Tag: Politics

ರಾಜಕೀಯ

ಪೊಲೀಸರು ಕುಂಕುಮ, ವಿಭೂತಿ ಹಚ್ಚಿಕೊಳ್ಳಬಾರದು ಎಂದಿಲ್ಲ, ತಪ್ಪು ಮಾಹಿತಿ ನೀಡಿದವರ ವಿರುದ್ದ ಕ್ರಮ: ಡಾ.ಜಿ.ಪರಮೇಶ್ವರ್ ಎಚ್ಚರಿಕೆ

ಬೆಂಗಳೂರು: ಪೊಲೀಸರು ಹಣೆಗೆ ಕುಂಕುಮ, ವಿಭೂತಿ ಹಚ್ಚಿಕೊಳ್ಳಬಾರದು ಎಂದು ನಾನು ಯಾವುದೇ ಸೂಚನೆಗಳನ್ನು ಕೊಟ್ಟಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದು, ತಪ್ಪು ಮಾಹಿತಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಬೊಟ್ಟು, ವಿಭೂತಿ ಏನು ಬೇಕಾದರೂ ಇಟ್ಟುಕೊಳ್ಳಬಹುದು.  ಅವರು ಯುನಿಫಾರ್ಮ್ ನಲ್ಲಿ ಕೆಲಸ ಮಾಡಬೇಕು. ಅವರಿಗೆ ಅವರದ್ದೇ ಆದ ಪೊಲೀಸ್ ರೂಲ್ಸ್ ಚೌಕಟ್ಟು ಇದೆ. ಅದರೊಳಗೆ ಏನೂ ಬೇಕಾದರೂ ಮಾಡಬಹುದು.  ನಾನು ಏನನ್ನೂ ಹೇಳಿಲ್ಲ. ಸ್ಪಷ್ಟವಾಗಿ […]

ರಾಜಕೀಯ

ಈ ವರ್ಷವೇ ಪಠ್ಯ ಪರಿಷ್ಕರಣೆಯಾಗಲಿದೆ: ಸಚಿವ ಮಧು ಬಂಗಾರಪ್ಪ

  ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದ ಬಳಿಕ, ಪಠ್ಯಪುಸ್ತಕ ಪರಿಷ್ಕರಣೆ ಮಾಡಬೇಕು ಎಂದು ನಾಡಿನ ಪ್ರಜ್ಞಾವಂತರು ಮುಖ್ಯಮಂತ್ರಿಯವರು ಮನವಿ ಮಾಡಿದ್ದರು. ”ಈ ವರ್ಷವೇ ಪಠ್ಯ ಪರಿಷ್ಕರಣೆಯಾಗಲಿದೆ. ಮಕ್ಕಳಿಗೆ ಅವಶ್ಯಕತೆ ಇಲ್ಲದ್ದನ್ನು ತಜ್ಞರು ಪರಿಶೀಲಿಸಿ ತೀರ್ಮಾನಿಸುತ್ತಾರೆ. ಮುಂದಿನ ಸಂಪುಟದಲ್ಲೇ ಚರ್ಚೆ ಮಾಡಲಾಗುತ್ತದೆ” ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.  ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”’ಆರಂಭದಲ್ಲಿ ಸೇತು ಬಂಧ ಇರಲಿದೆ. ಮಕ್ಕಳು ಪಠ್ಯಕ್ಕೆ ಹೋಗಲ್ಲ. ಮತ್ತು ಪಠ್ಯದಲ್ಲಿ ಏನು ಓದಿಸಬೇಕು, […]

ಕರಾವಳಿ ರಾಜಕೀಯ

ಮುದರಂಗಡಿಯಲ್ಲಿ  ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಅಭಿನಂದನಾ ಸಮಾರಂಭ

ಭಾರತೀಯ ಜನತಾ ಪಾರ್ಟಿ ಮಹಾಶಕ್ತಿ ಕೇಂದ್ರ ಮುದರಂಗಡಿ ಇದರ ವತಿಯಿಂದ ಮುದರಂಗಡಿಯ ಸ್ಪಂದನ ಸಭಾಭವನದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಅಭಿನಂದನಾ ಸಮಾರಂಭ ನೆರವೇರಿತು.  ಈ ಸಂದರ್ಭದಲ್ಲಿ ನಿಕಟಪೂರ್ವ ಶಾಸಕ  ಲಾಲಾಜಿ ಆರ್ ಮೆಂಡನ್, ಕಾಪು ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ, ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಯೋಗಿಣಿ ಶೆಟ್ಟಿ, ಮುದರಂಗಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿವರಾಮ್ […]

