• Home  
  • ಕಾಪು: ಬಿರುಗಾಳಿಯ ಅಬ್ಬರಕ್ಕೆ ಸಮುದ್ರ ಕಿನಾರೆ ಬಳಿಯ ಕ್ಯಾಂಟೀನ್‌ಗೆ ಹಾನಿ (Kaup: Canteen near the seashore damaged by storm surge)
- PROBLEMS - ವಿಡಿಯೋ

ಕಾಪು: ಬಿರುಗಾಳಿಯ ಅಬ್ಬರಕ್ಕೆ ಸಮುದ್ರ ಕಿನಾರೆ ಬಳಿಯ ಕ್ಯಾಂಟೀನ್‌ಗೆ ಹಾನಿ (Kaup: Canteen near the seashore damaged by storm surge)

Share: ಕಾಪು: ಬಿರುಗಾಳಿಯ ಅಬ್ಬರಕ್ಕೆ ಸಮುದ್ರ ಕಿನಾರೆ ಬಳಿಯ ಕ್ಯಾಂಟೀನ್‌ಗೆ ಹಾನಿ (Kaup) ಕಾಪು : ಕರಾವಳಿಯಲ್ಲಿ ಬೀಸಿದ ಭಾರೀ ಬಿರು ಗಾಳಿಗೆ ಕಾಪು ಬೀಚ್ ಬಳಿಯ ಕ್ಯಾಂಟೀನ್‌ವೊಂದರ ತಗಡು ಮೇಚ್ಚಾವಣಿ ಹಾರಿ ಹೋಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಪಡುಗ್ರಾಮದ ದಯೋದರ ಪುತ್ರನ್ ಅವರ ಕ್ಯಾಂಟೀನ್‌ನ ತಗಡು ಶೀಟ್ ಸಂಪೂರ್ಣ ಹಾರಿ ಹೋಗಿ ಪಕ್ಕದ ಹೊಳೆಗೆ ಬಿದ್ದಿದೆ. ಸಿಮೆಂಟ್ ಶೀಟ್ ಬಿದ್ದು ಕ್ಯಾಂಟೀನ್‌ನ ಒಳಗಿನ ಕುರ್ಚಿ, ಟೇಬಲ್ ಮತ್ತು ಅಡುಗೆ ಸಲಕರಣೆಗಳಿಗೂ ಹಾನಿಯುಂಟಾಗಿದೆ. ವಿಕಲಚೇತನರಾಗಿರುವ ದಯೋದರ ಪುತ್ರನ್ […]

(Kaup) ಕಾಪು : ಕರಾವಳಿಯಲ್ಲಿ ಬೀಸಿದ ಭಾರೀ ಬಿರು ಗಾಳಿಗೆ ಕಾಪು ಬೀಚ್ ಬಳಿಯ ಕ್ಯಾಂಟೀನ್‌ವೊಂದರ ತಗಡು ಮೇಚ್ಚಾವಣಿ ಹಾರಿ ಹೋಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ಪಡುಗ್ರಾಮದ ದಯೋದರ ಪುತ್ರನ್ ಅವರ ಕ್ಯಾಂಟೀನ್‌ನ ತಗಡು ಶೀಟ್ ಸಂಪೂರ್ಣ ಹಾರಿ ಹೋಗಿ ಪಕ್ಕದ ಹೊಳೆಗೆ ಬಿದ್ದಿದೆ. ಸಿಮೆಂಟ್ ಶೀಟ್ ಬಿದ್ದು ಕ್ಯಾಂಟೀನ್‌ನ ಒಳಗಿನ ಕುರ್ಚಿ, ಟೇಬಲ್ ಮತ್ತು ಅಡುಗೆ ಸಲಕರಣೆಗಳಿಗೂ ಹಾನಿಯುಂಟಾಗಿದೆ.

ವಿಕಲಚೇತನರಾಗಿರುವ ದಯೋದರ ಪುತ್ರನ್ ಅವರು ಹಲವಾರು ವರ್ಷಗಳಿಂದ ಬೀಚ್ ಬಳಿ ಗೂಡಂಗಡಿ ಮತ್ತು ಕ್ಯಾಂಟೀನ್ ನಡೆಸುತ್ತಿದ್ದು, ಕ್ಯಾಂಟೀನ್‌ಗೆ ಹಾನಿಯುಂಟಾಗಿರುವುದರಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಕಾಪು ಪುರಸಭಾ ಸದಸ್ಯ ನಿತಿನ್ ಕುಮಾರ್, ಗ್ರಾಮ ಆಡಳಿತಾಧಿಕಾರಿ ವೆಂಕಟೇಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾಪು ಬೀಚ್‌ನಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಜೋಡಿಸಲಾಗಿದ್ದ ಮನೋರಂಜನಾ ಕ್ರಿಕೆಟ್ ಕ್ಲಬ್‌ನ ಕಂಬಗಳು ಉರುಳಿ ಬಿದ್ದು, ಸುತ್ತಲೂ ಹಾಕಿರುವ ಬಲೆ ಮತ್ತು ವಿದ್ಯುತ್ ವಯರ್‌ಗಳಿಗೂ ಹಾನಿಯುಂಟಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.