• Home  
  • ಕಾಪು ತಾಲೂಕಿನ ವಿವಿಧ ಗ್ರಾಮ ಪಂಚಾಯತ್‌ ಎದುರು ಕಾಂಗ್ರೆಸ್‌ ಪಕ್ಷದಿಂದ ಪ್ರತಿಭಟನೆ (Protest by Congress party in front of various Gram Panchayats of Kaup Taluk)
- protest - ರಾಜಕೀಯ

ಕಾಪು ತಾಲೂಕಿನ ವಿವಿಧ ಗ್ರಾಮ ಪಂಚಾಯತ್‌ ಎದುರು ಕಾಂಗ್ರೆಸ್‌ ಪಕ್ಷದಿಂದ ಪ್ರತಿಭಟನೆ (Protest by Congress party in front of various Gram Panchayats of Kaup Taluk)

Share: ಕಾಪು ತಾಲೂಕಿನ ವಿವಿಧ ಗ್ರಾಮ ಪಂಚಾಯತ್‌ ಎದುರು ಕಾಂಗ್ರೆಸ್‌ ಪಕ್ಷದಿಂದ ಪ್ರತಿಭಟನೆ (Kaup) ಕಾಪು : ಮಾಜಿ ಸಚಿವ ವಿನಯಕುಮಾರ್‌ ಕುಮಾರ್ ಸೊರಕೆ ಹಾಗೂ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಕಾಪು ತಾಲೂಕಿನ ವಿವಿಧ ಗ್ರಾಮ ಪಂಚಾಯತ್‌ಗಳ ಎದುರು ವಿವಿಧ ಬೇಡಿಕೆ ಈಡೇರಿಕೆ ಹಾಗೂ ಅಧಿಕಾರಿಗಳ ತಾರತಮ್ಯ ವಿರೋಧಿಸಿ ಶನಿವಾರ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿತು.   ಕಟಪಾಡಿ, ಕೋಟೆ, ಕುರ್ಕಾಲು, ಇನ್ನಂಜೆ ಗ್ರಾಮ ಪಂಚಾಯತ್‌ಗಳಲ್ಲಿ ಹಕ್ಕು ಪತ್ರ, ಮನೆ ನಿವೇಶನ  ನೀಡಲು ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವ […]

(Kaup) ಕಾಪು : ಮಾಜಿ ಸಚಿವ ವಿನಯಕುಮಾರ್‌ ಕುಮಾರ್ ಸೊರಕೆ ಹಾಗೂ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಕಾಪು ತಾಲೂಕಿನ ವಿವಿಧ ಗ್ರಾಮ ಪಂಚಾಯತ್‌ಗಳ ಎದುರು ವಿವಿಧ ಬೇಡಿಕೆ ಈಡೇರಿಕೆ ಹಾಗೂ ಅಧಿಕಾರಿಗಳ ತಾರತಮ್ಯ ವಿರೋಧಿಸಿ ಶನಿವಾರ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿತು.

  ಕಟಪಾಡಿ, ಕೋಟೆ, ಕುರ್ಕಾಲು, ಇನ್ನಂಜೆ ಗ್ರಾಮ ಪಂಚಾಯತ್‌ಗಳಲ್ಲಿ ಹಕ್ಕು ಪತ್ರ, ಮನೆ ನಿವೇಶನ  ನೀಡಲು ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವ ಅಧಿಕಾರಿ ವರ್ಗದ ತಾರತಮ್ಯ ನೀತಿಯನ್ನು ವಿರೋಧಿಸಲಾಯಿತು.

  9/11 ಪ್ರಕ್ರಿಯೆಯನ್ನು ಜಟಿಲಗೊಳಿಸಿರುವುದು ಮತ್ತು ವೃದ್ಧಾಪ್ಯ ವೇತನವನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ರದ್ದು ಪಡಿಸುತ್ತಿದೆ ಎಂದು ಸುಳ್ಳು ಮಾಹಿತಿ ನೀಡಿ ಜನರನ್ನು ಗೊಂದಲಕ್ಕೆ ಸಿಲುಕಿಸುತ್ತಿರುವ ಬಿಜೆಪಿಯ ಅಪಪ್ರಚಾರದ ವಿರುದ್ಧ ಪ್ರತಿಭಟಿಸಲಾಯಿತು.

 ಪ್ರತಿಭಟನೆಯಲ್ಲಿ ಕಾಪು ಯುವ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ನಿಯಾಜ್‌, ಆಯಾಯ ಗ್ರಾಮದ ಗ್ರಾಮಸ್ಥರು, ವಿವಿಧ ಯೋಜನೆಗಳ ಫಲಾನುಭವಿಗಳು, ಹಕ್ಕುಪತ್ರ, ನಿವೇಶನಕ್ಕೆ ಅರ್ಜಿ ಸಲ್ಲಿಸಿರುವ ನಾಗರಿಕರು, ಸವಲತ್ತು ವಂಚಿತರು, ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು, ಯುವ ಕಾಂಗ್ರೆಸ್ ಕಾರ್ಯಕರ್ತರು‌, ನಾಗರೀಕರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.