ದೇಶ-ವಿದೇಶ ರಾಜಕೀಯ

 ಮಣಿಪುರದಲ್ಲಿ ಹಿಂಸಾಚಾರ ತಡೆಯಲು ಗೃಹ ಸಚಿವ ಅಮಿತ್ ಶಾ ಮನೆ ಎದುರು ಕುಕಿ ಬುಡಕಟ್ಟು ಮಹಿಳೆಯರಿಂದ ಪ್ರತಿಭಟನೆ

ನವದೆಹಲಿ:   ಮಣಿಪುರದ ಕುಕಿ ಬುಡಕಟ್ಟಿನ ಮಹಿಳೆಯರು ರಾಜ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರವನ್ನು ತಡೆಯುವಂತೆ ಮನವಿಯ ಫಲಕಗಳನ್ನು ಹಿಡಿದು ನವದೆಹಲಿಯಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದ ಹೊರಗೆ ಬುಧವಾರ ಪ್ರತಿಭಟನೆ ನಡೆಸಿದರು.  ಈ ಬಗ್ಗೆ ಮಾತನಾಡಿದ ಪ್ರತಿಭಟನಾಕಾರರು, ”ಶಾಂತಿ ಮರುಸ್ಥಾಪಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಆದರೆ ಮಣಿಪುರದಲ್ಲಿ ನಮ್ಮ ಸಮುದಾಯದ ಮೇಲೆ ದಾಳಿಗಳು ಮುಂದುವರೆಯುತ್ತಲೇ ಇವೆ. ನಮ್ಮವರ ಜೀವಗಳು ಅಪಾಯದಲ್ಲಿದೆ. ಗೃಹ ಸಚಿವ ಮತ್ತು ಪ್ರಧಾನಿ ನರೇಂದ್ರ ಮೋದಿ ಮಾತ್ರ ನಮಗೆ ಸಹಾಯ […]

ರಾಜಕೀಯ

13 ಸಂಸದರ ವಿರುದ್ಧ ಅಪಪ್ರಚಾರ, ಟಿಕೆಟ್ ಇಲ್ಲವೆಂದು ಸುದ್ದಿ ಹಬ್ಬಿಸುತ್ತಿದ್ದಾರೆ, ಸೋಲಿನ ನೆಪದಲ್ಲಿ ಮನೋಸ್ತೈರ್ಯ ಕುಗ್ಗಿಸುವ ಯತ್ನ ನಡೆದಿದೆ ; ಡಿವಿಎಸ್

ಬೆಂಗಳೂರು: ಬಿಜೆಪಿ  ಪಕ್ಷದ 13 ಮಂದಿ ಸಂಸದರ ವಿರುದ್ಧ ವ್ಯವಸ್ಥಿತ ರೀತಿಯ ಅಪಪ್ರಚಾರ ನಡೆದಿದೆ. ನಮಗೆಲ್ಲ ವಯಸ್ಸಾಗಿದೆ, ಅನಾರೋಗ್ಯದ ಕಾರಣ ನೀಡಿ ಟಿಕೆಟ್‌ ನಿರಾಕರಣೆಯ ಹಬ್ಬಿಸಲಾಗುತ್ತಿದೆ.  ಇದಕ್ಕೆಲ್ಲ ರಾಷ್ಟ್ರೀಯ ನಾಯಕರು ತೆರೆ ಎಳೆಯಬೇಕಾಗಿದೆ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಬೆಂಗಳೂರಿನಲ್ಲಿ ಹೇಳಿದ್ದಾರೆ. ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿಯಿದೆ. ಇದರ ನಡುವಲ್ಲೇ ಚುನಾವಣೆ ಸೋಲಿನ ನೆಪದಲ್ಲಿ ನಾಯಕರ ಮನೋ ಸೈರ್ಯವನ್ನು ಕುಗ್ಗಿಸುವ ಯತ್ನ ನಡೆದಿದೆ. ಪಕ್ಷದ ನಾಯಕರನ್ನು ನಿರ್ವೀಯ್ರಗೊಳಿಸುವ ಪ್ರಯತ್ನ ನಡೆದಿದೆ. […]

