• Home  
  • ಕಾಪು : ಭಯ ಭಕ್ತಿಯಿಂದ ಸಂಪನ್ನಗೊಂಡ ದ್ವೈವಾರ್ಷಿಕ ಪಿಲಿ ಕೋಲ (Kaapu: The divine Pili Kola, endowed with fear and devotion)
- ಧಾರ್ಮಿಕ

ಕಾಪು : ಭಯ ಭಕ್ತಿಯಿಂದ ಸಂಪನ್ನಗೊಂಡ ದ್ವೈವಾರ್ಷಿಕ ಪಿಲಿ ಕೋಲ (Kaapu: The divine Pili Kola, endowed with fear and devotion)

Share: ಕಾಪು : ಭಯ ಭಕ್ತಿಯಿಂದ ಸಂಪನ್ನಗೊಂಡ ದ್ವೈವಾರ್ಷಿಕ ಪಿಲಿ ಕೋಲ   ಪಿಲಿ ದೈವ ಮುಟ್ಟುವುದನ್ನು ತಪ್ಪಿಸಲು ಎಲ್ಲೆಂದರಲ್ಲಿ ಓಡಾಡುವ ಭಕ್ತರು (Kapu) ಕಾಪು: ಕಾಪುವಿನ ಬ್ರಹ್ಮಮುಗ್ಗೇರ್ಕಳ ಪಿಲಿಚಂಡಿ ದೈವಸ್ಥಾನದಲ್ಲಿ ದೈವಾರ್ಷಿಕವಾಗಿ ನಡೆಯುವ ಪಿಲಿಕೋಲ ಶನಿವಾರ ಮಧ್ಯಾಹ್ನ 3ಕ್ಕೆ ಆರಂಭಗೊಂಡು ಸಂಜೆ ತೆರೆಕಂಡಿದೆ.   ಹುಲಿ ವೇಷ ಹಾಕುವ ದೈವ ನರ್ತಕನಿಗೆ  ಸಂಪ್ರದಾಯ ಬದ್ಧವಾಗಿ ಸ್ನಾನ ಮಾಡಿಸಿ, ಬಣ್ಣಗಾರಿಕೆಗಾಗಿ ತೆಂಗಿನ ಗರಿಯಿಂದ ನಿರ್ಮಾಣ ಮಾಡಿದ ಪಂಜರದೊಳಗೆ ಕಳುಹಿಸಲಾಗುತ್ತದೆ. ಬಣ್ಣ ಬಳಿದ ಬಳಿಕ ಪಟೇಲರ ಅನುಮತಿ ಪಡೆದು, ಪಿಲಿಚಂಡಿ ಮನೆಯವರು […]

(Kapu) ಕಾಪು: ಕಾಪುವಿನ ಬ್ರಹ್ಮಮುಗ್ಗೇರ್ಕಳ ಪಿಲಿಚಂಡಿ ದೈವಸ್ಥಾನದಲ್ಲಿ ದೈವಾರ್ಷಿಕವಾಗಿ ನಡೆಯುವ ಪಿಲಿಕೋಲ ಶನಿವಾರ ಮಧ್ಯಾಹ್ನ 3ಕ್ಕೆ ಆರಂಭಗೊಂಡು ಸಂಜೆ ತೆರೆಕಂಡಿದೆ.

  ಹುಲಿ ವೇಷ ಹಾಕುವ ದೈವ ನರ್ತಕನಿಗೆ  ಸಂಪ್ರದಾಯ ಬದ್ಧವಾಗಿ ಸ್ನಾನ ಮಾಡಿಸಿ, ಬಣ್ಣಗಾರಿಕೆಗಾಗಿ ತೆಂಗಿನ ಗರಿಯಿಂದ ನಿರ್ಮಾಣ ಮಾಡಿದ ಪಂಜರದೊಳಗೆ ಕಳುಹಿಸಲಾಗುತ್ತದೆ. ಬಣ್ಣ ಬಳಿದ ಬಳಿಕ ಪಟೇಲರ ಅನುಮತಿ ಪಡೆದು, ಪಿಲಿಚಂಡಿ ಮನೆಯವರು ತೀರ್ಥ ಚಿಮುಕಿಸಿ ಪಂಜರದಿಂದ ಹೊರಬಂದು ಪಿಲಿಕೋಲ ಆರಂಭಗೊಳ್ಳುತ್ತದೆ.

