Tag: police

ಅಪರಾಧ

ಹೆಬ್ರಿಯಲ್ಲಿ ಅಪರಿಚಿತ ವಾಹನ ಡಿಕ್ಕಿ – ಚಿರತೆ ಸ್ಥಳದಲ್ಲೇ ಸಾವು

ಉಡುಪಿ : ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ಅಪರಿಚಿತ ಘನ ವಾಹನ ಡಿಕ್ಕಿಯಾಗಿ ಚಿರತೆಯೊಂದು ಸ್ಥಳದಲ್ಲೇ ಸಾವನ್ನಪ್ಪಿದೆ.ಮುದ್ರಾಡಿ ಗ್ರಾಮದಲ್ಲಿ ಕಾಡಿನಿಂದ ರಸ್ತೆ ದಾಟುತ್ತಿದ್ದ ಸುಮಾರು ಐದು ವರ್ಷದ ಹೆಣ್ಣು ಚಿರತೆಯ ತಲೆಯ ಭಾಗಕ್ಕೆ ವಾಹನ ಡಿಕ್ಕಿಯಾಗಿದೆ.ಚಿರತೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ವಾಹನ ಕೂಡಾ ಪತ್ತೆಯಾಗಿಲ್ಲ.ಘಟನಾ ಸ್ಥಳಕ್ಕೆ ಹೆಬ್ರಿ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

ಅಪರಾಧ

ಬೆಳಪು ಔದ್ಯೋಗಿಕ ನಗರದಲ್ಲಿ ಈಜಲು ತೆರಳಿದ್ದ ಬಾಲಕ ಸಾವು ; ಮೂವರ ರಕ್ಷಣೆ

ಬೆಳಪು ಔದ್ಯೋಗಿಕ ನಗರದಲ್ಲಿ ಈಜಲು ತೆರಳಿದ್ದ ಬಾಲಕ ಸಾವು ; ಮೂವರ ರಕ್ಷಣೆ  ಉಡುಪಿ\ಬೆಳಪು: ಬೆಳಪುವಿನಲ್ಲಿರುವ ಔದ್ಯೋಗಿಕ ನಗರದ ಗುಂಡಿಯೊಂದರಲ್ಲಿ ಈಜಲು ತೆರಳಿದ್ದ ನಾಲ್ವರು ಮಕ್ಕಳಲ್ಲಿ ಓರ್ವ ಮೃತಪಟ್ಟಿದ್ದು, ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿದ ಘಟನೆ ಗುರುವಾರ ಸಂಜೆ ಘಟಿಸಿದೆ. ಮೃತ ಬಾಲಕನನ್ನು ಬೆಳಪು ವಸತಿ ಬಡಾವಣೆಯ ನಿವಾಸಿ ವಿಶ್ವಾಸ್ (11) ಎಂದು ಗುರುತಿಸಲಾಗಿದೆ. ಈತ ಇನ್ನಂಜೆ ಶಾಲೆಯ ವಿದ್ಯಾರ್ಥಿ.  ವಿಶ್ವಾಸ್ ನಾಲ್ವರೊಂದಿಗೆ ಔದ್ಯೋಗಿಕ ನಗರದಲ್ಲಿ ನೀರು ತುಂಬಿದ್ದ ಗುಂಡಿಯೊಂದರಲ್ಲಿ ಈಜಲು ತೆರಳಿದ್ದರು. ತೀವ್ರ ಅಸ್ವಸ್ಥಗೊಂಡ ವಿಶ್ವಾಸ್ […]

ಅಪರಾಧ

ಹಾಲಶ್ರೀ ಸ್ವಾಮೀಜಿಯ ಮತ್ತೊಂದು ಬಿಜೆಪಿ ಟಿಕೆಟ್‌ ಹಗರಣ ಬಯಲಿಗೆ: ಮಹತ್ವದ ಸಾಕ್ಷ್ಯ ಕಲೆಹಾಕಿದ ಪೊಲೀಸರು

