• Home  
  • ಉಡುಪಿ : ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ವಸಂತಪೂಜೆ (Udupi: Vasantha Puja at Sri Lakshmi Venkateswara Temple in Thenkapet)
- ಧಾರ್ಮಿಕ

ಉಡುಪಿ : ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ವಸಂತಪೂಜೆ (Udupi: Vasantha Puja at Sri Lakshmi Venkateswara Temple in Thenkapet)

Share: ಉಡುಪಿ : ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ವಸಂತಪೂಜೆ   ಶ್ರೀ ದೇವರ ಉತ್ಸವ, ಪಂಚ ಮಂಗಳವಾದ್ಯದೊಂದಿಗೆ ಪಲ್ಲಕ್ಕಿ ಉತ್ಸವ ಸಂಪನ್ನ (Udupi) ಉಡುಪಿ  ಮೇ 17 : ಉಡುಪಿ ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ  ಜಿ ಎಸ್ ಬಿ  ಯುವಕ ಮಂಡಳಿಯ  ಆಶ್ರಯದಲ್ಲಿ ವಸಂತಮಾಸದ  ಕೊನೆಯ ವಸಂತ ಪೂಜೆ ಶನಿವಾರ ವೈಭವದಿಂದ  ನೆರವೇರಿತು.   ಶ್ರೀ ದೇವರಿಗೆ ವಿಶೇಷ ಅಲಂಕಾರ, ವಿಶೇಷ ಹೂವಿನ ಅಲಂಕಾರದಲ್ಲಿ ಶೃಂಗಾರಗೊಂಡ ಪಾಲಕಿಯಲ್ಲಿ ಶ್ರೀದೇವರ ಉತ್ಸವ ವಿವಿಧ […]

(Udupi) ಉಡುಪಿ  ಮೇ 17 : ಉಡುಪಿ ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ  ಜಿ ಎಸ್ ಬಿ  ಯುವಕ ಮಂಡಳಿಯ  ಆಶ್ರಯದಲ್ಲಿ ವಸಂತಮಾಸದ  ಕೊನೆಯ ವಸಂತ ಪೂಜೆ ಶನಿವಾರ ವೈಭವದಿಂದ  ನೆರವೇರಿತು.

  ಶ್ರೀ ದೇವರಿಗೆ ವಿಶೇಷ ಅಲಂಕಾರ, ವಿಶೇಷ ಹೂವಿನ ಅಲಂಕಾರದಲ್ಲಿ ಶೃಂಗಾರಗೊಂಡ ಪಾಲಕಿಯಲ್ಲಿ ಶ್ರೀದೇವರ ಉತ್ಸವ ವಿವಿಧ ಪಂಚ ಮಂಗಳವಾದ್ಯ ದೊಂದಿಗೆ ಪಲ್ಲಕ್ಕಿ ಉತ್ಸವ  ನೆಡೆಯಿತು.

  ವಸಂತ ಮಂಟಪದ ರಜತ ಪೀಠದಲ್ಲಿ ಶ್ರೀ ದೇವರಿಗೆ ಮಹಾಪೂಜೆ  ಭಜನೆ, ವೇದ ಮಂತ್ರ ಪಠಣೆ, ಭರತನಾಟ್ಯ  ಸಹಿತ  ಅಷ್ಟಾವಧಾನ ಸೇವೆ, ಮಹಾಪೂಜೆ ಬಳಿಕ ವಿವಿಧ ಬಗೆಯ ಪ್ರಸಾದ ವಿತರಣೆ ನೆಡೆಯಿತು.

  ದೇವಳದ ಪ್ರಧಾನ ಅರ್ಚಕರಾದ ದಯಾಘನ್  ಭಟ್, ದೀಪಕ್ ಭಟ್, ಗಿರೀಶ್ ಭಟ್, ಪ್ರಭಾಕರ್ ಭಟ್,  ಜಿ ಎಸ್ ಬಿ ಯುವಕ ಅಧ್ಯಕ್ಷ ನಿತೇಶ್ ಶೆಣೈ, ನರಹರಿ ಪೈ,  ಪಾಂಡುರಂಗ ಪೈ, ಕಾರ್ತಿಕ್ ನಾಯಕ್, ಭಾಸ್ಕರ ಶೆಣೈ, ವಿಠಲ್   ನಾಯಕ್, ವಿಶಾಲ್ ಶೆಣೈ, ಅಜೇಯ ಕಾಮತ್  ಹಾಗೂ ಆಡಳಿತ ಮಂಡಳಿಯ ಸದಸ್ಯರು,  ವಿವಿಧ ಭಜನಾ ಮಂಡಳಿಯ ಸದಸ್ಯರು, ಜಿ ಎಸ್ ಬಿ ಯುವಕ ಮತ್ತು ಮಹಿಳಾ ಮಂಡಳಿಯ ಸದಸ್ಯರು ಹಾಗೂ   ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು.

೦೦೦೦೦೦೦೦೦೦೦೦೦

Leave a comment

Your email address will not be published. Required fields are marked *

eMedia Kannada  @2025. All Rights Reserved.