  ಪಿಲಿ ದೈವವು ಬ್ರಹ್ಮರಗುಂಡಕ್ಕೆ 3 ಸುತ್ತು ಬಂದು, ಬಳಿಕ ಮಾರಿಯಮ್ಮ ಗುಡಿಯ ಬಳಿ ನೆಟ್ಟ ಕಂಬವನ್ನೇರಿ ಅದಕ್ಕೆ ಕಟ್ಟಿದ ಕೋಳಿಯನ್ನು ಬಲಿಯಾಗಿ ಸ್ವೀಕರಿಸಿ ಬೇಟೆಗೆ ತೆರಳುತ್ತದೆ. ವಿವಿಧೆಡೆ ತೆರಳಿ ಹಾಲು, ಸೀಯಾಳ ಸ್ವೀಕರಿಸುವ ಆಚರಣೆ ನಡೆಯುತ್ತದೆ. ಈ ವೇಳೆ ಪಿಲಿ ವೇಷಧಾರಿ ಮುಟ್ಟಿದರೆ ಕಂಟಕ ಇದೆ ಎಂದು ಜನರು  ತಪ್ಪಿಸಿಕೊಳ್ಳಲು ಓಡಾಡುತ್ತಾರೆ.  

  ಕಾಪು ಹಳೆ ಮಾರಿಯಮ್ಮ ಗುಡಿಯಲ್ಲಿ ಕಳೆದ ಮಂಗಳವಾರ ದೇವಿಯ ಅಪ್ಪಣೆ ಪಡೆದ ದೈವ ನರ್ತಕನಿಗೆ ಕೋಲದ ಹಿಂದಿನ ದಿನ ದೈವಸ್ಥಾನದಲ್ಲಿ ವೀಳ್ಯ ನೀಡುವ ಸಂಪ್ರದಾಯವಿದೆ. ದ್ವೈವಾರ್ಷಿಕ ಪಿಲಿಕೋಲಕ್ಕೆ ದೈವ ನರ್ತಕನ ಆಯ್ಕೆಯನ್ನು ಮಾರಿಯಮ್ಮ ದೇವಿ ದೇವಸ್ಥಾನದ ಸನ್ನಿಧಿಯಲ್ಲಿ ನಿರ್ಧರಿಸಲಾಗುತ್ತದೆ.

  ಇದಕ್ಕೂ ಮುನ್ನ ದೈವಸ್ಥಾನದಲ್ಲಿ ಬಬ್ಬರ್ಯ, ಕೊಡಮಣಿತ್ತಾಯ, ನಂದಿಕೇಶ್ವರ, ಪಿದಾಯಿ ಪಿಲ್ಚಂಡಿ, ಬ್ರಹ್ಮರ ನೇಮ, ಮುಗೇರ್ಕಳ, ಶಕ್ತಿ ಸ್ವರೂಪಿಣಿ ತನ್ನಿಮಾನಿಗ, ಮದುಮಗ ಹಾಗೂ ಪರಿವಾರ ದೈವಗಳ ನೇಮ, ಉರಿ ಚೌಂಡಿ ದೈವ, ಕಡುಂಜಿ ಬಂಟ, ಗುಳಿಗ ದೈವದ ನೇಮ ಸೇರಿದಂತೆ ಬಂಕಿನಾಯಕ, ಪೊಲೀಸ್ ಮತ್ತು ಪಟೇಲ್, ಬಲಾಯಿಮಾರ, ತಿಗಮಾರ, ಪುರುಷ ಕೋಲ ಸಹಿತ ಪರಿವಾರ ದೈವಗಳ ನೇಮೋತ್ಸವ ನಡೆದಿವೆ.

   ಪಿಲಿಕೋಲ ವೀಕ್ಷಿಸಲು ಕರಾವಳಿ ಜಿಲ್ಲೆಗಳಷ್ಟೇ ಅಲ್ಲದೆ ಕಾಸರಗೋಡು, ಮುಂಬೈ, ಬೆಂಗಳೂರು, ಮಲೆನಾಡು ಭಾಗಗಳು ಸೇರಿದಂತೆ ವಿದೇಶಗಳಿಂದಲೂ ದೈವಾರಾಧಕರು ಆಗಮಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.