• Home  
  • ಸಂಗೊಳ್ಳಿ ರಾಯಣ್ಣ ಪುರಸ್ಕಾರಕ್ಕೆ ಸಂಘಟಕ, ರಂಗಕರ್ಮಿ ರವಿರಾಜ್ ಎಚ್. ಪಿ. ಆಯ್ಕೆ (Organizer for Sangolli Rayanna Award, Raviraj H. P. choice)
- ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ

ಸಂಗೊಳ್ಳಿ ರಾಯಣ್ಣ ಪುರಸ್ಕಾರಕ್ಕೆ ಸಂಘಟಕ, ರಂಗಕರ್ಮಿ ರವಿರಾಜ್ ಎಚ್. ಪಿ. ಆಯ್ಕೆ (Organizer for Sangolli Rayanna Award, Raviraj H. P. choice)

Share: ಸಂಗೊಳ್ಳಿ ರಾಯಣ್ಣ ಪುರಸ್ಕಾರಕ್ಕೆ ಸಂಘಟಕ, ರಂಗಕರ್ಮಿ ರವಿರಾಜ್ ಎಚ್. ಪಿ. ಆಯ್ಕೆ  ಸಂಗೊಳ್ಳಿ ರಾಯಣ್ಣ ಅಭಿಮಾನ ಬಳಗ ದ.ಕ, ಉಡುಪಿ ಜಿಲ್ಲಾಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠರಿಂದ ಮಾಹಿತಿ      (Udupi) ಉಡುಪಿ: ಹತ್ತು ಹಲವು ಸಂಘ ಸಂಸ್ಥೆಯಲ್ಲಿ ತೊಡಗಿಸಿಕೊಂಡಿರುವ ಸಂಘಟಕ, ರಂಗಕರ್ಮಿ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಅಧ್ಯಕ್ಷ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್. ಪಿ. ಯವರನ್ನು ಆಯ್ಕೆ ಮಾಡಲಾಗಿದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನ ಬಳಗ ದ.ಕ ಮತ್ತು […]

 (Udupi) ಉಡುಪಿ: ಹತ್ತು ಹಲವು ಸಂಘ ಸಂಸ್ಥೆಯಲ್ಲಿ ತೊಡಗಿಸಿಕೊಂಡಿರುವ ಸಂಘಟಕ, ರಂಗಕರ್ಮಿ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಅಧ್ಯಕ್ಷ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್. ಪಿ. ಯವರನ್ನು ಆಯ್ಕೆ ಮಾಡಲಾಗಿದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನ ಬಳಗ ದ.ಕ ಮತ್ತು ಉಡುಪಿ ಜಿಲ್ಲೆಯ ಅಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ತಿಳಿಸಿದರು.  

   ರವಿರಾಜ್ ಎಚ್. ಪಿ.  ಪರಿಚಯ :

  ನಾಟಕ ಕ್ಷೇತ್ರದಲ್ಲಿ: ಹಿರಿಯ ನಾಟಕ ನಿರ್ದೇಶಕರಾದ ಪ್ರಸನ್ನ ಹೆಗ್ಗೋಡು, ಚಿದಂಬರಾವ್ ಜಂಬೆ, ಜೀವನ್ ರಾಮ್ ಸುಳ್ಯ, ಗುರುರಾಜ್ ಮಾರ್ಪಳ್ಳಿ, ಶ್ರೀನಿವಾಸ್ ಪ್ರಭು, ಮಂಡ್ಯ ರಮೇಶ, ಮಾಲತೇಶ್ ಬಡಿಗೇರ, ರಾಮ ದಾಸ್, ಆನಂದ ಗಾಣಿಗ, ಬಾಸುಮ ಕೊಡಗು,  ಇವರುಗಳಿಂದ ರಂಗ ಶಿಕ್ಷಣ ಪಡೆದಿದ್ದಾರೆ.

ನಟಿಸಿದ ನಾಟಕಗಳು : ಲಚ್ಚಿ, ಶಾರದಾ, ಪ್ರಾಣ ಹೋದರೂ ಮಾನಬೇಕು, ಸ್ವಪ್ನ ಲೋಕ, ಸಿರಿ ಸಂಪಿಗೆ, ಸೂರ್ಯ ಶಿಕಾರಿ, ಗಾಂಧಿನಗರ, ಬಾಸ ಭಾರತ, ಸುಳಿಯಲ್ಲಿ ಸಿಕ್ಕವರು, ಮಹಾಕಾಲ, ಚಮ್ಮಾರನ ಚಾಲಾಕಿ ಹೆಂಡತಿ, ಹೇಮಂತ, ಸಾಂಬಶಿವ ಪ್ರಹಸನ, ಬೆಂದಕಾಳು ಆನ್ಟೋಸ್ಟ್ ಇನ್ನೂ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ.