ರಾಜಕೀಯ

ಪಠ್ಯಪುಸ್ತಕ ಬದಲಿಸುವ ದುಸ್ಸಾಹಸಕ್ಕೆ ಕೈ ಹಾಕಬೇಡಿ: ಉಡುಪಿಯಲ್ಲಿ  ಮಾಜಿ ಸಚಿವ ಸುನಿಲ್ ಕುಮಾರ್

ಉಡುಪಿ : ಅಧಿಕಾರಕ್ಕೆ ಬಂದ ಕೇವಲ ಒಂದು ತಿಂಗಳ ಒಳಗೆ ಬಿಜೆಪಿ ಸರಕಾರದ ಎಲ್ಲವನ್ನೂ ಬದಲಿಸಲು ಸರಕಾರ ಹೊರಟಿದೆ. ಪಠ್ಯಪುಸ್ತಕ ಪರಿಷ್ಕರಣೆಯನ್ನು ಬಿಜೆಪಿ ಸರಕಾರ ಮಾಡಿದ್ದು, ಅದನ್ನು ಮತ್ತೆ ಬದಲಿಸುವ ದುಸ್ಸಾಹಸಕ್ಕೆ ಕಾಂಗ್ರೆಸ್ ಸರಕಾರ ಕೈಹಾಕಬಾರದು ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.  ಆರೆಸ್ಸೆಸ್ ಸಂಸ್ಥಾಪಕ ಹೆಗಡೆವಾರ್ ಪಠ್ಯವನ್ನು ಕೈಬಿಡುವ ಸರಕಾರದ ಕ್ರಮದ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಪಠ್ಯ ಪುಸ್ತಕದಲ್ಲಿ ರಾಷ್ಟ್ರೀಯವಾದಿ ವಿಚಾರಗಳನ್ನು ನಾವು ಸೇರಿಸಿದ್ದೇವೆ. ದೇಶದ ಸಂಸ್ಕೃತಿಯನ್ನು ಬಿಂಬಿಸುವ ವಿಚಾರಗಳನ್ನು ಅಳವಡಿಸಿದ್ದೇವೆ. ಅದನ್ನು […]

ರಾಜಕೀಯ

ಡ್ರಗ್ಸ್ , ಮಟ್ಕಾ ದಂಧೆಗೆ ಕಡಿವಾಣ- ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ್

ಉಡುಪಿ: ಜಿಲ್ಲಾ ಪ್ರವಾಸದಲ್ಲಿರುವ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಉಡುಪಿ ಎಸ್ಪಿ ಕಚೇರಿಯಲ್ಲಿ ಸಮಾಲೋಚನಾ  ಸಭೆ ನಡೆಸಿದರು. ಎಡಿಜಿಪಿ ಅಲೋಕ್ ಕುಮಾರ್ , ಐಜಿಪಿ ಚಂದ್ರಗುಪ್ತ, ಉಡುಪಿ ಎಸ್ಪಿ ಅಕ್ಷಯ್ , ಎಎನ್ ಎಫ್ ಎಸ್ ಪಿ ಪ್ರಕಾಶ್ ನಿಕ್ಕಂ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾದರು.  ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವರು ,ಕರಾವಳಿ ಪ್ರದೇಶದಲ್ಲಿ ನಡೆಯುತ್ತಿರುವ ಘಟನೆಗಳ ಮಾಹಿತಿ ಪಡೆದಿದ್ದೇನೆ. ನೈತಿಕ ಪೊಲೀಸ್ ಗಿರಿ ಹತ್ತಿಕ್ಕುವ ಕ್ರಮದ ಬಗ್ಗೆ ಚರ್ಚೆಯಾಗಿದೆ. […]

