• Home  
  • ಹೆಜಮಾಡಿ: ನಿಂತಿದ್ದ ಕಂಟೈನರ್‌ಗೆ ವೇಗಧೂತ ಬಸ್ಸು ಢಿಕ್ಕಿ-20ಕ್ಕೂ ಅಧಿಕ ಮಂದಿಗೆ ಗಾಯ (Hejamady : A Speeding bus rammed in to a standing Container, more than 20 injured)
- ಅಪಘಾತ

ಹೆಜಮಾಡಿ: ನಿಂತಿದ್ದ ಕಂಟೈನರ್‌ಗೆ ವೇಗಧೂತ ಬಸ್ಸು ಢಿಕ್ಕಿ-20ಕ್ಕೂ ಅಧಿಕ ಮಂದಿಗೆ ಗಾಯ (Hejamady : A Speeding bus rammed in to a standing Container, more than 20 injured)

Share:  ಹೆಜಮಾಡಿ: ನಿಂತಿದ್ದ ಕಂಟೈನರ್‌ಗೆ ವೇಗಧೂತ ಬಸ್ಸು ಢಿಕ್ಕಿ-20ಕ್ಕೂ ಅಧಿಕ ಮಂದಿಗೆ ಗಾಯ (Hejamadi) ಹೆಜಮಾಡಿ: ಹೆದ್ದಾರಿ ಬದಿ ನಿಂತಿದ್ದ ಕಂಟೈನರ್‌ಗೆ  ಹಿಂಬದಿಯಿಂದ ವೇಗಧೂತ ಬಸ್ಸು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬಸ್ಸು ಚಾಲಕ ಸಹಿತ 20ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಪೆಟ್ರೋಲ್ ಪಂಪ್ ಬಳಿ ಮಂಗಳವಾರ ಸಂಜೆ ನಡೆದಿದೆ. ಭವಾನಿ, ಅಮೀನಾ, ಫಾತಿಮಾ, ಸಿಯಾ, ಸಚಿನ್, ಸನತ್ ಕುಮಾರ್, ಪೌಲ್, ಮಾತೂಮ್, ಆನಂದ ಪ್ರಭು, ನಸೀಮ್ ಶೇಖ್, ಅಶೋಕ್, […]

 ಹೆಜಮಾಡಿ: ನಿಂತಿದ್ದ ಕಂಟೈನರ್ಗೆ ವೇಗಧೂತ ಬಸ್ಸು ಢಿಕ್ಕಿ-20ಕ್ಕೂ ಅಧಿಕ ಮಂದಿಗೆ ಗಾಯ

(Hejamadi) ಹೆಜಮಾಡಿ: ಹೆದ್ದಾರಿ ಬದಿ ನಿಂತಿದ್ದ ಕಂಟೈನರ್ಗೆ  ಹಿಂಬದಿಯಿಂದ ವೇಗಧೂತ ಬಸ್ಸು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬಸ್ಸು ಚಾಲಕ ಸಹಿತ 20ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಪೆಟ್ರೋಲ್ ಪಂಪ್ ಬಳಿ ಮಂಗಳವಾರ ಸಂಜೆ ನಡೆದಿದೆ.

ಭವಾನಿ, ಅಮೀನಾ, ಫಾತಿಮಾ, ಸಿಯಾ, ಸಚಿನ್, ಸನತ್ ಕುಮಾರ್, ಪೌಲ್, ಮಾತೂಮ್, ಆನಂದ ಪ್ರಭು, ನಸೀಮ್ ಶೇಖ್, ಅಶೋಕ್, ನಂದನ, ವಿಕ್ರಮ್, ಸಿದ್ದು, ಅಮಿತ್, ಶಕುಂತಳಾ, ಪ್ರದೀಪ್, ಸುಮತಿ ಮತ್ತು ಈಶ್ವರ ಮೂರ್ತಿ ಗಾಯಗೊಂಡು ಮುಕ್ಕ ಖಾಸಗಿ ಅಸ್ಪತ್ರೆಗೆ ದಾಖಲಾದವರು.

