• Home  
  • ಕಟಪಾಡಿ ಶ್ರೀನಿವಾಸ ಕಲ್ಯಾಣೋತ್ಸವ : ನೂತನ ವೆಬ್ ಸೈಟ್ ಬಿಡುಗಡೆ (Katapady Srinivasa Kalyanotsava: New website launched)
- ಧಾರ್ಮಿಕ

ಕಟಪಾಡಿ ಶ್ರೀನಿವಾಸ ಕಲ್ಯಾಣೋತ್ಸವ : ನೂತನ ವೆಬ್ ಸೈಟ್ ಬಿಡುಗಡೆ (Katapady Srinivasa Kalyanotsava: New website launched)

Share: ಕಟಪಾಡಿ ಶ್ರೀನಿವಾಸ ಕಲ್ಯಾಣೋತ್ಸವ : ನೂತನ ವೆಬ್ ಸೈಟ್ ಬಿಡುಗಡೆ ಸೇವಾಕರ್ತರಾದ ಕೆ. ಕೃಷ್ಣಮೋಹನ್ ಪೈ ಹಾಗೂ ಕೆ ಸತ್ಯೇಂದ್ರ ಪೈಯವರಿಂದ ವೆಬ್‌ ಸೈಟ್‌ ಲೋಕಾರ್ಪಣೆ     (Katapadi) ಕಟಪಾಡಿ: ತಿರುಪತಿ ತಿರುಮಲ ದೇವಸ್ಥಾನದ ನೇತೃತ್ವದಲ್ಲಿ ಕೆ. ಕೃಷ್ಣಮೋಹನ್ ಪೈ ಯುಎಸ್‌ಎ ಅವರ ಸಂಕಲ್ಪದಂತೆ ಕಟಪಾಡಿ ವಿಜಯಾ ಪೈ, ಪುರುಷೋತ್ತಮ ಪೈ ಮತ್ತು ಕುಟುಂಬಸ್ಥರ ವತಿಯಿಂದ ಕಟಪಾಡಿ ಎಸ್‌ವಿಎಸ್ ವಿದ್ಯಾವರ್ಧಕ ಸಂಘ ಹಾಗೂ ಕಟಪಾಡಿ ಮತ್ತು ಆಸುಪಾಸಿನ ನಾಗರಿಕರು, ಗಣ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ದೇವಸ್ಥಾನ, […]

    (Katapadi) ಕಟಪಾಡಿ: ತಿರುಪತಿ ತಿರುಮಲ ದೇವಸ್ಥಾನದ ನೇತೃತ್ವದಲ್ಲಿ ಕೆ. ಕೃಷ್ಣಮೋಹನ್ ಪೈ ಯುಎಸ್‌ಎ ಅವರ ಸಂಕಲ್ಪದಂತೆ ಕಟಪಾಡಿ ವಿಜಯಾ ಪೈ, ಪುರುಷೋತ್ತಮ ಪೈ ಮತ್ತು ಕುಟುಂಬಸ್ಥರ ವತಿಯಿಂದ ಕಟಪಾಡಿ ಎಸ್‌ವಿಎಸ್ ವಿದ್ಯಾವರ್ಧಕ ಸಂಘ ಹಾಗೂ ಕಟಪಾಡಿ ಮತ್ತು ಆಸುಪಾಸಿನ ನಾಗರಿಕರು, ಗಣ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ದೇವಸ್ಥಾನ, ದೈವಸ್ಥಾನಗಳ ಆಡಳಿತ ಮಂಡಳಿಯವರ ಸಹಕಾರದೊಂದಿಗೆ ಎಸ್‌ವಿಎಸ್ ಶಾಲಾ ಕ್ರೀಡಾಂಗಣದಲ್ಲಿ ಏ. 11 ಶನಿವಾರ ಜರುಗಲಿರುವ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ಮಾಹಿತಿಗಳನ್ನೊಳಗೊಂಡಿರುವ ವೆಬ್ ಸೈಟ್ ಬಿಡುಗಡೆ ಮಂಗಳವಾರ ನಡೆಯಿತು.