  ನಿರ್ದೇಶಿಸಿದ ನಾಟಕಗಳು – ನಿದ್ರಾನಗರಿ, ಮಾರಿಕಳೆ (ಮಕ್ಕಳ ನಾಟಕಗಳು), ಶಾರದ, ನಾಗಮಂಡಲ, ಚೋರ ಚರಣ ದಾಸ, ಐಸಿಯು, ನನ್ನೊಳಗಿನ ಅವಳು, ಅಹಲ್ಯ , ತುದೆದಾಂಟಿ ಬೊಕ್ಕ ಮುಂತಾದುವು. ಸುಮಾರು 20ಕ್ಕೂ ಹೆಚ್ಚು ನಾಟಕಗಳಿಗೆ ಬೆಳಗಿನ ವಿನ್ಯಾಸ ಮಾಡಿರುವುದು.

   ಪ್ರತಿಷ್ಠಿತ ರಂಗಭೂಮಿ (ರಿ) ಉಡುಪಿಯ ಸದಸ್ಯನಾಗಿ, ಕೋಶಾಧಿಕಾರಿಯಾಗಿ, ಕಾರ್ಯದರ್ಶಿಯಾಗಿ, ಶಿಬಿರಗಳ ಸಂಚಾಲಕನಾಗಿ, ನಾಟಕಗಳ ನಿರ್ದೇಶಕನಾಗಿ 25 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ.

    ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ‘ಹೀಗೊಂದು ರಂಗ ಕಲಿಕೆ ‘ ಎನ್ನುವ ವಿಶಿಷ್ಟ ಪರಿಕಲ್ಪನೆಯಲ್ಲಿ ನವರಸಗಳ ರಂಗ ಕಲಿಕೆಗಳನ್ನು ಯೂಟ್ಯೂಬ್ ಮೂಲಕ ಕರ್ನಾಟಕದ ಹಿರಿಯ ರಂಗ ನಿರ್ದೇಶಕರ ಮೂಲಕ ಪ್ರಸಾರ ಮಾಡಿರುವುದು. ಸುಮಾರು ಹತ್ತು ಲಕ್ಷದಷ್ಟು ಹೆಚ್ಚು ಜನ ವೀಕ್ಷಕರು ಇದನ್ನು ವೀಕ್ಷಿಸಿರುವುದು.  ಹಾಗೂ ಸುಮಾರು 300 ಕ್ಕೂ ಹೆಚ್ಚು ರಂಗ ನಟರು ಇದರಲ್ಲಿ ಭಾಗವಹಿಸಿರುವುದು. ಇದೊಂದು ದಾಖಲೆ. (ಯೂಟ್ಯೂಬ್ ನಲ್ಲಿ ಲಭ್ಯವಿದೆ)

   ಆರೋಗ್ಯ ಮಾಹಿತಿಯ ಕುರಿತು ಜಿಲ್ಲಾಡಳಿತದೊಂದಿಗೆ ಸೇರಿ ಕಳೆದ ಹತ್ತು ವರ್ಷಗಳಿಂದ ಸುಮಾರು 250 ಕ್ಕೂ ಹೆಚ್ಚು ಬೀದಿ ನಾಟಕಗಳಿಗೆ ಸಂಚಾಲಕನಾಗಿ ಉಡುಪಿ ಜಿಲ್ಲೆಯಾದ್ಯಂತ ನಡೆಸಿರುವುದು.

ಸಿನಿಮಾರಂಗ: ಕಲಾತ್ಮಕ ಚಲನಚಿತ್ರ ಗುರ್ಬಿ ಯಲ್ಲಿ ಸಹ ನಿರ್ದೇಶಕನಾಗಿ ಕಾರ್ಯನಿರ್ವಹಿಸಿರುವುದು. ಹತ್ತಕ್ಕೂ ಹೆಚ್ಚು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿರುವುದು.

