ಅಂತರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ, ಅಕ್ರಮ ಸಾಗಣೆ ವಿರುದ್ಧ ದಿನಾಚರಣೆ: ಉಡುಪಿ ಪೊಲೀಸರಿಂದ ಮಾದಕ ದ್ರವ್ಯ ವಿಲೇವಾರಿ

(Padubidri) ಪಡುಬಿದ್ರಿ: ಅಂತರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಆಕ್ರಮ ಸಾಗಣೆ ವಿರುದ್ಧ ದಿನಾಚರಣೆಯ ಅಂಗವಾಗಿ ಗುರುವಾರ ನಂದಿಕೂರಿನ ಆಯುಷ್ ಎನ್ವಿರೋಟಿಕ್ ಘಟಕದಲ್ಲಿ ಉಡುಪಿ ಜಿಲ್ಲಾ ಪೊಲೀಸರು ವಿವಿಧ ಠಾಣೆಗಳಲ್ಲಿ ವಶ ಪಡಿಸಿಕೊಂಡ ಮಾದಕ ದ್ರವ್ಯಗಳನ್ನು ವಿಲೇವಾರಿ ಮಾಡಲಾಯಿತು.
ಉಡುಪಿ ಜಿಲ್ಲೆಯ ಆರು ಠಾಣೆಗಳಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ಆಯುಷ್ ಘಟಕದಲ್ಲಿ ಬೆಂಕಿಗೆ ಹಾಕಿ ಭಸ್ಮ ಮಾಡಲಾಯಿತು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಪೊಲೀಸರು ವಶ ಪಡಿಸಿಕೊಂಡ ಮಾದಕ ವಸ್ತುಗಳನ್ನು ನಾವು ನಾಶ ಮಾಡುತ್ತಿದ್ದೇವೆ. ಇಂದು 2015 ರಿಂದ 2023 ರ ತನಕ 6 ಪ್ರಕರಣಗಳ ಡ್ರಗ್ಸ್ ನಾಶ ಮಾಡಲಾಗುತ್ತಿದೆ. ಈಗಾಗಲೇ ಫೆ.14ರಂದು ನಾಶ ಪಡಿಸಲಾಗಿದೆ.
ಇಂದು 3ಲಕ್ಷದ ಎಂಬತ್ತು ಸಾವಿರ ರೂಪಾಯಿ ಅಂದಾಜು ಮೌಲ್ಯದ ಗಾಂಜಾ ಅಫೀಮು ಮತ್ತು ಎಂಡಿಎಂಎ ನಾಶ ಮಾಡುತ್ತಿದ್ದೇವೆ ಮಾನ್ಯ ನ್ಯಾಯಾಲಯ ಆದೇಶಾನುಸಾರ ಮಾದಕ ದ್ರವ್ಯವನ್ನು ಡಿಸ್ ಪೋಸ್ ಮಾಡುತ್ತಿದೆ ಎಂದರು.
ಈ ಸಂದರ್ಭ ಎಡಿಷನಲ್ ಎಸ್ ಪಿ ಪರಮೇಶ್ವರ್ ಹೆಗಡೆ, ಎ ಎಸ್ ಪಿ ಕಾರ್ಕಳ ಹಷಂ ಪ್ರಿಯಂವದ, ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾಣೆ, ಪಡುಬಿದ್ರಿ ಠಾಣಾಧಿಕಾರಿ ಶಕ್ತಿ ವೇಲು ಉಪಸ್ಥಿತರಿದ್ದರು.

