Tag: puttige shri sugunendra swameeji

ಧಾರ್ಮಿಕ ಸನ್ಮಾನ, ಅಭಿನಂದನೆ

 ಶ್ರೀಮತಿ ಪೂರ್ಣಿಮಾರವರಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಗೌರವ (Shri Krishna Janmashtami tribute to Mrs. Purnima)

 ಶ್ರೀಮತಿ ಪೂರ್ಣಿಮಾರವರಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಗೌರವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ (Udupi) ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾರವರಿಗೆ ಶ್ರೀ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಶ್ರೀಕೃಷ್ಣ ಜನ್ಮಾಷ್ಠಮಿಯಂದು ಜನ್ಮಾಷ್ಠಮಿ ಗೌರವ ನೀಡಿ ಅಭಿನಂದಿಸಿದರು.    ಈ ಸಂದರ್ಭದಲ್ಲಿ ಪುತ್ತಿಗೆ ಕಿರಿಯ ಮಠಾಧೀಶ  ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.

ಧಾರ್ಮಿಕ

ಉಡುಪಿ ಅಷ್ಟಮಿ ಪ್ರಯುಕ್ತ ಶ್ರೀಕೃಷ್ಣನಿಗೆ ಮದ್ಯರಾತ್ರಿ ಅರ್ಘ್ಯ ಪ್ರದಾನ (Arghya offered to Lord Krishna at midnight on the occasion of Udupi Ashtami)

ಉಡುಪಿ ಅಷ್ಟಮಿ ಪ್ರಯುಕ್ತ ಶ್ರೀಕೃಷ್ಣನಿಗೆ ಮದ್ಯರಾತ್ರಿ ಅರ್ಘ್ಯ ಪ್ರದಾನ ಇಂದು ವಿಟ್ಲಪಿಂಡಿ ಸಡಗರ, ಚಿನ್ನದ ರಥದಲ್ಲಿ ಕೃಷ್ಣನ ಮೂರ್ತಿ ಮೆರವಣಿಗೆ (Udupi) ಉಡುಪಿ: ಉಡುಪಿಯಲ್ಲಿ ಅಷ್ಟಮಿ ಸಂಭ್ರಮ ಪರಾಕಾಷ್ಟೆ ತಲುಪಿದೆ. ನಿನ್ನೆ ಅಷ್ಟಮಿಯಾದರೆ ಇಂದು ವಿಟ್ಲಪಿಂಡಿ ಸಡಗರ. ಸಾವಿರಾರು ಭಕ್ತರು ಹಬ್ಬದ ಹಿನ್ನೆಲೆಯಲ್ಲಿ ಮಠಕ್ಕೆ ಆಗಮಿಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.    ನಿನ್ನೆ ಇಡೀ ದಿನ ಉಪವಾಸದಲ್ಲಿದ್ದ ಭಕ್ತರು, ತಡರಾತ್ರಿ ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಿದರು.    ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು […]

fastival

ಉಡುಪಿ : ಅಷ್ಟಮಿಗೆ ಲಕ್ಷಾಂತರ ಉಂಡೆ ಚಕ್ಕುಲಿ ರೆಡಿ- ಮಠ ರಥಬೀದಿಯಲ್ಲಿ ಹಬ್ಬದ ಕಳೆ (Udupi: Lakhs of lumps of chakkuli ready for Ashtami – festive atmosphere on Matha Rathbedi)

ಉಡುಪಿ : ಅಷ್ಟಮಿಗೆ ಲಕ್ಷಾಂತರ ಉಂಡೆ ಚಕ್ಕುಲಿ ರೆಡಿ– ಮಠ ರಥಬೀದಿಯಲ್ಲಿ ಹಬ್ಬದ ಕಳೆ  15ರಂದು ಕೃಷ್ಣ ಲೀಲೋತ್ಸವಕ್ಕೆ (ವಿಟ್ಲಪಿಂಡಿ) ಭರದ ಸಿದ್ಧತೆ (Udupi) ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಲಕ್ಷಾಂತರ ಸಂಖ್ಯೆಯಲ್ಲಿ ಉಂಡೆ ಚಕ್ಕುಲಿಗಳು ಈಗಾಗಲೇ ಸಿದ್ದಗೊಳ್ಳುತ್ತಿದ್ದು, ಹಲವಾರು ಮಂದಿ ಪಾಕ ತಜ್ಞರು ಇದರ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.     ಶ್ರೀ ಕೃಷ್ಣ ಹಾಗೂ ಮಕ್ಕಳು ಇಷ್ಟಪಡುವ ಪ್ರಸಾದ ಇದಾಗಿದ್ದು, ಅಷ್ಟಮಿಯ ಮರುದಿನ ನಡೆಯುವ ಅನ್ನಸಂತರ್ಪಣೆ ಸಂದರ್ಭದಲ್ಲಿ ಪ್ರಸಾದ […]