 ಸಾಕ್ಷ್ಯ ಚಿತ್ರ: ಯೂಟ್ಯೂಬ್ ಗಳಲ್ಲಿ ಹಲವು ಸಾಕ್ಷ್ಯ ಚಿತ್ರಗಳನ್ನು ಬಿಡುಗಡೆಗೊಳಿಸಿರುವುದು.  ಪದ್ಮಶ್ರೀ ಪುರಸ್ಕೃತರಾದ ಪರಿಸರವಾದಿ ಡಾ. ಸಾಲುಮರದ ತಿಮ್ಮಕ್ಕ ಅವರ ಕುರಿತಾದ 25 ನಿಮಿಷಗಳ ಸಾಕ್ಷ್ಯ ಚಿತ್ರ ರಚಿಸಿರುವುದು (ಯೂಟ್ಯೂಬ್ ನಲ್ಲಿ ಲಭ್ಯವಿದೆ)

   ನಮ್ಮ ಮನೆ ನಮ್ಮ ಮರ ಅಭಿಯಾನ: ಪರಿಸರವನ್ನು ಉಳಿಸಿ ಬೆಳೆಸುವ ಕಾರ್ಯಕ್ರಮದ ಅಂಗವಾಗಿ ಮೂವರ ನಮ್ಮ ಮನೆ ನಮ್ಮ ಮರ ತಂಡ (ಗುರುರಾಜ್ ಸನಿಲ್ ಖ್ಯಾತ ವರ್ಗ ತಜ್ಞ, ಅವಿನಾಶ್ ಕಾಮತ್ ನಿರೂಪಕರು, ಹಾಗೂ ರವಿರಾಜ್ ಹೆಚ್‌. ಪಿ) ದಿಂದ ಉಡುಪಿ ಜಿಲ್ಲಾಧ್ಯಂತ  ಮನೆಗಳಲ್ಲಿ, ದೇವಸ್ಥಾನಗಳಲ್ಲಿ, ಮಸೀದಿಗಳಲ್ಲಿ, ಚರ್ಚ್‌ ಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ಸರಕಾರಿ ಕಚೇರಿಗಳಲ್ಲಿ, ಹಾಗೂ ಅಂಗಡಿ ಮುಂಗಟ್ಟುಗಳ ಹೊರಣದಲ್ಲಿ ಸುಮಾರು 16 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪರಿಸರದ ಮಹತ್ವವನ್ನು ತಿಳಿಸಿರುವುದು ಮತ್ತು ಶಾಲಾ ಕಾಲೇಜುಗಳಲ್ಲಿ ಪರಿಸರದ ಮಹತ್ವವನ್ನು ಮಕ್ಕಳಿಗೆ ತಿಳಿಸಿರುವುದು.

  ಆರೋಗ್ಯ ಶಿಬಿರ: ಸುಮಾರು 27 ವರ್ಷಗಳಿಂದ 500 ಕ್ಕೂ ಹೆಚ್ಚು ಆರೋಗ್ಯ ಶಿಬಿರಗಳಲ್ಲಿ ಭಾಗವಹಿಸಿ, ಬಡ ರೋಗಿಗಳಿಗೆ ಉಚಿತ ಔಷಧಿಗಳನ್ನು ಹಾಗೂ ಅಗತ್ಯ ಮೆಡಿಕಲ್ ಕಿಟ್ ಗಳನ್ನು ನೀಡಿರುವುದು.

   ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ: ಉಡುಪಿಯ ಪ್ರತಿಷ್ಠಿತ ಸಾಂಸ್ಕೃತಿಕ ಸಾಮಾಜಿಕ ಹಾಗೂ ಸಾಹಿತ್ಯ ಸಂಸ್ಥೆಗಳಲ್ಲಿ ಒಂದಾದ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಹುಟ್ಟು ಹಾಗೂ ಬೆಳವಣಿಗೆಗೆ ಕಾರಣವಾಗಿರುವುದು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ವಿಶ್ವಪ್ರಭಾ ಪುರಸ್ಕಾರ (ಪ್ರತಿ ವರ್ಷ ಒಂದು ಲಕ್ಷ ನಗದಿನೊಂದಿಗೆ ಒಬ್ಬರಿಗೆ. ಪಂಚಮಿ ಪುರಸ್ಕಾರ ಪ್ರತಿ ವರ್ಷ ಒಂದು ಲಕ್ಷ ನಗದಿನೊಂದಿಗೆ ಕನ್ನಡ ನಾಡು ನುಡಿ ಸಂಸ್ಕೃತಿಗೆ ಕೊಟ್ಟ ಅನನ್ಯಸೇವೆಗಾಗಿ ಒಬ್ಬರಿಗೆ ನೀಡುತ್ತಿರುವುದು.