ಹಾಲಶ್ರೀ ಸ್ವಾಮೀಜಿಯ ಮತ್ತೊಂದು ಬಿಜೆಪಿ ಟಿಕೆಟ್‌ ಹಗರಣ ಬಯಲಿಗೆ: ಮಹತ್ವದ ಸಾಕ್ಷ್ಯ ಕಲೆಹಾಕಿದ ಪೊಲೀಸರು ಗದಗ, (ಅ. 5): ವಿಧಾನಸಭೆ ಚುನಾವಣೆಯಲ್ಲಿ  ಟಿಕೆಟ್ ಕೊಡಿಸುವುದಾಗಿ ಕೋಟಿ ಕೋಟಿ ರೂ. ವಂಚನೆ ಮಾಡಿದ ಪ್ರಕರಣ ರಾಜ್ಯದಲ್ಲಿ ಭಾರಿ ಸುದ್ದಿ ಮಾಡಿದೆ. ಉಡುಪಿ ಮೂಲದ ಉದ್ಯಮಿಗೆ ವಂಚನೆ ಬೆನ್ನಲ್ಲೇ ಗದಗ ಜಿಲ್ಲೆಯಲ್ಲೂ ಅಭಿನವ ಹಾಲಶ್ರೀ ವಿರುದ್ಧ ವಂಚನೆ ಕೇಸ್ ದಾಖಲಾಗಿತ್ತು. ಈಗ ಬೆಂಗಳೂರಿನ ಜೈಲಿನಲ್ಲಿದ್ದ ಹಾಲಶ್ರೀ ಸ್ವಾಮೀಯನ್ನು ಮುಂಡರಗಿ ಪೊಲೀಸ್ರು ಬಾಡಿ ವಾರಂಟ್ ಮೇಲೆ ಆಚೆ ಕರೆದುಕೊಂಡು ಬಂದು ಎಲ್ಲೆಡೆ […]

ಕರಾವಳಿ ರಾಜಕೀಯ

ಶಿವಮೊಗ್ಗ ಗಲಭೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಅನಧಿಕೃತ ಬ್ಯಾನರ್ ಮತ್ತು ಕಟೌಟ್‌ಗಳ ತೆರವು

ಶಿವಮೊಗ್ಗ ಗಲಭೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಅನಧಿಕೃತ ಬ್ಯಾನರ್ ಮತ್ತು ಕಟೌಟ್‌ಗಳ ತೆರವು  ಉಡುಪಿ: ಶಿವಮೊಗ್ಗ ಗಲಭೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಅನಧಿಕೃತವಾಗಿ ಹಾಗೂ ಅವಧಿ ಮೀರಿದ ಬ್ಯಾನರ್ ಮತ್ತು ಕಟೌಟ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಸ್ಥಳೀಯಾಡಳಿತದ ಅಧಿಕಾರಿಗಳು ಪೊಲೀಸ್ ರಕ್ಷಣೆಯಲ್ಲಿ  ನಡೆಸಿದರು.  ನಗರಸಭೆಯಿಂದ ಯಾವುದೇ ಅನುಮತಿ ಪಡೆಯದೆ ಉಡುಪಿ ನಗರ, ಸಂತೆಕಟ್ಟೆ ಹಾಗೂ ಮಣಿಪಾಲ ಸೇರಿದಂತೆ ನಗರ ಸಭೆ ವ್ಯಾಪ್ತಿಯಲ್ಲಿ ಅನಧಿಕೃತ ವಾಗಿ ಅಳವಡಿಸಲಾದ ಹಾಗೂ ಅವಧಿ ಮೀರಿದ […]

ಅಪರಾಧ

ಕಾರ್ಕಳ: ರಬ್ಬರ್ ಸ್ಮೋಕ್ ಹೌಸ್‌ನಲ್ಲಿ ಅಗ್ನಿ ಅವಘಡ

ಕಾರ್ಕಳ: ರಬ್ಬರ್ ಸ್ಮೋಕ್ ಹೌಸ್‌ನಲ್ಲಿ ಅಗ್ನಿ ಅವಘಡ ಕಾರ್ಕಳ : ಬೋಳ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬರೆಬೈಲು ಎಂಬಲ್ಲಿ ರಬ್ಬರ್ ಸ್ಮೋಕ್ ಹೌಸ್‌ನಲ್ಲಿ ಬುಧವಾರ ಅಗ್ನಿ ಅವಘಡ ಸಂಭವಿಸಿದೆ. ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಬ್ಬರ್‌ ಶೀಟ್‌ ಮಾಡಲು ಹಾಕಿದ್ದ ಬೆಂಕಿ, ಕಟ್ಟಡಕ್ಕೆ ತಗುಲಿ ಅವಘಡ ಸಂಭವಿಸಿದೆ. ಪರಿಣಾಮವಾಗಿ 50 ರಬ್ಬರ್‌ ಶೀಟ್‌, ಕಟ್ಟಡದ ಮೇಲ್ಛಾವಣಿಗೆ ಹಾಕಿದ್ದ ಶೀಟ್‌ ಬೆಂಕಿಗಾಹುತಿಯಾಗಿದೆ. ಅದೃಷ್ಟವಶಾತ್‌ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ. ಕಾರ್ಯಾಚರಣೆಯಲ್ಲಿ […]