ಮನೋರಂಜನೆ

ಉಡುಪಿ ಶ್ರೀ ಕೃಷ್ಣಮಠದಲ್ಲಿ ಡಾ. ಗಣೇಶ್ ಗಂಗೊಳ್ಳಿ ತಂಡದಿಂದ ಜಾನಪದ, ದಾಸವಾಣಿ (Folklore, Dasavani by Dr. Ganesh Gangolli’s team at Udupi Sri Krishna Math)

ಉಡುಪಿ ಶ್ರೀ ಕೃಷ್ಣಮಠದಲ್ಲಿ ಡಾ. ಗಣೇಶ್ ಗಂಗೊಳ್ಳಿ ತಂಡದಿಂದ ಜಾನಪದ, ದಾಸವಾಣಿ ಪರ್ಯಾಯ ಶ್ರೀಪಾದರಿಂದ ಎಲ್ಲಾ ಕಲಾವಿದರಿಗೂ ಆಶೀರ್ವಾದ, ಅಭಿನಂದನೆ (Udupi) ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ ಉಡುಪಿ ಇವರ ಶ್ರೀ ಕೃಷ್ಣ  ಅಷ್ಟಮಿಯ ವಿಶೇಷ 48 ದಿನದ ಮಂಡಲೋತ್ಸವ ಕಾರ್ಯಕ್ರಮದ ಅಂಗವಾಗಿ   ಪ್ರಸಿದ್ಧ ಗಾಯಕ ಕರ್ನಾಟಕ ಸರಕಾರದ ಜಾನಪದ ಆಕಾಡೆಮಿ ರಾಜ್ಯ ಪ್ರಶಸ್ತಿ ಪುರಸ್ಕೃತ ಗಾಯಕ ಡಾ. ಗಣೇಶ್ ಗಂಗೊಳ್ಳಿ ಇವರ ಬಳಗದವರಿಂದ ಜಾನಪದ ಮತ್ತು ದಾಸವಾಣಿ ಸಂಗೀತ ಕಾರ್ಯಕ್ರಮ ಜರುಗಿತು. […]

ಧಾರ್ಮಿಕ

ವರ್ಧಂತಿ ಪ್ರಯುಕ್ತ ಕೃಷ್ಣನಿಗೆ ವಿಶ್ವರೂಪ ಕವಚ ಸಮರ್ಪಣೆ (Offering of Vishwaroop Kavacha to Krishna on the occasion of Vardhanti)

ವರ್ಧಂತಿ ಪ್ರಯುಕ್ತ ಕೃಷ್ಣನಿಗೆ ವಿಶ್ವರೂಪ ಕವಚ ಸಮರ್ಪಣೆ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ (Udupi) ಉಡುಪಿ: ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ 64ನೇ ಜನ್ಮನಕ್ಷತ್ರ (ವರ್ಧಂತಿ) ಅಂಗವಾಗಿ   ಶ್ರೀಕೃಷ್ಣನಿಗೆ ವಿಶ್ವರೂಪ ದರ್ಶನ ಅಲಂಕಾರದ ಚಿನ್ನದ ಕವಚ ತೊಡಿಸಲಾಯಿತು.   ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಕವಚವನ್ನು ಶ್ರೀಕೃಷ್ಣನಿಗೆ ತೊಡಿಸಿದರು.  ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಶ್ರೀಕೃಷ್ಣನಿಗೆ ವಿಶ್ವತೋಮುಖಃ ಅಲಂಕಾರ ಮಾಡಿದರು.  ಶ್ರೀ […]

social service ರಾಜಕೀಯ

ಉಡುಪಿ: ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಅನ್ನ ಸಂತರ್ಪಣೆಗೆ ಶಾಸಕರಿಂದ ಚಾಲನೆ (Udupi: MLA launches Anna Santarpane for Girls’ Government Pre-University College)

