ಎಪ್ರಿಲ್ 11 – 13 ಕೊಳಚಿಕಂಬಳ ಶ್ರೀ ಜಾರಂದಾಯ ದೈವಸ್ಥಾನ ನೇಮೋತ್ಸವ
ಎ. 12 ರಂದು ಶ್ರೀ ಜಾರಂದಾಯ, ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವ ಜರಗಲಿದೆ.
(Mulki) ಮೂಲ್ಕಿ: ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ತಾನದ ಆಡಳಿಕ್ಕೊಳಪಟ್ಟ ಕೊಳಚಿಕಂಬಳ ಶ್ರೀ ಜಾರಂದಾಯ, ಧೂಮಾವತಿ ದೈವಸ್ಥಾನದಲ್ಲಿ ಶ್ರೀ ಜಾರಂದಾಯ, ಧೂಮಾವತಿ ಮತ್ತು ಪರಿವಾರ ದೈವಗಳ ವರ್ಷಾವಧಿ ನೇಮೋತ್ಸವವು ಎಪ್ರಿಲ್ 11 ರಿಂದ 13 ರ ವರೆಗೆ ಜರಗಲಿದೆ.
ಎಪ್ರಿಲ್ 11 ರ ಶನಿವಾರ ಸಂಜೆ 4 ಕ್ಕೆ ಭಂಡಾರ ಇಳಿದು ಧ್ವಜಾರೋಹಣ, ಎ. 12 ರ ಆದಿತ್ಯವಾರ ಬೆಳಗ್ಗೆ 10 ಕ್ಕೆ ದೈವಸ್ಥಾನದ ನಾಗ ಸನ್ನಿಧಿಯಲ್ಲಿ ಅಂಚನ್ ಮೂಲದವರ ನಾಗತಂಬಿಲ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನೆರವೇರಲಿದೆ.
ರಾತ್ರಿ 9.30ಕ್ಕೆ ಶ್ರೀ ಜಾರಂದಾಯ, ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವ ಜರಗಲಿದೆ.
ಎ. 13 ರ ಸೋಮವಾರ ಮಧ್ಯಾಹ್ನ 3.30ಕ್ಕೆ ಮಾಯಂದಾಳ ದೈವದ ನೇಮೋತ್ಸವ ಜರಗಲಿದೆಯೆಂದು ಪ್ರಕಟಣೆ ತಿಳಿಸಿದೆ.

