ಉಚ್ಚಿಲ ದಸರಾ 2023: ತಾಸೆ ಶಬ್ದಕ್ಕೆ ಹೆಜ್ಜೆ ಹಾಕಿದ ನಾಡೋಜಾ ಜಿ. ಶಂಕರ್, ಶಾಸಕ ಯಶ್ಪಾಲ್ ಸುವರ್ಣ
ಉಡುಪಿ\ ಉಚ್ಚಿಲ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ದಸರಾ ೨೦೨೩ ರ ಪ್ರಯುಕ್ತ ಪೊಣ್ಣು ಪಿಲಿ ನಡಿಕೆ ಸ್ಪರ್ಧೆಯಲ್ಲಿ ಮೊಗವೀರ ಮುಂದಾಳು ನಾಡೋಜಾ ಜಿ. ಶಂಕರ್, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿಕೋಟ್ಯಾನ್ ಬೆಳ್ಳಂಪಳ್ಳಿ, ವಾಸುದೇವ ಸಾಲ್ಯಾನ್ ಸಹಿತ ಗಣ್ಯರು ವೇದಿಕೆಯಲ್ಲಿ ತಾಸೆಯ ಶಬ್ದಕ್ಕೆ ಹೆಜ್ಜೆ ಹಾಕಿ ಕರಾವಳಿಯ ಹುಲಿ ನೃತ್ಯಕ್ಕೆ ಸಾಥ್ ನೀಡಿದರು.