ಅಪರಾಧ

 ಕಾಪುವಿನ ಮಜೂರಿನಲ್ಲಿ ಕೂಲಿ ಕಾರ್ಮಿಕನ ಮೇಲೆ ಬಿದ್ದ ಮರ : ಸ್ಥಳದಲ್ಲಿಯೇ ಸಾವು

 ಕಾಪುವಿನ ಮಜೂರಿನಲ್ಲಿ ಕೂಲಿ ಕಾರ್ಮಿಕನ ಮೇಲೆ ಬಿದ್ದ ಮರ : ಸ್ಥಳದಲ್ಲಿಯೇ ಸಾವು ಕಾಪು : ತಾಲೂಕಿನ ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಂದಾಡಿಯಲ್ಲಿ ಆಲದಮರವೊಂದನ್ನು ಕಡಿಯುವಾಗ ಮರ ಕಡಿಯಲು ಬಂದಿದ್ದ ವ್ಯಕ್ತಿಯೊಬ್ಬನ ಮೇಲೆ ಮರ ಬಿದ್ದು ಸಾವನ್ನಪ್ಪಿದ ಘಟನೆ ಇಂದು ಮಜೂರಿನಲ್ಲಿ ನಡೆದಿದೆ.  ಮೃತಪಟ್ಟ ವ್ಯಕ್ತಿ ಸುಧೀರ್ ಮಾಂಜಿ (59) ಬಿಹಾರ ಮೂಲದವನಾಗಿದ್ದು. ಮರದ ಗೆಲ್ಲುಗಳನ್ನು ಕಡಿದ ಬಳಿಕ ಇಡಿ ಮರವೇ ಧರೆಗುರುಳಿ ಮೂವರ ಮೇಲೆ ಬಿದ್ದಿದ್ದು ಇಬ್ಬರು ಗಾಯಗೊಂಡು  ಪ್ರಾಣಾಪಾಯದಿಂದ ಪಾರಾಗಿದ್ದರೆ  ಓರ್ವ  ವ್ಯಕ್ತಿ […]

ಅಪರಾಧ

ಕಾರು ಅಪಘಾತದಲ್ಲಿ ಮಹಿಳೆ ಸಾವು: ನಟ ನಾಗಭೂಷಣ ಬಂಧನ

ಕಾರು ಅಪಘಾತದಲ್ಲಿ ಮಹಿಳೆ ಸಾವು: ನಟ ನಾಗಭೂಷಣ ಬಂಧನ ಬೆಂಗಳೂರು: ಕನ್ನಡ ನಟ ನಾಗಭೂಷಣ ಅವರ ಕಾರು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮಹಿಳೆ ಮೃತಪಟ್ಟ ಘಟನೆ ನಡೆದಿದ್ದು, ಘಟನೆ ಬಳಿಕ ನಟ ನಾಗಭೂಷಣ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಟ ನಾಗಭೂಷಣ ಕಾರು ಅಪಘಾತವಾಗಿದ್ದು, ಪಾದಚಾರಿ ಮಹಿಳೆ ಎಸ್.ಪ್ರೇಮಾ (48) ಅವರು ಮೃತಪಟ್ಟಿದ್ದಾರೆ. ಉತ್ತರಹಳ್ಳಿಯ ವಸಂತಪುರ ಮುಖ್ಯರಸ್ತೆ ನಿವಾಸಿ ಪ್ರೇಮಾ ಅವರು ಪತಿ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ ನಾಗಭೂಷಣ ಅವರ […]

ಅಪರಾಧ

ಬಿಜಾಪುರದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮುಲ್ಕಿಯಲ್ಲಿ ಮೊಬೈಲ್ ಟವರ್ ಏರಿ ಹೈಡ್ರಾಮ ಮಾಡಿದ ಯುವಕ:  

ಬಿಜಾಪುರದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮುಲ್ಕಿಯಲ್ಲಿ ಮೊಬೈಲ್ ಟವರ್ ಏರಿ ಹೈಡ್ರಾಮ ಮಾಡಿದ ಯುವಕ:   ದ.ಕ \ ಮುಲ್ಕಿ: ಇಲ್ಲಿಗೆ ಸಮೀಪದ ಕೋಲ್ನಾಡು ಕೈಗಾರಿಕಾ ಪ್ರದೇಶದಲ್ಲಿ ಸತೀಶ್ ಎಂಬ ಯುವಕ ಮೊಬೈಲ್ ಟವರ್  ಏರಿ, ಪುಕ್ಕಟೆ ಮನರಂಜನೆ ಒದಗಿಸಿ ಹೈಡ್ರಾಮ ಸೃಷ್ಟಿಸಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ದು ಕೊನೆಗೆ ಆತನೇ ಮಿತ್ರನ ಮಾತು ಕೇಳಿ ಕೆಳಗೆ ಇಳಿದಿದ್ದಾನೆ. ಶನಿವಾರ ಬೆಳಗ್ಗೆ ಸುಮಾರು 10:30 ಗಂಟೆಗೆ ಯುವಕ ಸತೀಶ್ ಸುಮಾರು 100 ಮೀಟರ್ ಎತ್ತರದ ಮೊಬೈಲ್ ಟವರ್ ಏರಿ […]

