• Home  
  • ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ಫೆ. 28 – ಮಾ 2ರವರೆಗೆ ಪುನರ್ ಪ್ರತಿಷ್ಠಾ ಪ್ರಥಮ ವರ್ಧಂತಿ (First anniversary of the re-establishment of the temple at Kaup Sri Hosa Marigudi from Feb. 28 to Mar. 2)  
- ಧಾರ್ಮಿಕ

ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ಫೆ. 28 – ಮಾ 2ರವರೆಗೆ ಪುನರ್ ಪ್ರತಿಷ್ಠಾ ಪ್ರಥಮ ವರ್ಧಂತಿ (First anniversary of the re-establishment of the temple at Kaup Sri Hosa Marigudi from Feb. 28 to Mar. 2)  

Share: ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ಫೆ. 28 – ಮಾ 2ರವರೆಗೆ ಪುನರ್ ಪ್ರತಿಷ್ಠಾ ಪ್ರಥಮ ವರ್ಧಂತಿ   “ಮಾತೃ ವೈಭವ” ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ (Kaup) ಕಾಪು: ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ  ಫೆಬ್ರವರಿ 28 ರಿಂದ ಮಾರ್ಚ್ 2ರವರೆಗೆ ಮೂರು ದಿನಗಳ ಕಾಲ ಕಾಪುವಿನ ಅಮ್ಮನ ಪುನರ್ ಪ್ರತಿಷ್ಠಾ ಪ್ರಥಮ ವರ್ಧಂತಿ ಉತ್ಸವ- “ಮಾತೃ ವೈಭವದ”ಆಮಂತ್ರಣ ಪತ್ರಿಕೆಯನ್ನು ಶ್ರೀ ಹೊಸ ಮಾರಿಗುಡಿಯ ಕಿರು ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆಗೊಳಿಸಲಾಯಿತು.    […]

(Kaup) ಕಾಪು: ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ  ಫೆಬ್ರವರಿ 28 ರಿಂದ ಮಾರ್ಚ್ 2ರವರೆಗೆ ಮೂರು ದಿನಗಳ ಕಾಲ ಕಾಪುವಿನ ಅಮ್ಮನ ಪುನರ್ ಪ್ರತಿಷ್ಠಾ ಪ್ರಥಮ ವರ್ಧಂತಿ ಉತ್ಸವ- “ಮಾತೃ ವೈಭವದ”ಆಮಂತ್ರಣ ಪತ್ರಿಕೆಯನ್ನು ಶ್ರೀ ಹೊಸ ಮಾರಿಗುಡಿಯ ಕಿರು ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆಗೊಳಿಸಲಾಯಿತು.

   ಈ ಸಂದರ್ಭ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಅಭಿವೃದ್ಧಿ ಸಮಿತಿ ಮತ್ತು ಮಾತೃ ವೈಭವ ಸೇವಾ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿಯವರು ಮಾತನಾಡಿ, 2026 ಫೆಬ್ರವರಿ 28ರಿಂದ ಮಾರ್ಚ್ 2 ತನಕ  ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಉಚ್ಚಂಗಿ ಸಹಿತ  ಶ್ರೀ ಮಾರಿಯಮ್ಮ ದೇವಿಯ ದಿವ್ಯ ಸಾನಿಧ್ಯದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ಕ್ಷೇತ್ರದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ವಿದ್ವಾನ್ ಕೆ. ಪಿ ಕುಮಾರಗುರು ತಂತ್ರಿಗಳ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಹಾಗೂ ಪ್ರಧಾನ ಅರ್ಚಕರಾದ ವೇ. ಮೂ. ಶ್ರೀನಿವಾಸ ತಂತ್ರಿಗಳ ಸಹಭಾಗಿತ್ವದಲ್ಲಿ, ಸಹಸ್ರ ಸಹಸ್ರ ಸಂಖ್ಯೆಯ ಭಕ್ತಾದಿಗಳ ಕ್ಷೇತ್ರ ಸಂದರ್ಶನದ ನಿರೀಕ್ಷೆಯಲ್ಲಿ, ಮಾತೃ ವೈಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

   ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ 28 ಫೆಬ್ರವರಿ 2026 ಶನಿವಾರದಂದು ಬೆಳಿಗ್ಗೆ ಗಂಟೆ 8:30 ರಿಂದ ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಆರಣಿ ಮಥನ, 6 ಕಾಯಿ ಗಣಯಾಗ, ನವಗ್ರಹ ಹೋಮ, ಮೃತ್ಯು ಪಂಚಕ ಪೂಜೆ “ಶ್ರೀಚಂಡೀಪುರಶ್ಚರಣಮ್” ಸಾಯಂಕಾಲ ಗಂಟೆ 6.00 ರಿಂದ ವಾಸ್ತುಹೋಮ, ವಾಸ್ತು ಪೂಜಾ. ಸುದರ್ಶನ ರಕ್ಷಾಪಕ್ರಿಯೆ ಪೂಜೆಗಳು ನಡೆಯಲಿದೆ.

1ಮಾರ್ಚ್ 2026 ಆದಿತ್ಯವಾರ ರಂದು ಬೆಳಿಗ್ಗೆ ಗಂಟೆ 8.00 ರಿಂದ ಶ್ರೀಸಪ್ತಮಾತೃಕಾ ಕಲ್ಪಮಹಾಯಾಗದೊಂದಿಗೆ  ಸಪ್ತಮಾತೃಕಾ ಬಲಿದಾನಮ್ ಹಾಗೂ ಮಹಾಪೂರ್ಣಾಹುತಿ, ಪ್ರಸಾದ ವಿತರಣೆ ನಡೆಯಲಿದೆ. ಸಾಯಂಕಾಲ ಗಂಟೆ 6 ರಿಂದ ವನ ದುರ್ಗಾಮಂತ್ರ ಹೋಮ ಮತ್ತು ಯೋಗಿನೀ ಬಲಿ ಪೂಜಾಧಿಗಳು ನಡೆಯಲಿದೆ.

   02 ಮಾರ್ಚ್ 2026 ಸೋಮವಾರ ದಂದು ಬೆಳಿಗ್ಗೆ ಗಂಟೆ 6-15 ರಿಂದ ಗದ್ದಿಗೆಯ ಶ್ರೀಚಕ್ರಯಂತ್ರೋದ್ದಾರದೊಂದಿಗೆ ಶ್ರೀವಿದ್ಯಾ ಶ್ರೀಚಕ್ರಯಂತ್ರಪೂಜಾ ಮತ್ತು ದಿವ್ಯ ಶ್ರೀಚಕ್ರ ಯಂತ್ರ ದರ್ಶನ, ಖಡ್ಗಮಾಲಾ ಮಂತ್ರ ಹೋಮ, ಬೆಳಿಗ್ಗೆ ಗಂಟೆ 11.00 ರಿಂದ ಶ್ರೀಯಂತ್ರ ಪ್ರಸನ್ನ ಪೂಜಾ ನಡೆಯಲಿದೆ. ಸಾಯಂಕಾಲ ಗಂಟೆ 5.00 ರಿಂದ ಚತುಷಷ್ಠಿ, ಉಪಚಾರ ಪೂಜಾ, ಅಷ್ಟಾವಧಾನ ಸೇವಾ ಮಹಾಪೂಜೆ, ಗದ್ದಿಗೆಯಲ್ಲಿ ಶ್ರೀ ಚಕ್ರ ಯಂತ್ರದ ಮರುಸ್ಥಾಪನೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಪ್ರತಿಷ್ಠಾ ವರ್ಧಂತಿ  ಈ ಪರ್ವಕಾಲದಲ್ಲಿ ವರ್ಷದ ಒಂದು ದಿನ ಮಾತ್ರ ಅಮ್ಮನ ಶ್ರೀಚಕ್ರ ಯಂತ್ರದ ದರುಶನಕ್ಕೆ ಭಕ್ತಾದಿಗಳಿಗೆ ಅವಕಾಶ ಮಾಡಿಕೊಡಲಾಗುವುದು.

  ಈ ಮೂರು ದಿನಗಳಲ್ಲಿ ಮಧ್ಯಾಹ್ನ ಗಂಟೆ 12 ರಿಂದ 3.00 ರವರೆಗೆ ಹಾಗೂ ರಾತ್ರಿ ಗಂಟೆ 7 ರಿಂದ 9 ರವರೆಗೆ ಮಹಾ ಅನ್ನಪ್ರಸಾದ ಸಂತರ್ಪಣೆ ವ್ಯವಸ್ಥಿತ ರೀತಿಯಲ್ಲಿ ನಡೆಯಲಿದೆ.

