• Home  
  • ಉಳಿಯಾರಮ್ಮನ ವಾರ್ಷಿಕ ಮಹೋತ್ಸವಕ್ಕೆ ವೈಭವದ ಚಾಲನೆ (A grand start to the annual festival of Uliyaaramma)
- ಧಾರ್ಮಿಕ

ಉಳಿಯಾರಮ್ಮನ ವಾರ್ಷಿಕ ಮಹೋತ್ಸವಕ್ಕೆ ವೈಭವದ ಚಾಲನೆ (A grand start to the annual festival of Uliyaaramma)

Share: ಉಳಿಯಾರಮ್ಮನ ವಾರ್ಷಿಕ ಮಹೋತ್ಸವಕ್ಕೆ ವೈಭವದ ಚಾಲನೆ ಫೆ. 17ರ ಮಂಗಳವಾರ ವಾರ್ಷಿಕ ಮಹೋತ್ಸವ (Majuru) ಮಜೂರು: ಮಜೂರು ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇಂದು ಧ್ವಜಾರೋಹಣ ನೆರವೇರುವ ಮೂಲಕ ವಾರ್ಷಿಕ ಮಹೋತ್ಸವಕ್ಕೆ  ಇಂದು ಚಾಲನೆ ನೀಡಲಾಯಿತು.    ಕ್ಷೇತ್ರದ ತಂತ್ರಿಗಳಾದ ಪಾದೂರು ಶ್ರೀ ಲಕ್ಷ್ಮೀನಾರಾಯಣ್ ತಂತ್ರಿ, ಅರ್ಚಕರಾದ ಲಕ್ಷ್ಮೀಶ ಭಟ್ ಮತ್ತು ಗುರುರಾಜ್ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.   ಶಿವರಾತ್ರಿಯ ದಿನದಿಂದ ಪ್ರಾರಂಭಗೊಂಡು  ತಾ19/2/26 ರ ಗುರುವಾರದವರೆಗೆ ವಿವಿಧ ಧಾರ್ಮಿಕ ಹಾಗೂ […]

(Majuru) ಮಜೂರು: ಮಜೂರು ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇಂದು ಧ್ವಜಾರೋಹಣ ನೆರವೇರುವ ಮೂಲಕ ವಾರ್ಷಿಕ ಮಹೋತ್ಸವಕ್ಕೆ  ಇಂದು ಚಾಲನೆ ನೀಡಲಾಯಿತು.

   ಕ್ಷೇತ್ರದ ತಂತ್ರಿಗಳಾದ ಪಾದೂರು ಶ್ರೀ ಲಕ್ಷ್ಮೀನಾರಾಯಣ್ ತಂತ್ರಿ, ಅರ್ಚಕರಾದ ಲಕ್ಷ್ಮೀಶ ಭಟ್ ಮತ್ತು ಗುರುರಾಜ್ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.

  ಶಿವರಾತ್ರಿಯ ದಿನದಿಂದ ಪ್ರಾರಂಭಗೊಂಡು  ತಾ19/2/26 ರ ಗುರುವಾರದವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ. 17.02 26ರ ಮಂಗಳವಾರ ವಾರ್ಷಿಕ ಮಹೋತ್ಸವದ ಅಂಗವಾಗಿ ಅನ್ನಸಂತರ್ಪಣೆ  ನೆರವೇರಲಿದೆ.

   ಈ ಸಂದರ್ಭ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರವಿ ಉಪಾಧ್ಯಾಯ, ಸಮಿತಿ ಸದಸ್ಯರಾದ ರಾಘವೇಂದ್ರ ಭಟ್, ಜನಾರ್ಧನಆಚಾರ್ಯ, ಗಣೇಶ್ ನಾಯ್ಕ್, ಶೈಲೇಶ್ ಕುಮಾರ್, ಯೋಗೀಶ್ ಮಜೂರು, ಅಶ್ವಿನಿ, ದೇವಾಡಿಗ, ಗೀತಾ ಕುಲಾಲ್, ಮಾಜಿ ಅಧ್ಯಕ್ಷರಾದ ತ್ರಿವಿಕ್ರಮ್ ಭಟ್, ವಿಶ್ವನಾಥ ಮೂಲ್ಯ ಭಜನಾ ಮಂಡಳಿಯ ಪದಾಧಿಕಾರಿಗಳು ಸದಸ್ಯರು ಊರ, ಪರ ಊರ ಭಕ್ತರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.