ಉಡುಪಿ ಉಚ್ಚಿಲ 2026 : ದಸರಾ ಕುಸ್ತಿ ಪಂದ್ಯಾಕೂಟ–2026
“ಉಚ್ಚಿಲ ದಸರಾ ಕೇಸರಿ”, “ಉಚ್ಚಿಲ ದಸರಾ ಕುಮಾರ್”, ಮಹಿಳಾ ವಿಭಾಗದಲ್ಲಿ “ಉಚ್ಚಿಲ ದಸರಾ ಕುವರಿ”ಪ್ರಶಸ್ತಿ
(Uchila) ಉಚ್ಚಿಲ : ದ.ಕ. ಮೊಗವೀರ ಮಹಾಜನ ಸಂಘದ ವತಿಯಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮೀದೇವಿಯ ಸನ್ನಿಧಿಯಲ್ಲಿ ಜರಗುವ ಉಡುಪಿ ಉಚ್ಚಿಲ ದಸರಾ ಮಹೋತ್ಸವ 2026ರ ಸಲುವಾಗಿ ಉಭಯ ಜಿಲ್ಲೆಗಳಲ್ಲಿ ಕುಸ್ತಿ ಕ್ರೀಡೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಎರಡು ಜಿಲ್ಲೆಗಳನ್ನು ಒಳಗೊಂಡ ಕುಸ್ತಿಪಟುಗಳಲ್ಲಿ ಕುಸ್ತಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಪುರುಷರ ವಿಭಾಗದಲ್ಲಿ “ಉಚ್ಚಿಲ ದಸರಾ ಕೇಸರಿ” ಹಾಗೂ “ಉಚ್ಚಿಲ ದಸರಾ ಕುಮಾರ್”ಪ್ರಶಸ್ತಿ ವಿಭಾಗ ಹಾಗೂ ಮಹಿಳೆಯರ ವಿಭಾಗದಲ್ಲಿ “ಉಚ್ಚಿಲ ದಸರಾ ಕುವರಿ”ಪ್ರಶಸ್ತಿಯನ್ನು ಹಾಗೂ ಎರಡು ವಿಭಾಗಗಳಲ್ಲಿ ಹಲವಾರು ದೇಹತೂಕದ ಮಾದರಿಯಲ್ಲಿ ಕುಸ್ತಿ ಸ್ಪರ್ಧೆಯನ್ನು ಆಯೋಜಿಸಲು ಉಚ್ಚಿಲ ದಸರಾ ಸಾಂಸ್ಕೃತಿಕ ಹಾಗೂ ಕ್ರೀಡಾ ಸಮಿತಿಯಲ್ಲಿ ನಿರ್ಧರಿಸಲಾಗಿದೆ.
ಆದುದರಿಂದ ಈ ಸ್ಪರ್ಧಾಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾಳುಗಳು ಭಾಗವಹಿಸಿ ಈ ಕುಸ್ತಿ ಸ್ಪರ್ಧೆಯನ್ನು ಯಶಸ್ವಿಗೊಳಿಸಬೇಕಾಗಿ ನಿಮ್ಮಲ್ಲಿ ವಿನಂತಿಸಲಾಗಿದೆ.
ಕುಸ್ತಿ ನಡೆಯುವ ಸ್ಥಳ:
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಮುಂಭಾಗದಲ್ಲಿ
ದಿನಾಂಕ: 13-10-2026,ಮಂಗಳವಾರ ಸಮಯ: ಬೆಳಿಗ್ಗೆ 8.00 ಗಂಟೆಯಿಂದ.
ದಸರಾ ಸಮಿತಿಯ ನಿರ್ಧಾರದಂತೆ ಈ ಬಾರಿ ಈ ಕೆಳಗಿನ ತೂಕಗಳ ಸ್ಪರ್ಧೆಗಳನ್ನು ನಡೆಸುವುದೆಂದು ನಿರ್ಧರಿಸಲಾಗಿದೆ.
