ರ ಸರ್ಕಾರಕ್ಕೆ ಸೂಕ್ಷ್ಮತೆ ಇಲ್ಲ. ರೈಲುಗಳ ಮುಖಾಮುಖಿ ಡಿಕ್ಕಿ ನಡೆಯುವಂತಹ ‘ಕವಚ’ ಏನಾಯಿತು ಎಂಬುದನ್ನು ಜನತೆಗೆ ತಿಳಿಸಬೇಕು ಎಂದಿದ್ದಾರೆ. ಪ್ರಧಾನಿ ಮೋದಿ ಹೊಸ ರೈಲುಗಳ ಉದ್ಘಾಟನೆ ವೇಳೆಯೂ ರೈಲ್ವೆ ಸಚಿವರು ಕಾಣಲೇ ಇಲ್ಲ. ಈ ಭೀಕರ ಅಪಘಾತದ ನಂತರ ಅವರು […]

ಅಪರಾಧ ಕರಾವಳಿ

ಕಾರ್ಕಳ: ನಲ್ಲೂರಿನಲ್ಲಿ ಗೊಬ್ಬರ ಸಾಗಿಸುತ್ತಿದ್ದ ಟೆಂಪೋ ಮರಕ್ಕೆ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ.

ಕಾರ್ಕಳ ತಾಲೂಕಿನ ನಲ್ಲೂರು ಪರಪ್ಪಾಡಿ ಎಂಬಲ್ಲಿ ಇಂದ ಬೆಳಿಗ್ಗೆ ಮೀನಿನ ಗೊಬ್ಬರ ಸಾಗಿಸುತ್ತಿದ್ದ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಪರಿಣಾಮ  ಟೆಂಪೋ ಮುಗುಚಿ ಬಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಲ್ಪೆಯಿಂದ ಬೆಂಗಳೂರಿಗೆ ಮೀನಿನ ಗೊಬ್ಬರ ಸಾಗಿಸುತ್ತಿದ್ದ ಲಾರಿ ಪಾಜೆಗುಡ್ಡೆಯ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಟೆಂಪೋದಲ್ಲಿದ್ದ ಗೊಬ್ಬರ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.  ಟೆಂಪೋದಲ್ಲಿ ಚಾಲಕ ಸೇರಿದಂತೆ ಮೂವರು ಪ್ರಯಾಣಿಸುತ್ತಿದ್ದು ಆ ಪೈಕಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ […]

eMedia Kannada  @2025. All Rights Reserved.