ಅ.15 : ಉಡುಪಿ – ಉಚ್ಚಿಲ ದಸರಾಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ
ನಾಡೋಜ ಡಾ.ಜಿ. ಶಂಕರ್ ಹಾಗೂ ಜಯ ಸಿ ಕೋಟ್ಯಾನ್ ಮಾಹಿತಿ
(Uchila) ಉಚ್ಚಿಲ : ದ.ಕ.ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಅ.11 ರಿಂದ ಅ. 21 ರವರೆಗೆ ನಡೆಯುತ್ತಿರುವ ಉಡುಪಿ -ಉಚ್ಚಿಲ ದಸರಾಕ್ಕೆ ಅ.15 ರ ಗುರುವಾರ ಮಧ್ಯಾಹ್ನ 3ಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡಲಿದ್ದು, ಮಹಿಳಾ ದಸರಾ ಉದ್ಘಾಟಿಸಲಿದ್ದಾರೆ.
ಈ ಸಂದರ್ಭ ಮುಖ್ಯಮಂತ್ರಿಯವರನ್ನು ದೇವಳದ ವತಿಯಿಂದ ಅಭಿನಂದಿಸಲಾಗುವುದು.
ಈ ಸಂದರ್ಭ ಉಡುಪಿ ಮತ್ತು ದ.ಕ. ಜಿಲ್ಲೆಯ ಮೀನುಗಾರಿಕಾ ಬಂದರು ಹಾಗೂ ಮಹಿಳಾ ಮೀನುಗಾರರ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಯವರಿಗೆ ಮನವಿ ನೀಡಲಾಗುವುದು ಎಂದು ದ.ಕ.ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ.ಜಿ. ಶಂಕರ್ ಹಾಗೂ ಅಧ್ಯಕ್ಷ ಜಯ ಸಿ ಕೋಟ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

