• Home  
  • ಕಾಪುವಿನ ಹಳೆ, ಹೊಸ ಮತ್ತು ಕಲ್ಯ ಮಾರಿಗುಡಿಗಳಲ್ಲಿ ಏಕಕಾಲಕ್ಕೆ ಸುಗ್ಗಿ ಮಾರಿಪೂಜೆ ಸಂಪನ್ನ (At Kaup Hosa, Hale & Kalya marigudi Jarde maari pooja celebration)
- ಧಾರ್ಮಿಕ

ಕಾಪುವಿನ ಹಳೆ, ಹೊಸ ಮತ್ತು ಕಲ್ಯ ಮಾರಿಗುಡಿಗಳಲ್ಲಿ ಏಕಕಾಲಕ್ಕೆ ಸುಗ್ಗಿ ಮಾರಿಪೂಜೆ ಸಂಪನ್ನ (At Kaup Hosa, Hale & Kalya marigudi Jarde maari pooja celebration)

Share: ಕಾಪುವಿನ ಹಳೆ, ಹೊಸ ಮತ್ತು ಕಲ್ಯ ಮಾರಿಗುಡಿಗಳಲ್ಲಿ ಏಕಕಾಲಕ್ಕೆ ಸುಗ್ಗಿ ಮಾರಿಪೂಜೆ ಸಂಪನ್ನ ಸಿಡುಬು, ಸಂತಾನಫಲ, ಮುತೈದೆ ಭಾಗ್ಯಗಳಿಗಾಗಿ ಖ್ಯಾತಿ ಪಡೆದ ಕಾಪುವಿನ ಮೂರೂ ಮಾರಿಗುಡಿಗಳು ಕಾಪು: ಇತಿಹಾಸ ಪ್ರಸಿದ್ಧ ಕಾಪುವಿನ ಮೂರು ಮಾರಿಗುಡಿಗಳಾದ ಹಳೆ ಮಾರಿಗುಡಿ, ಹೊಸ ಮಾರಿಗುಡಿ   ಹಾಗೂ ಕಲ್ಯ ಮಾರಿಗುಡಿಯಲ್ಲಿ ಏಕಕಾಲದಲ್ಲಿ ತುಳುವರ ಸುಗ್ಗಿ ಮಾರಿ ಪೂಜಾ ಮಹೋತ್ಸವ ಮಂಗಳವಾರ ರಾತ್ರಿ ಹಾಗೂ ಬುಧವಾರ ವಿಜೃಂಭಣೆಯಿಂದ ಜರಗಿತು.   ಸಿಡುಬು, ಸಂತಾನಫಲ, ಮುತೈದೆ ಭಾಗ್ಯಗಳಿಗಾಗಿ ಅತ್ಯಂತ ಪ್ರಸಿದ್ಧಿ ಪಡೆದ ಕಾಪುವಿನ ಮೂರೂ […]

ಕಾಪು: ಇತಿಹಾಸ ಪ್ರಸಿದ್ಧ ಕಾಪುವಿನ ಮೂರು ಮಾರಿಗುಡಿಗಳಾದ ಹಳೆ ಮಾರಿಗುಡಿ, ಹೊಸ ಮಾರಿಗುಡಿ   ಹಾಗೂ ಕಲ್ಯ ಮಾರಿಗುಡಿಯಲ್ಲಿ ಏಕಕಾಲದಲ್ಲಿ ತುಳುವರ ಸುಗ್ಗಿ ಮಾರಿ ಪೂಜಾ ಮಹೋತ್ಸವ ಮಂಗಳವಾರ ರಾತ್ರಿ ಹಾಗೂ ಬುಧವಾರ ವಿಜೃಂಭಣೆಯಿಂದ ಜರಗಿತು.

  ಸಿಡುಬು, ಸಂತಾನಫಲ, ಮುತೈದೆ ಭಾಗ್ಯಗಳಿಗಾಗಿ ಅತ್ಯಂತ ಪ್ರಸಿದ್ಧಿ ಪಡೆದ ಕಾಪುವಿನ ಮೂರೂ ಮಾರಿಗುಡಿಗಳಲ್ಲಿ ಮಾರ್ಚ್‌ ತಿಂಗಳ ಅಂತ್ಯಕ್ಕೆ ಸುಗ್ಗಿ ಮಾರಿಪೂಜೆ, ಜುಲೈ ತಿಂಗಳ ಅಂತ್ಯಕ್ಕೆ ಆಷಾಡ ಮಾರಿಪೂಜೆ ಹಾಗೂ ನವಂಬರ್‌ ತಿಂಗಳಾಂತ್ಯದಲ್ಲಿ ಜಾರ್ದೆ ಮಾರಿ ಪೂಜೆ ನಡೆಯುತ್ತದೆ.

ಸುಗ್ಗಿ ಹಾಗೂ ಆಷಾಡ ತಿಂಗಳ ಮಾರಿ ಪೂಜೆಯಲ್ಲಿಅತೀ ಹೆಚ್ಚಿನ ಭಕ್ತಾಧಿಗಳು ಕಾಪುವಿನ ಮಾರಿಗುಡಿಗಳಿಗೆ ಆಗಮಿಸುತ್ತಿದ್ದು, ಜಾರ್ದೆ ಮಾರಿ ಪೂಜೆಯಲ್ಲಿ ಭಕ್ತಾಧಿಗಳ ಸಂಖ್ಯೆ ಇಳಿಮುಖವಾಗುತ್ತದೆ. ಆದರೂ ಭಕ್ತಾಧಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಸಾಗುತ್ತದೆ. 

  ಕಾಪು ಮಾರಿಪೂಜೆಯಲ್ಲಿ ಕುರಿ ಹಾಗೂ ಕೋಳಿಗಳ ಬಲಿ ನಡೆಯುತ್ತದೆ. ಸರಕಾರ ಬಲಿ ನೀಡದಂತೆ ತಡೆನೀಡಿದ್ದರೂ, ಭಕ್ತಾಧಿಗಳು ಸ್ವಯಂ ಪ್ರೇರಿತರಾಗಿ ಕೋಳಿಗಳನ್ನು ಮಾರಿಗುಡಿ ಹೊರಗೆ ಕಡಿದು ತಮ್ಮ ಮನೆಗಳಿಗೆ ಕೊಂಡೊಯ್ಯತ್ತಾರೆ.

  ಪ್ರತಿ ಮಾರಿಪೂಜೆಗಳಲ್ಲಿ ಲಕ್ಷಾಂತರ ಕೋಳಿಗಳ ಬಲಿ ನಡೆಯುವುದು ಇಲ್ಲಿಯ ವಿಶೇಷಗಳಲ್ಲೊಂದು.

Leave a comment

Your email address will not be published. Required fields are marked *

eMedia Kannada  @2025. All Rights Reserved.