ಪ್ರಯಾಣ ರಾಜಕೀಯ

ಉಡುಪಿ ಬ್ರೇಕಿಂಗ್‌ : ಕೊಲ್ಲೂರು ಮೂಕಾಂಬಿಕಾ ದೇವಳಕ್ಕೆ ಗೃಹ ಸಚಿವರ ಭೇಟಿ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಬುಧವಾರ ಬೆಳಿಗ್ಗೆ ಭೇಟಿ ನೀಡಿದ ಗೃಹಸಚಿವ ಡಾ.ಜಿ. ಪರಮೇಶ್ವರ್ ರವರು ಕುಟುಂಬ ಸಮೇತರಾಗಿ ಪೂಜೆಯಲ್ಲಿ ಭಾಗಿ ಆದರು. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಣಾನ. ದೇವಳದ ಚಂಡಿಕಾಹೋಮ ಕಾರ್ಯಕ್ರಮದಲ್ಲಿ ಡಾ.ಜಿ. ಪರಮೇಶ್ವರ್   ಉಪಸ್ಥಿತಿ ದೇವಳದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಅಡಿಗರ ನೇತ್ರತ್ವದಲ್ಲಿ ನಡೆದ ಚಂಡಿಕಾ ಹೋಮ ನಡೆದಿದ್ದು.  ಧರ್ಮ ಪತ್ನಿಯೊಂದಿಗೆ   ಸಚಿವರು ಭಾಗಿ ಆದರು.   ನೂತನ ಗೃಹ ಸಚಿವರನ್ನು ದೇವಳದ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ೦೦೦೦೦೦೦೦೦೦೦೦

ರಾಜಕೀಯ

ಬಿಜೆಪಿ ಸರಕಾರ ಗೋವುಗಳ ಸಂರಕ್ಷಣೆಗಾಗಿ‌ ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ತಂದಿದೆ: ಕೋಟ

  ಉಡುಪಿ: ಗೋವುಗಳನ್ನು ಕಡಿದರೆ ಏನಾಗುತ್ತದೆ ಎಂಬ ರಾಜ್ಯ ಪಶುಸಂಗೋಪನೆ ಸಚಿವರ ಹೇಳಿಕೆಗೆ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.  ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಕೋಟ ಶ್ರೀನಿವಾಸ್ ಪೂಜಾರಿ, ಬಿಜೆಪಿ ಸರಕಾರ ಗೋವುಗಳ ಸಂರಕ್ಷಣೆಗಾಗಿ‌ ಮತ್ತು ಕೃಷಿಕರ ಅನುಕೂಲಕ್ಕಾಗಿ ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ತಂದಿದೆ. ಸಾಧು ಸಂತರ ಅಭಿಪ್ರಾಯಗಳಿಗೆ ಅನುಗುಣವಾಗಿ ಈ ಕಾಯಿದೆ ತರಲಾಗಿದೆ. ಆದರೆ ಸಚಿವರ ಈ ಹೇಳಿಕೆ ಆಶ್ಚರ್ಯ ತಂದಿದೆ. ಮುಖ್ಯಮಂತ್ರಿಗಳು ತಮ್ಮ ಸಚಿವರನ್ನು ಕರೆದು ಈ […]

ಕರಾವಳಿ ರಾಜಕೀಯ

ವಿಶ್ವಪರಿಸರದಿನಾಚರಣೆ: ಕಾಂಡ್ಲಾಸಸಿನೆಟ್ಟ ಸಚಿವೆಶೋಭಾಕರಂದ್ಲಾಜೆ

ವಿಶ್ವಪರಿಸರ ದಿನಾಚರಣೆ: ಕಾಂಡ್ಲಾ ಸಸಿ ನೆಟ್ಟ ಸಚಿವೆ ಶೋಭಾ ಕರಂದ್ಲಾಜೆ ಉಡುಪಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಯವರು ಇಂದು ಕಾಂಡ್ಲಾ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗಹಿಸಿದರು. ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ವರ್ಚುವಲ್ ಮಾಧ್ಯಮದ ಮೂಲಕ ವಿಶ್ವ ಪರಿಸರ ದಿನವನ್ನು ಉದ್ಘಾಟಿಸಿ, ಮಾತನಾಡಿದರು. ಉಡುಪಿ ಜಿಲ್ಲೆಯ, ಕುಂದಾಪುರದ ಕೊಡಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕುಂದಾಪುರ ಶಾಸಕರಾದ ಕಿರಣ್ ಕೊಡ್ಗಿ ಮತ್ತು ಸ್ಥಳೀಯ ಅಧಿಕಾರಿಗಳು ಭಾಗವಹಿಸಿದ್ದರು.

eMedia Kannada  @2025. All Rights Reserved.