   ಶ್ರೀನಿವಾಸ ಕಲ್ಯಾಣೋತ್ಸವದ ಸೇವಾಕರ್ತರಾದ ಕೆ. ಕೃಷ್ಣಮೋಹನ್ ಪೈ ಹಾಗೂ ಕೆ ಸತ್ಯೇಂದ್ರ ಪೈ ಕಲ್ಯಾಣೋತ್ಸವ ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನೊಳಗೊಂಡ ವೆಬ್ ಸೈಟ್ (https://www.katapadykalyanotsava.com/) ಬಿಡುಗಡೆಗೊಳಿಸಿದರು.

  ಈ ಸಂದರ್ಭಮಾತನಾಡಿದ ಅವರು, ನಮ್ಮೂರಿನಲ್ಲೇ ನಡೆಯುವ ತಿರುಪತಿ ಶ್ರೀ ವೆಂಕಟರಮಣ ದೇವರ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ವೆಬ್ ಸೈಟ್ ಅಭಿವೃದ್ಧಿ ಪಡಿಸಲಾಗಿದ್ದು, ಇದರಲ್ಲಿ ಕಾರ್ಯಕ್ರಮದ ಸಂಪೂರ್ಣ ವಿವರದೊಂದಿಗೆ ಪಾರ್ಕಿಂಗ್ ವ್ಯವಸ್ಥೆ ಸಹಿತ ಎಲ್ಲಾ ಮಾಹಿತಿಗಳು ಲಭ್ಯವಿದೆ ಎಂದರು.

  ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಮಹೇಶ್ ಅಂಚನ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೇಮ್ ಕುಮಾರ್, ಮಾಜಿ ಜಿ.ಪಂ ಸದಸ್ಯೆ ಗೀತಾಂಜಲಿ ಸುವರ್ಣ, ಕಟಪಾಡಿ ರೋಟರಿ ಅಧ್ಯಕ್ಷೆ ಆಶಾ ಅಂಚನ್, ತುಳಸಿ ದೇವಾಡಿಗ, ಜಗನ್ನಾಥ್ ಕೋಟೆ, ವಿದ್ಯಾವರ್ಧಕ ಸಂಘದ ಸದಸ್ಯರಾದ ನಿತ್ಯಾನಂದ ಶೆಣೈ, ಬಿ. ಚಂದ್ರಕಾಂತ್‌ ಪೈ, ವೆಂಕಟರಮಣ ಭಟ್, ಕೃಷ್ಣಾನಂದ ಕಾಮತ್, ಗಣೇಶ್ ಕಿಣಿ, ಶ್ರೀನಿವಾಸ ಕಿಣಿ, ಆಡಳಿತಾಕಾರಿ ಸುಧಾಕರ್ ಬ್ರಹ್ಮಾವರ, ಪ್ರಮುಖರಾದ ಕಾರ್ತಿಕ್ ಪಾಲನ್, ಗಣೇಶ್ ಕುಮಾರ್ ಉದ್ಯಾವರ, ಕಿಶೋರ್ ಅಂಬಾಡಿ, ಯೋಗೀಶ್ ದುಗ್ಗುಪ್ಪಾಡಿ, ರಾಜೇಶ್ ಶ್ರೀಯಾನ್, ನಾಗೇಶ್ ಕಾಮತ್, ಶಂಕರ್ ಸಾಲ್ಯಾನ್, ಶ್ರೀನಿವಾಸ ಶೆಣೈ, ಯಶವಂತ್ ದೇವಾಡಿಗ, ಉಮೇಶ್ ಕಾಮತ್, ದಿನಕರ ಪೈ, ಭಾರತಿ ಪೈ, ಅಶ್ವಿನಿ  ಅಂಚನ್, ಹರಿಶ್ಚಂದ್ರ ಪೈ, ಪ್ರಶಾಂತ್ ಆರ್ ಎಸ್, ಜಗದೀಶ್ ಕಾಮತ್ ಹಾಗೂ ವಿವಿಧ ಸಂಘ ಸಂಸ್ಥೆಗಳು ಭಜನಾ ಮಂದಿರಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಉಪಸ್ಥಿತರಿದ್ದರು.

 ಪತ್ರಕರ್ತ ಪ್ರಕಾಶ್ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.