ಅಪರಾಧ

ಬೈಂದೂರಿನಲ್ಲಿ ಜಮೀನಿಗೆ ಬಂದ ಹಸುಗಳಿಗೆ ನಾಡಕೋವಿಯಿಂದ ಶೂಟ್ : ಎರಡು ಹಸುಗಳು ಸಾವು

ಬೈಂದೂರಿನಲ್ಲಿ ಜಮೀನಿಗೆ ಬಂದ ಹಸುಗಳಿಗೆ ನಾಡಕೋವಿಯಿಂದ ಶೂಟ್ : ಎರಡು ಹಸುಗಳು ಸಾವು ಉಡುಪಿ:  ತನ್ನ ಜಮೀನಿಗೆ ಮೇಯಲು ಬಂದ ಹಸುಗಳಿಗೆ ನಾಡಕೋವಿಯಿಂದ ಗುಂಡು ಹಾರಿಸಿ ಎರಡು ದನಗಳನ್ನು ಕೊಲೆ ಮಾಡಿದ ಅಮಾನವೀಯ ಕೃತ್ಯ  ಬೆಳ್ಳಾಲ ಗ್ರಾಮದ ಅಂಗಡಿಜಡ್ಡು ಪರಿಸರದಲ್ಲಿ ನಡೆದಿದೆ.  ಸ್ಥಳೀಯ ನಿವಾಸಿ ನರಸಿಂಹ ಎಂಬಾತ ಗುಂಡು ಹಾರಿಸಿದ್ದಾಗಿ  ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಗುಲಾಬಿ ಎಂಬ ಮಹಿಳೆಯ ಎರಡು ಹಸುಗಳು ಮೃತಪಟ್ಟಿದ್ದು, ಸುಮಾರು ಆರು ಹಸುಗಳಿಗೆ ಗಾಯವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ನರಸಿಂಹ, ಹಸುಗಳ […]

ಅಪರಾಧ

ವಿಟ್ಲದಲ್ಲಿ ಅಟೋ ಚಾಲಕನಿಗೆ ಅವ್ಯಾಚವಾಗಿ ಬೈದು, ಹಲ್ಲೆ: ದೂರು

ವಿಟ್ಲದಲ್ಲಿ ಅಟೋ ಚಾಲಕನಿಗೆ ಅವ್ಯಾಚವಾಗಿ ಬೈದು, ಹಲ್ಲೆ: ದೂರು  ಬಂಟ್ವಾಳ : ಅಟೋ ಚಾಲಕನಿಗೆ ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿದ ಘಟನೆ ಬಂಟ್ವಾಳ ತಾಲೂಕು ವಿಟ್ಲಮುಡ್ನೂರು ಗ್ರಾಮದ ಕಂಬಳಬೆಟ್ಟು ಎಂಬಲ್ಲಿ ನಡೆದಿದೆ. ವಿಟ್ಲ ಕಸಬ ಗ್ರಾಮ ಬಂಟ್ವಾಳ ನಿವಾಸಿ ಮಹಮ್ಮದ್‌ ಸುಹೈಲ್‌ ಎಂಬವರ ದೂರಿನಂತೆ, ದಿನಾಂಕ:27-09-2023 ರಂದು ರಾತ್ರಿ ಕಂಬಳಬೆಟ್ಟುವಿನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗುವಾಗ ಸುಹೈಲ್‌ ಹಾಗೂ ಆರೋಪಿ ಹಾರೀಸ್‌ ರವರಿಗೂ ಮಾತುಕತೆಯಾಗಿರುತ್ತದೆ. ಪ್ರಕರಣ ಮುಂದುವರಿದಂತೆ ದಿನಾಂಕ:28-09-2023 ರಂದು ಬೆಳಿಗ್ಗೆ ಸುಹೈಲ್‌ ತನ್ನ ಅಟೋರಿಕ್ಷಾದಲ್ಲಿ ಪ್ರಯಾಣಿಕರನ್ನು […]

eMedia Kannada  @2025. All Rights Reserved.