ಕಾಪುವಿನಲ್ಲಿ ಮಾಜಿ ಸಚಿವ ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ
ನೀಟ್, ಬೆಲೆ ಏರಿಕೆ, ಎಸ್ ಐ ಆರ್, ಗ್ಯಾಸ್, ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ರಸ್ತೆ ತಡೆ
(Kaup) ಕಾಪು : ಕಾಪು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ಹಾಗೂ ಕಾಪು ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರ ಸರಕಾರದ ವೈಫಲ್ಯದ ವಿರುದ್ಧಕಾಪು ಪೇಟೆಯಲ್ಲಿ ಮಾಜಿ ಸಚಿವ ವಿನಯ ಕುಮಾರ್ ನೇತೃತ್ವದಲ್ಲಿ ಶನಿವಾರ ಸಂಜೆ ರಸ್ತೆ ತಡೆ, ಬೃಹತ್ ಪ್ರತಿಭಟನಾ ಸಭೆ ನಡೆಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರವು ಪಾರದರ್ಶಕ ಆಡಳಿತವೆಂದು ಹೇಳಿಕೊಂಡು ಬ್ರಷ್ಟಾಚಾರ ಮಾಡಿ ಮಕ್ಕಳ ಭವಿಷ್ಯದಲ್ಲಿಯೂ ಚೆಲ್ಲಾಟವಾಡಿದೆ. ಪೇಪರ್ ಲೀಕ್ ಆಗಿರುವ ನೀಟ್ ಪರೀಕ್ಷೆಯೇ ಬೇಡ. ಸಿಇಟಿ ವ್ಯವಸ್ಥೆಯೇ ಉತ್ತಮವಾಗಿದೆ. ಅದನ್ನೇ ಮುಂದುವರಿಸಿ ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಬಿಜೆಪಿ ಆಡಳಿತದ ಸಮಯ ಹಿಜಾಬ್ ಸಮಸ್ಯೆಯಿಂದ ಉಡುಪಿ ಎಸ್ ಎಸ್ ಎಲ್ ಸಿಯಲ್ಲಿ 18 ನೇ ಸ್ಥಾನ ಪಡೆದಿತ್ತು. ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಪ್ರಥಮ, ದ್ವಿತೀಯದಲ್ಲಿದೆ. ಮೋದಿ ಸಹಿತವಾಗಿ ಉಡುಪಿ ಜಿಲ್ಲೆಯ ಸಂಸದರು, ಉಡುಪಿ, ಕಾಪು ಶಾಸಕರು ಪದವಿಯನ್ನು ಪಡೆಯದವರು. ಪದವಿ ಗಳಿಸದವರಿಗೆ ವಿದ್ಯಾಭ್ಯಾಸದ ಮೇಲೆ ಎಷ್ಟು ನಿಗಾ ಇರಲು ಸಾಧ್ಯ ಎಂದು ಪ್ರಶ್ನಿಸಿದರು.
ಕೆಪಿಸಿಸಿ ವಕ್ತಾರ ಅಮೃತ್ ಶೆಣೈ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ಯುವ ಮುಖಂಡ ಸೌರಭ್ ಬಲ್ಲಾಳ್ ಮಾತನಾಡಿದರು.
ಈ ಸಂದರ್ಭ ಕಾಂಗ್ರೆಸ್ ಕಾಪು ಬ್ಲಾಕ್ ಅಧ್ಯಕ್ಷ ವೈ ಸುಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಿಯಾಝ್, ಅರ್ಜುನ್ ನಾಯಕ್, ಗೌರೀಶ್ ಕೋಟ್ಯಾನ್, ಮಹಮ್ಮದ್ ನಿಯಾಝ್, ರಮೀಝ್ ಹುಸೇನ್, ನವೀನ್ ಚಂದ್ರ ಸುವರ್ಣ, ನವೀನ್ ಚಂದ್ರ ಶೆಟ್ಟಿ, ನವೀನ್ ಎನ್ ಶೆಟ್ಟಿ, ಜಿತೇಂದ್ರ ಫುಟಾರ್ಡೊ, ಶರ್ಫುದ್ದೀನ್ ಶೇಖ್, ಗೀತಾ ವಾಗ್ಳೆ, ದೀಪಕ್ ಎರ್ಮಾಳು, ವೈ ಸುಧೀರ್ ಕುಮಾರ್, ಗಣೇಶ್ ಕೋಟ್ಯಾನ್, ತಸ್ನೀನ್ ಅರಹಾ, ಸುಚರಿತ ಲಕ್ಷ್ಮಣ್, ಅಬ್ದುಲ್ ಅಜೀಜ್, ಆತೀಫ್, ಮತ್ತಿತರರು ಉಪಸ್ಥಿತರಿದ್ದರು.
