• Home  
  • ಅಯೋಧ್ಯೆಯಿಂದ ಬಂದ ಪೇಜಾವರ ಶ್ರೀಗಳಿಂದ  ಕಾಪು ಹೊಸ ಮಾರಿಗುಡಿ ದೇವಳ ಭೇಟಿ : 9 ದೀಪ ಪ್ರಜ್ವಲನೆ (Pejavar Swami visit Kaup Hosamarigudi)
- ಧಾರ್ಮಿಕ

ಅಯೋಧ್ಯೆಯಿಂದ ಬಂದ ಪೇಜಾವರ ಶ್ರೀಗಳಿಂದ  ಕಾಪು ಹೊಸ ಮಾರಿಗುಡಿ ದೇವಳ ಭೇಟಿ : 9 ದೀಪ ಪ್ರಜ್ವಲನೆ (Pejavar Swami visit Kaup Hosamarigudi)

Share:  ಅಯೋಧ್ಯೆಯಿಂದ ಬಂದ ಪೇಜಾವರ ಶ್ರೀಗಳಿಂದ ಕಾಪು ಹೊಸ ಮಾರಿಗುಡಿ ದೇವಳ ಭೇಟಿ : 9 ದೀಪ ಪ್ರಜ್ವಲನೆ  (kaup) ಕಾಪು: ಪೇಜಾವರ ಮಠಾಧೀಶರಾದ  ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು (Pejavara Shri Vishwaprasanna Swamiji) ಅಯೋಧ್ಯೆ ಶ್ರೀ ರಾಮ ದೇವರ ಪ್ರಾಣಪ್ರತಿಷ್ಠೆ ಮತ್ತು 48 ದಿನಗಳ ಮಂಡಲೋತ್ಸವವನ್ನು ಮುಗಿಸಿ  ಭಾನುವಾರ ಇಳಕಲ್ಲ್ ಶಿಲೆಯಿಂದ ಶಿಲಾಮಯವಾಗಿ ನಿರ್ಮಾಣಗೊಳ್ಳುತ್ತಿರುವ ಇತಿಹಾಸ ಪ್ರಸಿದ್ಧ ಕಾಪು ಹೊಸ ಮಾರಿಗುಡಿ ದೇವಸ್ಥಾನದ ಮಾರಿಯಮ್ಮನ ಸನ್ನಿದಾನಕ್ಕೆ ಆಗಮಿಸಿ ಶ್ರೀದೇವಿಯ ದರ್ಶನ ಪಡೆದರು.  ಈ ಸಂದರ್ಭ ಮಾರಿಯಮ್ಮನ […]

 ಅಯೋಧ್ಯೆಯಿಂದ ಬಂದ ಪೇಜಾವರ ಶ್ರೀಗಳಿಂದ ಕಾಪು ಹೊಸ ಮಾರಿಗುಡಿ ದೇವಳ ಭೇಟಿ : 9 ದೀಪ ಪ್ರಜ್ವಲನೆ

 (kaup) ಕಾಪು: ಪೇಜಾವರ ಮಠಾಧೀಶರಾದ  ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು (Pejavara Shri Vishwaprasanna Swamiji) ಅಯೋಧ್ಯೆ ಶ್ರೀ ರಾಮ ದೇವರ ಪ್ರಾಣಪ್ರತಿಷ್ಠೆ ಮತ್ತು 48 ದಿನಗಳ ಮಂಡಲೋತ್ಸವವನ್ನು ಮುಗಿಸಿ  ಭಾನುವಾರ ಇಳಕಲ್ಲ್ ಶಿಲೆಯಿಂದ ಶಿಲಾಮಯವಾಗಿ ನಿರ್ಮಾಣಗೊಳ್ಳುತ್ತಿರುವ ಇತಿಹಾಸ ಪ್ರಸಿದ್ಧ ಕಾಪು ಹೊಸ ಮಾರಿಗುಡಿ ದೇವಸ್ಥಾನದ ಮಾರಿಯಮ್ಮನ ಸನ್ನಿದಾನಕ್ಕೆ ಆಗಮಿಸಿ ಶ್ರೀದೇವಿಯ ದರ್ಶನ ಪಡೆದರು.

 ಈ ಸಂದರ್ಭ ಮಾರಿಯಮ್ಮನ ಸನ್ನಿದಾನದಲ್ಲಿ 9 ದೀಪಗಳನ್ನು ಬೆಳಗಿಸಿ, ದೇವಳದ ನವದುರ್ಗಾ ಮಂಟಪದಲ್ಲಿ ಭಕ್ತಾದಿಗಳನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.