ಉಡುಪಿ: ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಅನ್ನ ಸಂತರ್ಪಣೆಗೆ ಶಾಸಕರಿಂದ ಚಾಲನೆ (Udupi) ಉಡುಪಿ: ಉಡುಪಿ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ಶ್ರೀ ಕೃಷ್ಣ ಅನ್ನ ಪ್ರಸಾದ  ಅನ್ನಸಂತರ್ಪಣೆಗೆ ಉಡುಪಿ ಶಾಸಕ  ಯಶ್‌ಪಾಲ್ ಸುವರ್ಣ ಚಾಲನೆ ನೀಡಿದರು.  ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶ್‌ಪಾಲ್ ಸುವರ್ಣ, ನಗರದ ಕೇಂದ್ರ ಭಾಗದಲ್ಲಿರುವ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 500 ವಿದ್ಯಾರ್ಥಿನಿಯರು ಶಿಕ್ಷಣ […]

ಪುಸ್ತಕ ಬಿಡುಗಡೆ

ಉಡುಪಿ: ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯರ ಭಗವದ್ ಗೀತೆ ಹಾಗೂ ಹಾಡುಗಬ್ಬಗಳ ಪುಸ್ತಕ ಬಿಡುಗಡೆ (Udupi: Book of Bhagavad Gita and Song Gabbagas by Vidyavachaspati Dr. Bannanje Govindacharya released)

 ಉಡುಪಿ:  ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯರ ಭಗವದ್ ಗೀತೆ ಹಾಗೂ ಹಾಡುಗಬ್ಬಗಳ ಪುಸ್ತಕ ಬಿಡುಗಡೆ (Udupi) ಉಡುಪಿ: ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯರ ಭಗವದ್ ಗೀತೆ ಹಾಗೂ ಹಾಡುಗಬ್ಬಗಳ ಪುಸ್ತಕವನ್ನು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಉಭಯ ಶ್ರೀಪಾದರು ಬಿಡುಗಡೆಗೊಳಿಸಿದರು. ಮಠದ ಸುಗುಣಮಾಲಾ ಪತ್ರಿಕೆಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಶ್ರೀ ಬನ್ನಂಜೆಯವರ ಒಡನಾಟವನ್ನು ಸ್ಮರಿಸಿಕೊಂಡ ಪೂಜ್ಯ ಪರ್ಯಾಯ ಶ್ರೀಪಾದರು, ಆಚಾರ್ಯರ ಕೃತಿಗಳು ಅದ್ವಿತೀಯವಾಗಿದ್ದು ಇನ್ನಷ್ಟು ಅವರ ಅಪೂರ್ವ ಕೃತಿಗಳು ಬೇಗನೆ ಜೀಜಾಸುಗಳಿಗೆ ಸಿಗುವಂತಾಗಲಿ ಎಂದು ಹಾರೈಸಿದರು. ಭಗವದ್ಗೀತೆಯ […]

ಧಾರ್ಮಿಕ

ಉಡುಪಿ : ಅಕ್ಷಯ ತೃತೀಯ ಸಂದರ್ಭ ಶ್ರೀ ಕೃಷ್ಣನಿಗೆ ಸುವರ್ಣಾಭಿಷೇಕ (Udupi: Golden Abhisheka of Lord Krishna on the occasion of Akshaya Tritiya)