ಸ್ಪರ್ಧೆಯ ತೂಕದ ವಿವರಗಳು:
ಪುರುಷರ ವಿಭಾಗ:
34ರಿಂದ 38,41 ಕೆಜಿ, 46 ಕೆಜಿ,50 ಕೆಜಿ, 57 ಕೆಜಿ,61 ಕೆಜಿ, 65 ಕೆಜಿ — ಉಚ್ಚಿಲ ಕುಮಾರ್
74 ಕೆಜಿ — ಉಚ್ಚಿಲ ದಸರಾ ಕೇಸರಿ, 86 ಕೆಜಿ, 86 ಕೆಜಿಯಿಂದ 97 ಕೆಜಿ.
ಮಹಿಳಾ ವಿಭಾಗ:
32 ರಿಂದ 36 ಕೆಜಿ,43 ಕೆಜಿ,46 ಕೆಜಿ,53 ಕೆಜಿ — ಉಚ್ಚಿಲ ದಸರಾ ಕುವರಿ 59 ಕೆಜಿ, 65 ಕೆಜಿ 68 ಕೆಜಿ, 68 ರಿಂದ 76 ಕೆಜಿ.
ಸ್ಪರ್ಧೆಯ ನಿಯಮಗಳು:
1. ಉಡುಪಿ ಹಾಗೂ ದ.ಕ. ಜಿಲ್ಲೆಯಲ್ಲಿ ಹುಟ್ಟಿದ ಕುಸ್ತಿ ಪಟುಗಳಿಗೆ ಮಾತ್ರ ಕ್ರೀಡಾಕೂಟದಲ್ಲಿ ಭಾಗವಹಿಸಬಹುದು. ಇತರ ಜಿಲ್ಲೆಗಳ ಕ್ರೀಡಾ ಪಟುಗಳಿಗೆ ಅವಕಾಶವಿರುವುದಿಲ್ಲ.
2. ದೇಹದ ತೂಕ ಮಾಡುವ ಸಮಯದಲ್ಲಿ ಪ್ರತಿಯೊಬ್ಬ ಕುಸ್ತಿ ಪಟುವು ತನ್ನ ಮೂಲ ಆಧಾರ್ ಕಾರ್ಡ್ ಹಾಗೂ ಪಾಸ್‌ಪೋರ್ಟ್ ಸೈಜ್ ಫೋಟೋವನ್ನು ತರತಕ್ಕದ್ದು.
3. ಯಾವುದೇ ವಿಭಾಗಗಳಲ್ಲಿ 4 ಸ್ಪರ್ಧಾಳುಗಳು ಕಡಿಮೆ ಇದ್ದ ಪಕ್ಷದಲ್ಲಿ, ಆ ವಿಭಾಗದ ಕುಸ್ತಿ ಸ್ಪರ್ಧೆಯನ್ನು ರದ್ದು ಮಾಡಲಾಗುವುದು.
4. ಅಶಿಸ್ತಿನ ವರ್ತನೆ ತೋರಿದ ಕುಸ್ತಿಪಟುಗಳಲ್ಲಿ ಅಥವಾ ಆ ಕುಸ್ತಿ ಪಟುವಿನ ತಂಡದ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು.
5. ಪ್ರತಿ ವಿಭಾಗದಲ್ಲಿ ಜಯಿಸಿದ ಮೂರು ಕುಸ್ತಿ ಸ್ಪರ್ಧಾಳುಗಳಿಗೆ ಮಾತ್ರ ಪದಕಗಳನ್ನು ಹಾಗೂ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನಗಳನ್ನು ನೀಡಲಾಗುವುದು.
6. ಸಂಘಟಕರ ಹಾಗೂ ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ.
ವಿ.ಸೂ: ಸ್ಪರ್ಧೆಗಳಲ್ಲಿ ಭಾಗವಹಿಸುವ ಸ್ಪರ್ಧಾಳುಗಳ ದೇಹದ ತೂಕವನ್ನು ತಾ. 12-10-2026ರ ಸೋಮವಾರ, ಅಪರಾಹ್ನ ಗಂಟೆ 2.30 ರಿಂದ ಸಂಜೆ ಗಂಟೆ 6.00ರ ತನಕ ಮಾಡಲಾಗುವುದು. ಸಮಯ ಮೀರಿ ಬಂದಂತಹ ಸ್ಪರ್ಧಾಳುಗಳ ತೂಕವನ್ನು ಮಾಡಲಾಗುವುದಿಲ್ಲ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ದೂರವಾಣಿ ಸಂಖ್ಯೆ:
ವಿಜಯ ಸುವರ್ಣ : 9731052556