ಉಡುಪಿಗೆ ತೆರಳುತ್ತಿರುವ ಸಂದರ್ಭ ಕಾಪು ಮಾರಿಯಮ್ಮನ ದರುಶನ ಮಾಡಿದೆವು. ಜೀರ್ಣೋದ್ಧಾರ ಕೆಲಸಗಳು ಕಾಲಕ್ಕೆ ಅನುಗುಣವಾಗಿ ಆ ಮಹಾತಾಯಿ ಮತ್ತು ಪ್ರಭು ಶ್ರೀ ರಾಮ ಚಂದ್ರ ಹಾಗೂ ಉಡುಪಿ ಶ್ರೀ ಕೃಷ್ಣನ ದಯೆಯಿಂದ ನಿರ್ವಿಘ್ನವಾಗಿ ಮತ್ತು ಸಾಂಗವಾಗಿ ನೆರವೇರಬೇಕು. ತಾಯಿಯ ಅನುಗ್ರಹ ಲೋಕದ ಸಮಸ್ತ ಜನರ ಮೇಲಿರಲಿ ಎಂದು ಸ್ವಾಮೀಜಿ ಹೇಳಿದರು.

ಈ ಸಂದರ್ಭ ಹೊಸಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ಕಾರ್ಯಧ್ಯಕ್ಷ, ಕಾಪು ಶಾಸಕ  ಗುರ್ಮೆ ಸುರೇಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ಗೌರವಾದ್ಯಕ್ಷರಾದ ಲಾಲಾಜಿ ಆರ್. ಮೆಂಡನ್, ವೇ. ಮೂ. ಶ್ರೀನಿವಾಸ ತಂತ್ರಿ ಕಲ್ಯಾ, ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಮಾಧವ ಆರ್. ಪಾಲನ್, ಮುಂಬೈ ಸಮಿತಿಯ ಉಪಾಧ್ಯಕ್ಷರಾದ ಕೃಷ್ಣ ಶೆಟ್ಟಿ, ಕಟ್ಟಡ ಸಮಿತಿಯ ಪ್ರಧಾನ ಸಂಚಾಲಕ ಭಗವಾನ್ ದಾಸ್ ಶೆಟ್ಟಿಗಾರ್, ಆರ್ಥಿಕ ಸಮಿತಿಯ ಮುಖ್ಯ ಸಂಚಾಲಕ  ರಮೇಶ್ ಶೆಟ್ಟಿ ಕಾಪು ಕೊಲ್ಯ, ದಾನಿಗಳಾದ ಉದ್ಯಮಿ ಪುರುಷೋತ್ತಮ್ ಶೆಟ್ಟಿ, ಉಮಾ ಕೃಷ್ಣ ಶೆಟ್ಟಿ, ವ್ಯವಸ್ಥಾಪನ ಸಮಿತಿಯ ಸಂಚಾಲಕರುಗಳಾದ   ಚಂದ್ರಶೇಖರ್ ಅಮೀನ್, ಜಗದೀಶ್ ಬಂಗೇರ, ರವೀಂದ್ರ ಎಮ್, ಬಾಬು ಮಲ್ಲಾರ್, ಕಾಪು ಜಿ. ಎಸ್. ಬಿ ಸಮಾಜ ಭಾಂದವರು, ಕಚೇರಿ ನಿರ್ವಹಣಾ ಸಮಿತಿಯ ಪ್ರಧಾನ ಸಂಚಾಲಕರಾದ ಮಧುಕರ್ ಎಸ್, ಗ್ರಾಮ ಸಮಿತಿಯ ಮಹಿಳಾ ಮುಖ್ಯ ಸಂಚಾಲಕಿ ಶಿಲ್ಪಾ ಜಿ. ಸುವರ್ಣ, ಪ್ರ ಚಾರ ಸಮಿತಿಯ ಮಹಿಳಾ ಸಮಿತಿಯ ಮುಖ್ಯ ಸಂಚಾಲಕರಾದ ಸಾವಿತ್ರಿ ಗಣೇಶ್, ದೇವಳದ ಪ್ರಬಂಧಕ ಗೋವರ್ಧನ ಸೇರಿಗಾರ್, ಸಿಬ್ಬಂದಿಗಳು ಮತ್ತು ವಿವಿಧ ಸಂಘ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.