ಉಡುಪಿ : ಅಕ್ಷಯ ತೃತೀಯ ಸಂದರ್ಭ ಶ್ರೀ ಕೃಷ್ಣನಿಗೆ ಸುವರ್ಣಾಭಿಷೇಕ (Udupi) ಉಡುಪಿ: ಇಂದು ಅಕ್ಷಯ ತೃತೀಯ. ಈ ದಿನವನ್ನು ಇತ್ತೀಚಿನ ವರ್ಷಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿದೆ. ಅಕ್ಷಯ ತೃತೀಯ ಪರ್ವ ದಿನವಾದ ಇಂದು ಶ್ರೀಕೃಷ್ಣನಿಗೆ ಸುವರ್ಣ ತುಲಾಭಾರ ಸಂದರ್ಭ ಕೃಷ್ಣನ ಮೂಲ ವಿಗ್ರಹಕ್ಕೆ ಪರ್ಯಾಯ ಶ್ರೀ ಪಾದರ ಉಪಸ್ಥಿತಿಯಲ್ಲಿ ಪುತ್ತಿಗೆ ಕಿರೀಯ ಶ್ರೀಪಾದರು ಸುವರ್ಣ ಕನಕಾಭಿಷೇಕ ನೆರವೇರಿಸಿದರು. ಸಾಯಂ ಸುವರ್ಣತುಲಾಭಾರ ಸೇವೆ ನೀಡಿದವರಿಗೆ ಪ್ರಸಾದ ರೂಪದಲ್ಲಿ ಇದನ್ನು ವಿತರಿಸಲಾಗುತ್ತದೆ.

ಧಾರ್ಮಿಕ

ಉಡುಪಿ ಶ್ರೀಕೃಷ್ಣ ಮಠಕ್ಕೆ ಬಿಜೆಪಿ  ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್  ಭೇಟಿ (BJP Organizing Secretary B.L. Santosh visits Udupi Sri Krishna Mutt)

ಉಡುಪಿ ಶ್ರೀಕೃಷ್ಣ ಮಠಕ್ಕೆ ಬಿಜೆಪಿ  ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್  ಭೇಟಿ (Udupi) ಉಡುಪಿ : ಬಿಜೆಪಿಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಇಂದು  ಶ್ರೀ ಕೃಷ್ಣ ದರ್ಶನ ಪಡೆದರು.  ತದನಂತರ ಗೋ ಶಾಲೆಗೆ ತೆರಳಿ ಗೋ ಸೇವೆ ಮಾಡಿ,  ಗೀತಾ ಮಂದಿರದಲ್ಲಿ ಪರ್ಯಾಯ ಉಭಯ ಶ್ರೀಪಾದರಿಂದ ಅನುಗ್ರಹ ಪ್ರಸಾದ ಸ್ವೀಕರಿಸಿದರು.  ಪರ್ಯಾಯ ಪುತ್ತಿಗೆ ಶ್ರೀಪಾದರು ಸಂತೋಷರವರ  ದೇಶ ಸೇವೆಯ ಕಾರ್ಯವನ್ನು ಮೆಚ್ಚಿ ಪ್ರದಾನಿಸಿದರು.  ಕೋಟಿ ಗೀತಾ ಲೇಖನ ಯಜ್ಞ ಅಭಿಯಾನದ ವಿವರವನ್ನು ಪಡೆದುಕೊಂಡ ಸಂತೋಷ್, […]

ಸಂಘ, ಸಂಸ್ಥೆಗಳು

ಪಂಚಮಿ ಟ್ರಸ್ಟ್(ರಿ.) ಉಡುಪಿ ಇದರ ಬೆಳ್ಳಿಹಬ್ಬದ ಆಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ (Panchami Trust (R.) Udupi releases invitation for its silver jubilee celebration)

ಪಂಚಮಿ ಟ್ರಸ್ಟ್(ರಿ.) ಉಡುಪಿ ಇದರ ಬೆಳ್ಳಿಹಬ್ಬದ ಆಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ (Udupi) ಉಡುಪಿ : ಪಂಚಮಿ ಟ್ರಸ್ಟ್ (ರಿ.) ಉಡುಪಿ ಕಳೆದ 25 ವರ್ಷಗಳಿಂದ ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಇದೇ ಬರುವ ಮೇ 4, 2025ರಂದು ಬೆಳ್ಳಿ ಹಬ್ಬವನ್ನು ಆಚರಿಸುತ್ತಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಬಿಡುಗಡೆಗೊಳಿಸಿದರು. ಪಂಚಮಿ ಟ್ರಸ್ಟ್ (ರಿ.) ಉಡುಪಿ ಇದರ ಟ್ರಸ್ಟಿಗಳಾದ ಎಂ. ಹರಿಶ್ಚಂದ್ರ, […]

eMedia Kannada  @2025. All Rights Reserved.