ಉಡುಪಿ : ಮುಟ್ಟಿನ ನೈರ್ಮಲ್ಯದ ದಿನದ ಪ್ರಯುಕ್ತ ಮಾಹಿತಿ ಕಾರ್ಯಾಗಾರ
ಬಾರ್ಕೂರು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ನಡೆದ ಕಾರ್ಯಕ್ರಮ
(Udupi) ಉಡುಪಿ: ಮಣಿಪಾಲ ಹೆರಿಗೆ ಮತ್ತು ಸ್ತ್ರೀ ಆರೋಗ್ಯ ತಜ್ಙರ ಸಂಘ ಹಾಗೂ ಗೊರೆಟ್ಟಿ ಆಸ್ಪತ್ರೆ ಕಲ್ಯಾಣಪುರದ ಸಂಯುಕ್ತ ಪ್ರಾಯೋಜಕತ್ವದಲ್ಲಿ ಮುಟ್ಟಿನ ನೈರ್ಮಲ್ಯದ ದಿನದ ಪ್ರಯುಕ್ತ ಮಾಹಿತಿ ಕಾರ್ಯಾಗಾರ ಬಾರ್ಕೂರು ಶ್ರೀ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ನಡೆಯಿತು.
ಶ್ರೀಮತಿ ವಿದ್ಯಾ ನಾಗರಾಜ್ ಹದಿಹರೆಯದ ಮಾನಸಿಕ ಆರೋಗ್ಯ ಮತ್ತು ಡಾ. ರಂಜಿತಾ ನಾಯಕ್ ರವರು ಮುಟ್ಟಿನ ನೈರ್ಮಲ್ಯ ಹಾಗೂ ಡಾ. ರಾಜಲಕ್ಷ್ಮಿ HPV ಲಸಿಕೆಯ ಕುರಿತು ಮಾಹಿತಿ ನೀಡಿದರು.
ಎನ್ .ಎಸ್ ನಿಲಯದ ಮೇಲ್ವಿಚಾರಕಿ ವಸಂತ ಕುಮಾರಿ ಅಧ್ಯಕ್ಷತೆ ವಹಿಸಿದ್ದರು.
120 ವಿದ್ಯಾರ್ಥಿನಿಯರು ಕಾರ್ಯಕ್ರಮದದಲ್ಲಿ ಭಾಗವಹಿಸಿದ್ದರು.
ಭಾಗವಹಿಸಿದ ಎಲ್ಲರಿಗೂ ಹತ್ತಿಯ ಸ್ಯಾನಿಟರಿ ಪ್ಯಾಡ್ ಹಾಗೂ ಮುಟ್ಟಿನ ಕಪ್ ಗಳನ್ನು ಉಚಿತವಾಗಿ ವಿತರಿಸಲಾಯಿತು.

