• Home  
  • ಉಡುಪಿ: ವಂದೇ ಭಾರತ್ ರೈಲಿಗೆ ಉಡುಪಿಯಲ್ಲಿ ಅದ್ಧೂರಿ ಸ್ವಾಗತ (Vande Bharath train gets Grand welcome in Udupi)
- ಪ್ರಯಾಣ - ರಾಜಕೀಯ

ಉಡುಪಿ: ವಂದೇ ಭಾರತ್ ರೈಲಿಗೆ ಉಡುಪಿಯಲ್ಲಿ ಅದ್ಧೂರಿ ಸ್ವಾಗತ (Vande Bharath train gets Grand welcome in Udupi)

Share: ಉಡುಪಿ: ವಂದೇ ಭಾರತ್ ರೈಲಿಗೆ ಉಡುಪಿಯಲ್ಲಿ ಅದ್ಧೂರಿ ಸ್ವಾಗತ (UDUPI) ಉಡುಪಿ: ಇವತ್ತು ಪ್ರಧಾನಿ ಮೋದಿ ಅವರು ಭಾರತದ ಭಾರತದಾದ್ಯಂತ  6 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದಾರೆ.  ಈ ಪೈಕಿ ಮಂಗಳೂರು ಮಡಗಾಂವ್ ರೈಲು ಕೂಡ ಸೇರಿದೆ. ಮಂಗಳೂರು ಮಡಗಾಂವ್ ರೈಲು ಇವತ್ತು ಪ್ರಾಯೋಗಿಕ ಸಂಚಾರ ಆರಂಭಿಸಿತು. ಉಡುಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತಿತರ ಜನಪ್ರತಿನಿಧಿಗಳು ವಂದೇ ಭಾರತ್ ರೈಲಿಗೆ ಸ್ವಾಗತ ಕೋರಿ ಹಸಿರು ನಿಶಾನೆ ತೋರಿಸಿದರು.  ಈ ಹಿನ್ನೆಲೆಯಲ್ಲಿ ಇವತ್ತು ಬೆಳಗ್ಗಿನಿಂದಲೇ […]

ಉಡುಪಿ: ವಂದೇ ಭಾರತ್ ರೈಲಿಗೆ ಉಡುಪಿಯಲ್ಲಿ ಅದ್ಧೂರಿ ಸ್ವಾಗತ

(UDUPI) ಉಡುಪಿ: ಇವತ್ತು ಪ್ರಧಾನಿ ಮೋದಿ ಅವರು ಭಾರತದ ಭಾರತದಾದ್ಯಂತ  6 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದಾರೆ.

 ಈ ಪೈಕಿ ಮಂಗಳೂರು ಮಡಗಾಂವ್ ರೈಲು ಕೂಡ ಸೇರಿದೆ. ಮಂಗಳೂರು ಮಡಗಾಂವ್ ರೈಲು ಇವತ್ತು ಪ್ರಾಯೋಗಿಕ ಸಂಚಾರ ಆರಂಭಿಸಿತು. ಉಡುಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತಿತರ ಜನಪ್ರತಿನಿಧಿಗಳು ವಂದೇ ಭಾರತ್ ರೈಲಿಗೆ ಸ್ವಾಗತ ಕೋರಿ ಹಸಿರು ನಿಶಾನೆ ತೋರಿಸಿದರು.

 ಈ ಹಿನ್ನೆಲೆಯಲ್ಲಿ ಇವತ್ತು ಬೆಳಗ್ಗಿನಿಂದಲೇ ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಜಂಗುಳಿ ನಿರ್ಮಾಣವಾಗಿತ್ತು. ನೂರಾರು ಜನರು ರೈಲಿನಲ್ಲಿ ಉಚಿತ ಪ್ರಯಾಣವನ್ನು ನಡೆಸಿದರು.

ರೈಲು ಉಡುಪಿಗೆ ಆಗಮಿಸುತ್ತಿದ್ದಂತೆ ಜನರ ಕರತಾಡನ ಮುಗಿಲು ಮುಟ್ಟಿತ್ತು. ಯಕ್ಷಗಾನ, ಚಂಡೆ ಸಹಿತ ಜನರು ರೈಲನ್ನು ಸ್ವಾಗತಿಸಿದರು. ಉಡುಪಿ ರೈಲು ನಿಲ್ದಾಣದಿಂದ ನೂರಾರು ಜನರು ವಂದೇ ಭಾರತ್ ರೈಲು ಏರಿ ಗೋವಾದತ್ತ ಪ್ರಯಾಣ ಬೆಳೆಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.