 ‘ಶಾರದಾ ಕೃಷ್ಣ ಪುರಸ್ಕಾರ’ ಪ್ರತಿ ವರ್ಷ ನಾಟಕ ರಂಗದಲ್ಲಿ ಸಾಧನೆ ಮಾಡಿದ ಗಣ್ಯ ವ್ಯಕ್ತಿಗಳನ್ನು ಗುರುತಿಸಿ 25,000 ಗಳೊಂದಿಗೆ ಗೌರವಿಸುವುದು. ಮಲಬಾರ್ ವಿಶ್ವ ರಂಗ ಪುರಸ್ಕಾರ’ ಪ್ರತಿ ವರ್ಷ ರಾಜ್ಯ ಹಾಗೂ ಹೊರ ರಾಜ್ಯದ ಐದು ಮಂದಿ ನಾಟಕ ಕಲಾವಿದರಿಗೆ 3000 ನಗದಿನೊಂದಿಗೆ ಗೌರವಿಸುವುದು. ‘ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರ’ ಸಾಹಿತ್ಯದ ಸೇವೆಗಾಗಿ ರಾಜ್ಯದ ಹಿರಿಯ ಸಾಹಿತಿಗಳನ್ನು 5,000 ಗೌರವ ದನದೊಂದಿಗೆ ಮೂರು ಸಾಹಿತಿಗಳನ್ನು ಪ್ರತಿವರ್ಷ ಗೌರವಿಸುವುದು.

   ಮಲಬಾರ್ ವಿಶ್ವ ವೈದ್ಯ, ಲೆಕ್ಕ ಪರಿಶೋಧಕ, ಹಾಗೂ ಪತ್ರಿಕಾ ಮಾಧ್ಯಮದವರನ್ನು ಪ್ರತಿ ವರ್ಷ ಗೌರವಿಸುವುದು. ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿಯನ್ನು ಪ್ರತಿ ವರ್ಷ 10,000 ನಗದಿನೊಂದಿಗೆ ಗೌರವಿಸುತ್ತಿರುವುದು. ಇನ್ನಿತರ ಹಲವು ಸಾಂಸ್ಕೃತಿಕ, ಸಾಹಿತ್ಯದ ಹಾಗೂ ಸಾಮಾಜಿಕ ಕೆಲಸಗಳನ್ನು ಕಳೆದ ಆರು ವರ್ಷಗಳಿಂದ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕನಾಗಿ ನಿರಂತರವಾಗಿ ನಡೆಸಿಕೊಂಡು ಬಂದಿರುವುದು.

  ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷರಾಗಿ:

  ಉಡುಪಿ ತಾಲೂಕು ಘಟಕದ ಅಧ್ಯಕ್ಷರಾಗಿ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಸುಮಾರು 450 ಕ್ಕೂ ಹೆಚ್ಚು ಕನ್ನಡನಾಡು-ನುಡಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಉಡುಪಿಯಲ್ಲಿ ನಡೆಸಿರುವುದು.

  ಕಥೆ ಕೇಳೋಣ:

ಸರಣಿ ಕಾರ್ಯಕ್ರಮವನ್ನು ಮಣಿಪಾಲ ರೇಡಿಯೋ ಮೂಲಕ ಸುಮಾರು 220ಕ್ಕೂ ಹೆಚ್ಚು ಸಾಹಿತಿಗಳನ್ನು ಕರೆದು ಅವರ ಸ್ವರಚಿತ ಕಥೆಗಳನ್ನು ರೇಡಿಯೋ ಮೂಲಕ ಪ್ರಸಾರ ಮಾಡುತ್ತಿರುವುದು. ಮನೆಯೇ ಗ್ರಂಥಾಲಯ: ಅಭಿಯಾನದ ಮೂಲಕ 210ಕ್ಕೂ ಹೆಚ್ಚು ಮನೆಗಳಲ್ಲಿ, ಶಾಲೆಗಳಲ್ಲಿ, ಅಂಗಡಿ ಮುಂಗಟ್ಟುಗಳಲ್ಲಿ, ಆಸ್ಪತ್ರೆಗಳಲ್ಲಿ, ಡಿಸಿ ಆಫೀಸಿನಲ್ಲಿ ಗ್ರಂಥಾಲಯಗಳನ್ನು ತೆರೆದಿರುವುದು.