  ಈ ಮೂರು ದಿನಗಳಲ್ಲಿ ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ, ಸ್ಥಳೀಯ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ, ಆಯ್ದ ತಂಡಗಳಿಂದ ಭಜನಾ ಕಾರ್ಯಕ್ರಮ, 28 ಫೆಬ್ರವರಿ 2026 ರಂದು ರಾತ್ರಿ ಗಂಟೆ 8.೦೦ರಿಂದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಹೋಲ್ಡರ್ ಝೀ ಕನ್ನಡ ಸರಿಗಮಪ ಖ್ಯಾತಿಯ ವಿದ್ವಾನ್ ಯಶವಂತ್ ಎಂ.ಜಿ. ಮತ್ತು ಬಳಗದವರಿಂದ “ಗಾನ ವೈಭವ”, 1ಮಾರ್ಚ್ 2026 ಆದಿತ್ಯವಾರ ರಾತ್ರಿ ಗಂಟೆ 8.00 ರಿಂದ ಕಾಪು ಅಮ್ಮನ ಮಕ್ಕಳ ತಂಡ ಪುಣೆ ಘಟಕದಿಂದ “ಸಿಂಧೂರ”ವಿಶೇಷ ನೃತ್ಯ ರೂಪಕ, ಗಂಟೆ 8.30 ರಿಂದ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಆಶ್ರಿತ ಸಾಯಿಶಕ್ತಿ ಕಲಾ ಬಳಗದವರಿಂದ ಜೋಡು ಜೀಟಿಗೆ ಭಕ್ತಿ ಪ್ರಧಾನ ತುಳು ನಾಟಕ, 02 ಮಾರ್ಚ್ 2026 ಸೋಮವಾರ ದಂದು ರಾತ್ರಿ ಗಂಟೆ 8:00 ರಿಂದ ಚೈತನ್ಯ ಕಲಾವಿದರು ಬೈಲೂರು ಚೈತನ್ಯ ಕಲಾವಿದರು ಬೈಲೂರು ಇವರಿಂದ ತುಳು ಹಾಸ್ಯಮಯ ನಾಟಕ “ರಾಘು ಮಾಸ್ಟು” ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

   ದಿನಾಂಕ 26.02.2026ನೇ ಗುರುವಾರ ಅಪರಾಹ್ನ 4 ಗಂಟೆಗೆ ಶ್ರೀಕ್ಷೇತ್ರ ದಂಡತೀರ್ಥ ಮಠದಿಂದ ವಿಜೃಂಭಣೆಯ  ಹಸಿರುವಾಣಿ ಹೊರೆಕಾಣಿಕೆ ಶೋಭಯಾತ್ರೆ ಹೊರಡಲಿರುವುದು.

   ಫೆಬ್ರವರಿ 28 ರಿಂದ ಮಾರ್ಚ್ 4ರ ವರೆಗೆ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಬೃಹತ್ ವಸ್ತು ಪ್ರದರ್ಶನ ಮತ್ತು ಕೈಮಗ್ಗ ಸೀರೆ – ಖಾದಿ ಕೃಷಿ – ಕೌಶಲ – ಆಹಾರ ಮಾರಾಟಮೇಳವನ್ನು ಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ.

   ಪತ್ರಿಕಾಗೋಷ್ಠಿಯಲ್ಲಿ ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಉಪಾಧ್ಯಕ್ಷ ಮಾಧವ ಆರ್. ಪಾಲನ್, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ ಬಾಲಾಜಿ, ಮೊಕ್ತೇಸರರಾದ ಶೇಖರ್ ಸಾಲ್ಯಾನ್, ಜಯಲಕ್ಷ್ಮೀ ಎಸ್. ಶೆಟ್ಟಿ, ಚರಿತಾ ದೇವಾಡಿಗ, ಪ್ರಭಾಕರ ಪೂಜಾರಿ, ಜಯರಾಮ ಆಚಾರ್ಯ, ರಘುರಾಮ ಶೆಟ್ಟಿ ಸುದ್ಧಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.