• Home  
  • ಅಪ್ರಾಪ್ತ ಬಾಲಕನಿಗೆ ಲೈಗಿಂಕ ಕಿರುಕುಳ, ಪೋಕ್ಸೋ ಕೇಸು ದಾಖಲು (Minor boy sexually assaulted, POCSO case registered)
- ಅಪರಾಧ

ಅಪ್ರಾಪ್ತ ಬಾಲಕನಿಗೆ ಲೈಗಿಂಕ ಕಿರುಕುಳ, ಪೋಕ್ಸೋ ಕೇಸು ದಾಖಲು (Minor boy sexually assaulted, POCSO case registered)

Share: ಅಪ್ರಾಪ್ತ ಬಾಲಕನಿಗೆ ಲೈಗಿಂಕ ಕಿರುಕುಳ, ಪೋಕ್ಸೋ ಕೇಸು ದಾಖಲು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿದ ಮಾನ್ಯ ನ್ಯಾಯಾಲಯ (Surathkal) ಸುರತ್ಕಲ್ : ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿ ಯೊಬ್ಬನನ್ನು ಸುರತ್ಕಲ್ ಪೊಲೀಸರು ಬಂಧಿಸಿ ಪೋಕ್ಸೋ ಕೇಸು ದಾಖಲಿಸಿ ಕೊಂಡಿದ್ದಾರೆ.     ಸುರತ್ಕಲ್ ಬಳಿಯ ಚೊಕ್ಕಬೆಟ್ಟು  ಜುಮ್ಮಾ ಮಸೀದಿ ಬಳಿ ಇರುವ ಹನಿ ಫ್ಯಾಷನ್ ಶಾಪ್, ಜನರಲ್ ಸ್ಟೋರ್  ಅಂಗಡಿ ಮಾಲಕನಾದ ಮೊಹಮ್ಮದ್ ಇಸ್ಮಾಯಿಲ್ ಬಂಧಿತ ಆರೋಪಿ.      6ನೇ ತರಗತಿ ಬಾಲಕ ಚಾಕೊಲೇಟ್ […]

(Surathkal) ಸುರತ್ಕಲ್ : ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿ ಯೊಬ್ಬನನ್ನು ಸುರತ್ಕಲ್ ಪೊಲೀಸರು ಬಂಧಿಸಿ ಪೋಕ್ಸೋ ಕೇಸು ದಾಖಲಿಸಿ ಕೊಂಡಿದ್ದಾರೆ.

    ಸುರತ್ಕಲ್ ಬಳಿಯ ಚೊಕ್ಕಬೆಟ್ಟು  ಜುಮ್ಮಾ ಮಸೀದಿ ಬಳಿ ಇರುವ ಹನಿ ಫ್ಯಾಷನ್ ಶಾಪ್, ಜನರಲ್ ಸ್ಟೋರ್  ಅಂಗಡಿ ಮಾಲಕನಾದ ಮೊಹಮ್ಮದ್ ಇಸ್ಮಾಯಿಲ್ ಬಂಧಿತ ಆರೋಪಿ.

     6ನೇ ತರಗತಿ ಬಾಲಕ ಚಾಕೊಲೇಟ್ ಖರೀದಿಸಲು ಹೋದಾಗ ಅಂಗಡಿಯಲ್ಲಿರುವ ರೂಂ ಒಂದರಲ್ಲಿ ಕೂಡಿ ಹಾಕಿ ಬಾಲಕನ ಕೈ-ಕಾಲನ್ನು ಹಗ್ಗದಿಂದ ಕಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.

    ನೊಂದ ಬಾಲಕ ನ ತಾಯಿ ನೀಡಿದ ದೂರಿನ ಮೇರೆಗೆ   ಪೋಕ್ಸೋ ಕಾಯ್ದೆ ಕಲಂ 351(2), 127(2) ಬಿ.ಎನ್.ಎಸ್ ರಂತೆ ಪ್ರಕರಣವನ್ನು ದಾಖಲಿಸಿಕೊಂಡು ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್ ರವರ ತಂಡ ಕೂಡಲೇ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿದ್ದಾರೆ.

    ರವಿವಾರ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.