  ಕನ್ನಡ ಮಾತನಾಡು:

  ಈ ಕಾರ್ಯಕ್ರಮದ ಮೂಲಕ ಕನ್ನಡ ಮಾತನಾಡಲು ಬಾರದಿರುವವರನ್ನು ಹಿರಿಯ ಕನ್ನಡ ವಿದ್ವಾಂಸರನ್ನು ಕರೆಯಿಸಿ ಶಿಬಿರಗಳನ್ನು ಆಯೋಜಿಸಿ, ಕನ್ನಡವನ್ನು  ಮಾತನಾಡಲು ಹಾಗೂ ಬರೆಯಲು ಕಲಿಸಿರುವುದು.

  ಉಡುಪಿ ಚಾವಡಿ ಅಭಿಯಾನದ ಮೂಲಕ ನಾಡಿನ ಹಿರಿಯ ಸಾಹಿತಿಗಳು,ಕಲಾವಿದರನ್ನು ಕರೆಯಿಸಿ ಮ್ಯಾಕ್ಸ್ ಮೀಡಿಯಾ ಮೂಲಕ ಅವರೊಂದಿಗೆ ಮಾತುಕತೆ ನಡೆಸಿ ಯೂಟ್ಯೂಬ್ ಮೂಲಕ ಸಮಾಜಕ್ಕೆ ತಲುಪಿಸುತ್ತಿರುವುದು. ಕಳೆದ ನಾಲ್ಕು  ವರ್ಷದಲ್ಲಿ ನಾಲ್ಕು  ತಾಲೂಕು ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿರುವುದು. ಶಾಲಾ ಕಾಲೇಜುಗಳಲ್ಲಿ ಕವಿ ಗೋಷ್ಠಿಗಳನ್ನು ಯಶಸ್ವಿಯಾಗಿ ನಡೆಸಿರುವುದು.

  ಪ್ರಶಸ್ತಿ ಸನ್ಮಾನಗಳು :

  ಉತ್ತಮ ನಟನೆಗಾಗಿ ರಾಜ್ಯಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಹಲವು ಬಾರಿ ಬಹುಮಾನ. ನಾಗಮಂಡಲ ನಾಟಕ ನಿರ್ದೇಶನಕ್ಕೆ ರಾಜ್ಯಮಟ್ಟದ ಪ್ರಶಸ್ತಿ, (ತುಳುಕೂಟ ಉಡುಪಿಯಿಂದ), ರಂಗಭೂಮಿ ಸಾಧನೆಗಾಗಿ ಸಿಜಿಕೆ ರಂಗ ಪ್ರಶಸ್ತಿ, ಜೂನಿಯರ್ ಚೇಂಬರ್ ಇಂಟರ್ನ್ಯಾಷನಲ್ ನಿಂದ ಸಾಧನಾಶ್ರೀ ಪ್ರಶಸ್ತಿ. ಪರಿಸರದ ಸೇವೆಗಾಗಿ ಸಾಲುಮರದ ತಿಮ್ಮಕ್ಕ ಇಂಟರ್‌ ನೇಷನಲ್ ಗ್ರೀನರಿ ಅವಾರ್ಡ್. ಭಾವನ ಫೌಂಡೇಶನ್ ನಿಂದ ‘ಕಲಾ ಸಿಂಧು’ ಪ್ರಶಸ್ತಿ (ರಂಗಭೂಮಿ ಸಾಧನೆಗಾಗಿ).

   ಜೂನಿಯರ್ ಚೇಂಬರ್ ಇಂಟರ್‌ ನೇಷನಲ್ ನಿಂದ ಕಮಲ ಪತ್ರ ಪ್ರಶಸ್ತಿ. ಜಿಲ್ಲಾ ನಾಟಕ ಕಲಾವಿದರ ಒಕ್ಕೂಟ, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಜೈಂಟ್ಸ್ ಇಂಟರ್ನ್ಯಾಷನಲ್ ಕ್ಲಬ್, ರಾಷ್ಟ್ರೀಯ ವೈದ್ಯರ ದಿನಾಚರಣೆ, ಕನ್ನಡ ಸಾಹಿತ್ಯ ಪರಿಷತ್ತು ಇನ್ನಿತರ ಸಂಘ ಸಂಸ್ಥೆಗಳಿಂದ ಗೌರವ ಸನ್ಮಾನ ನಡೆದಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.