• Home  
  • ಉಡುಪಿ: ನಡುರಾತ್ರಿ ಕತ್ತಿಯಿಂದ ಹಲ್ಲೆ, ರಕ್ಷಣೆ  (Udupi: Attacked with a sword in the middle of the night, rescue)
- ಅಪರಾಧ

ಉಡುಪಿ: ನಡುರಾತ್ರಿ ಕತ್ತಿಯಿಂದ ಹಲ್ಲೆ, ರಕ್ಷಣೆ  (Udupi: Attacked with a sword in the middle of the night, rescue)

Share: ಉಡುಪಿ: ನಡುರಾತ್ರಿ ಕತ್ತಿಯಿಂದ ಹಲ್ಲೆ, ರಕ್ಷಣೆ (Udupi) ಉಡುಪಿ: ನಡುರಾತ್ರಿ ದುಷ್ಕರ್ಮಿಯೋರ್ವ ತಂದೆ ಹಾಗೂ ಅಪ್ರಾಪ್ತ ಮಗಳು ಮಲಗಿರುವ ಸಮಯ ತಂದೆಗೆ ತೀವ್ರವಾಗಿ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಆದಿ ಉಡುಪಿಯಲ್ಲಿ ನಡೆದಿದೆ.  ಹಲ್ಲೆಗೊಳಗಾಗಿ ರಕ್ತಸ್ರಾವವಾಗುತ್ತಿದ್ದ ವ್ಯಕ್ತಿಯನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ, ಜಿಲ್ಲಾಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿದ್ದಾರೆ.  ಕೂಲಿ ಕಾರ್ಮಿಕರ ಕರಿಬಸಪ್ಪ(43) ಹಲ್ಲೆಗೊಳಗಾದ ವ್ಯಕ್ತಿ. ಕಾರ್ಮಿಕ ಕುಮಾರ್ ಹಲ್ಲೆ ನಡೆಸಿದ ದುಷ್ಕರ್ಮಿ.  ತಂದೆ ಮಗಳು ಮಲಗಿರುವ ಸಮಯ ನಡುರಾತ್ರಿ ಕತ್ತಿ […]

(Udupi) ಉಡುಪಿ: ನಡುರಾತ್ರಿ ದುಷ್ಕರ್ಮಿಯೋರ್ವ ತಂದೆ ಹಾಗೂ ಅಪ್ರಾಪ್ತ ಮಗಳು ಮಲಗಿರುವ ಸಮಯ ತಂದೆಗೆ ತೀವ್ರವಾಗಿ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಆದಿ ಉಡುಪಿಯಲ್ಲಿ ನಡೆದಿದೆ.

 ಹಲ್ಲೆಗೊಳಗಾಗಿ ರಕ್ತಸ್ರಾವವಾಗುತ್ತಿದ್ದ ವ್ಯಕ್ತಿಯನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ, ಜಿಲ್ಲಾಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

 ಕೂಲಿ ಕಾರ್ಮಿಕರ ಕರಿಬಸಪ್ಪ(43) ಹಲ್ಲೆಗೊಳಗಾದ ವ್ಯಕ್ತಿ. ಕಾರ್ಮಿಕ ಕುಮಾರ್ ಹಲ್ಲೆ ನಡೆಸಿದ ದುಷ್ಕರ್ಮಿ.

 ತಂದೆ ಮಗಳು ಮಲಗಿರುವ ಸಮಯ ನಡುರಾತ್ರಿ ಕತ್ತಿ ಹಿಡಿದು ಬಂದ ಕುಮಾರ್ ಮಲಗಿದಲ್ಲಿಯೇ ಹಲ್ಲೆ ನಡೆಸಿದ್ದಾನೆ. ಎಚ್ಚರಗೊಂಡ ಮಗಳು ಬೊಬ್ಬೆ ಹಾಕಿದ್ದು, ಸ್ಥಳೀಯರು ಆಗಮಿಸಿ ವಿಶು ಶೆಟ್ಟಿ ಯವರಿಗೆ ಮಾಹಿತಿ ನೀಡಿದ್ದಾರೆ.

 ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಪೆಟ್ಟು ಸ್ವಲ್ಪ ಕೆಳಗೆ ಬಿದ್ದಿದ್ದರೆ ವ್ಯಕ್ತಿ ಪ್ರಾಣಕ್ಕೆ ಕುತ್ತು ಬರುತ್ತಿತ್ತು. ಕೂಡಲೇ ವಿಶು ಶೆಟ್ಟಿ ತನ್ನ ವಾಹನದಲ್ಲಿ ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ, ವೈದ್ಯರ ಸಲಹೆಯಂತೆ ವೆನ್ಲಾಕ್ ಆಸ್ಪತ್ರೆಗೆ ಆಂಬುಲೆನ್ಸ್ ಮುಖಾಂತರ ಕಳುಹಿಸಿದ್ದಾರೆ.

ಪ್ರಕರಣದ ಬಗ್ಗೆ ವಿಶು ಶೆಟ್ಟಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆರೋಪಿ ಕುಮಾರನನ್ನು ಬಂಧಿಸಿ ಹಲ್ಲೆ ಮಾಡಿದ ಕತ್ತಿಯನ್ನು ವಶಕ್ಕೆ ಪಡೆದಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.