ಚಾಲಕ ವಿಕ್ರಮ್ ಮತ್ತು ಕುಂದಾಪುರ-ಉಡುಪಿಯ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ವಿವರ: ಹೆಜಮಾಡಿ ಟೋಲ್ ಪ್ಲಾಝಾದಿಂದ ಮುಂದುವರಿದು ಹೆಜಮಾಡಿ ಪೆಟ್ರೋಲ್ ಪಂಪ್ ಬಳಿ ಬರುವಾಗ ಇಳಿಜಾರಿನ ರಸ್ತೆ ತಿರುವು ಇದೆ. ಈ ತಿರುವಿನಲ್ಲಿಯೇ ಕುಂದಾಪುರ ಕಡೆಯಿಂದ ಗೇರು ಬೀಜ ಅನ್‌ಲೋಡ್ ಮಾಡಿ ಮಂಗಳೂರಿಗೆ ಹಿಂತಿರುಗುತ್ತಿದ್ದ ಕಂಟೈನರ್ ಚಾಲಕ ಮೂತ್ರ ವಿಸರ್ಜನೆಗೆಂದು ಹೆದ್ದಾರಿ ಬದಿ ಕಂಟೈನರ್ ನಿಲ್ಲಿಸಿದ್ದ. ಉಡುಪಿ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ವೇಗಧೂತ ಬಸ್ಸು ಸಂಜೆ ೪ ಗಂಟೆ ಸಮಯ ಏಕಮುಖ ರಸ್ತೆಯ ಇಳಿಜಾರಿನ ರಸ್ತೆಯ ತಿರುವಿನಲ್ಲಿ ಬಲಭಾಗದಲ್ಲಿ ಹೋಗುತ್ತಿದ್ದ ವಾಹನವನ್ನು ಎಡಭಾಗದಲ್ಲಿ ಓವರ್‌ಟೇಕ್ ಮಾಡಿದಾಗ ಅತೀ ವೇಗದಲ್ಲಿ ಕಂಟೈನರ್‌ಗೆ ಢಿಕ್ಕಿಹೊಡೆದಿತ್ತು.

 ಅತೀ ವೇಗದಲ್ಲಿ ಢಿಕ್ಕಿಹೊಡೆದ ಕಾರಣ ಬಸ್ಸಿನ ಮುಂಭಾಗ ಕಂಟೈನರ್‌ಗೆ ಸಿಲುಕಿಕೊಂಡಿತ್ತು. ಬಸ್ಸಿನ ಒಳಭಾಗದಲ್ಲಿ ಕೆಲವು ಸೀಟು ಸಹಿತ ಕಬ್ಬಣದ ಸಪೋರ್ಟ್ ರಾಡ್‌ಗಳು ತುಂಡಾಗಿತ್ತು. ಬಸ್ಸಲ್ಲಿನ ಹಲವು ಪ್ರಯಾಣಿಕರ ಕಾಲು ಮತ್ತು ಮುಖಕ್ಕೆ ಗಾಯಗಳಾಗಿತ್ತು. ಚಾಲಕ ವಿಕ್ರಮ್‌ರ ಸೀಟು ತುಂಡಾಗಿ ಅವರ ತಲೆ, ಕಾಲು ಮತ್ತು ಎದೆಗೆ ಪೆಟ್ಠಾಗಿತ್ತು. ತಕ್ಷಣ ಹೆಜಮಾಡಿಯ ಟೋಲ್ ಪ್ಲಾಝಾ ಮತ್ತು ಹೆಜಮಾಡಿಯ ಕಮ್ಯುನಿಟಿ ಕೇರ್ ಅಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಸ್ಥಳೀಯರ ಸಹಕಾರದೊಂದಿಗೆ ಅಸ್ಪತ್ರೆಗೆ ದಾಖಲಿಸಲಾಯಿತು.

ಪಡುಬಿದ್ರಿ ಠಾಣಾಕಾರಿ ಪ್ರಸನ್ನ ಎಮ್.ಎಸ್. ಘಟನಾ ಸ್ಥಳಕ್ಕೆ ಆಗಮಿಸಿ ಟೊಲ್ ಸಿಬ್ಬಂದಿಗಳ ಸಹಕಾರದೊಂದಿಗೆ ಅಪಘಾತದ ವಾಹನಗಳನ್ನು ತೆರವುಗೊಳಿಸಿದರು.

 ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.