• Home  
  • ಕರಂದಾಡಿ : ಶ್ರೀ ರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಯಕ್ಷಗಾನ ತರಗತಿ ಪ್ರಾರಂಭ (Yakshagana training class starts at Karandadi Sri Rama School)
- ಶಾಲಾ ಕಾಲೇಜು

ಕರಂದಾಡಿ : ಶ್ರೀ ರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಯಕ್ಷಗಾನ ತರಗತಿ ಪ್ರಾರಂಭ (Yakshagana training class starts at Karandadi Sri Rama School)

Share: ಕರಂದಾಡಿ : ಶ್ರೀ ರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಯಕ್ಷಗಾನ ತರಗತಿ ಪ್ರಾರಂಭ (kaup) ಕಾಪು: ಕರಂದಾಡಿ ದಿ. ಲೀಲಾಧರ್ ಶೆಟ್ಟಿಯವರು ಸ್ಥಾಪಿಸಿ, ಪೋಷಿಸಿದ ಸಂಸ್ಥೆಯಿಂದ ಅವರ ಸವಿ ನೆನೆಪಿಗಾಗಿ ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಕೃಪಾಪೋಷಿತ ತ್ರಿಮೂರ್ತಿ ಯಕ್ಷಗಾನ ಕಲಾ ಕೇಂದ್ರ ಕರಂದಾಡಿ ಇದರ ಆಶ್ರಯದಲ್ಲಿ ಕರಂದಾಡಿ ಶ್ರೀ ರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಯಕ್ಷಗಾನ ತರಗತಿಯನ್ನು ಪ್ರಾರಂಭಿಸಲಾಯಿತು.   ಯಕ್ಷಗಾನದ ತರಗತಿಯನ್ನು ದೀಪ ಬೆಳಗಿಸಿ ಶಾಲಾ ನಿವೃತ್ತ […]

ಕರಂದಾಡಿ : ಶ್ರೀ ರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಯಕ್ಷಗಾನ ತರಗತಿ ಪ್ರಾರಂಭ

(kaup) ಕಾಪು: ಕರಂದಾಡಿ ದಿ. ಲೀಲಾಧರ್ ಶೆಟ್ಟಿಯವರು ಸ್ಥಾಪಿಸಿ, ಪೋಷಿಸಿದ ಸಂಸ್ಥೆಯಿಂದ ಅವರ ಸವಿ ನೆನೆಪಿಗಾಗಿ ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಕೃಪಾಪೋಷಿತ ತ್ರಿಮೂರ್ತಿ ಯಕ್ಷಗಾನ ಕಲಾ ಕೇಂದ್ರ ಕರಂದಾಡಿ ಇದರ ಆಶ್ರಯದಲ್ಲಿ ಕರಂದಾಡಿ ಶ್ರೀ ರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಯಕ್ಷಗಾನ ತರಗತಿಯನ್ನು ಪ್ರಾರಂಭಿಸಲಾಯಿತು.

  ಯಕ್ಷಗಾನದ ತರಗತಿಯನ್ನು ದೀಪ ಬೆಳಗಿಸಿ ಶಾಲಾ ನಿವೃತ್ತ ಮುಖ್ಯೋಪಾಧ್ಯಯರಾದ ನಿರ್ಮಲ್ ಕುಮಾರ್ ಹೆಗ್ಡೆಯವರು ಉದ್ಘಾಟಿಸಿದರು.

ಶಾಲಾ ಮುಖ್ಯೋಪಾಧ್ಯಾಯರಾದ ಆರ್ ಎಸ್ ಕಲ್ಲೂರರವರು ಅಧ್ಯಕ್ಷತೆ ವಹಿಸಿದ್ದರು.

ಯಕ್ಷಗಾನ ಕಲಾ ಕೇಂದ್ರದ  ಗುರುಗಳಾದ ನಿತ್ಯಾನಂದ ಶೆಟ್ಟಿಗಾರ್ ರವರು ಶಾಲಾ ಮಕ್ಕಳಿಗೆ ಯಕ್ಷಗಾನದ ಬಗ್ಗೆ ಮಾಹಿತಿ ನೀಡಿದರು.

 ಈ ಸಂದರ್ಭದಲ್ಲಿ ಶಾಲಾ ದೈಹಿಕ ಶಿಕ್ಷಕರಾದ ಪ್ರಕಾಶ್, ಶಿಕ್ಷಕಿಯರಾದ ಹರಿಣಾಕ್ಷಿ, ಶ್ವೇತಾ, ಲವೀನಾ ,ಅನಿತಾ ಮತ್ತು ಭಜನಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಉಪಸ್ಥಿತಿತರಿದ್ದರು.

 ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀಧರ್ ಶೆಟ್ಟಿಗಾರ್ ಸ್ವಾಗತಿಸಿದರು.

ಶಾಲಾ ಶಿಕ್ಷಕಿ ಸತ್ಯವತಿ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.