• Home  
  • ಮಲ್ಲಾರು-ಮಜೂರು ಬದ್ರಿಯ ಮಸ್ಜಿದ್ ವತಿಯಿಂದ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ (Mallaru-Majur Badria Mosque bids farewell to Haj pilgrims)  
- ಸನ್ಮಾನ, ಅಭಿನಂದನೆ

ಮಲ್ಲಾರು-ಮಜೂರು ಬದ್ರಿಯ ಮಸ್ಜಿದ್ ವತಿಯಿಂದ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ (Mallaru-Majur Badria Mosque bids farewell to Haj pilgrims)  

Share:  ಮಲ್ಲಾರು–ಮಜೂರು ಬದ್ರಿಯ ಮಸ್ಜಿದ್ ವತಿಯಿಂದ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ  ಮಸೀದಿ ಅಧ್ಯಕ್ಷ ಡಾ. ಫಾರೂಕ್ ಚಂದ್ರನಗರ ನೇತೃತ್ವದಲ್ಲಿ ಸನ್ಮಾನ (Kaup) ಕಾಪು : ಮಲ್ಲಾರು-ಮಜೂರು ಬದ್ರಿಯ ಜುಮ್ಮಾ ಮಸ್ಜಿದ್ ಆಡಳಿತ ಸಮಿತಿ ವತಿಯಿಂದ ಹಜ್ ಯಾತ್ರಿಕರಿಗೆ ಅಧ್ಯಕ್ಷರಾದ ಡಾ. ಫಾರೂಕ್ ಚಂದ್ರನಗರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.    ಈ ಸಂದರ್ಭದಲ್ಲಿ ಸನ್ಮಾನಿಸಿ ಮಾತನಾಡಿದ ಡಾ. ಫಾರೂಕ್ ಚಂದ್ರನಗರ, ಅಬ್ದುಲ್ ರಝಕ್ ಮಲ್ಲಾರು, ಕಾಸಿಂ ಗುಡ್ಡೆಕೇರಿ ಹಾಗೂ ರಿಯಾಜ್ ಉಸ್ತಾದ್ ರವರು ನಮ್ಮ ಜಮಾತಿಗರಾಗಿದ್ದು ಎಲ್ಲರೊಂದಿಗೂ ಉತ್ತಮ ಬಾಂಧವ್ಯ […]

(Kaup) ಕಾಪು : ಮಲ್ಲಾರು-ಮಜೂರು ಬದ್ರಿಯ ಜುಮ್ಮಾ ಮಸ್ಜಿದ್ ಆಡಳಿತ ಸಮಿತಿ ವತಿಯಿಂದ ಹಜ್ ಯಾತ್ರಿಕರಿಗೆ ಅಧ್ಯಕ್ಷರಾದ ಡಾ. ಫಾರೂಕ್ ಚಂದ್ರನಗರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

   ಈ ಸಂದರ್ಭದಲ್ಲಿ ಸನ್ಮಾನಿಸಿ ಮಾತನಾಡಿದ ಡಾ. ಫಾರೂಕ್ ಚಂದ್ರನಗರ, ಅಬ್ದುಲ್ ರಝಕ್ ಮಲ್ಲಾರು, ಕಾಸಿಂ ಗುಡ್ಡೆಕೇರಿ ಹಾಗೂ ರಿಯಾಜ್ ಉಸ್ತಾದ್ ರವರು ನಮ್ಮ ಜಮಾತಿಗರಾಗಿದ್ದು ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದವರು. ಇದೀಗ ಪವಿತ್ರ ಹಜ್ ಯಾತ್ರೆಗೆ ಹೊರಟಿದ್ದು, ಅವರ ಯಾತ್ರೆ ಶುಭವಾಗಲಿ ಎಂದು ಹಾರೈಸಿದರು.

  ಈ ಸಂದರ್ಭದಲ್ಲಿ ಮಸ್ಜಿದ್ ಖತೀಬರಾದ ಅಬ್ದುಲ್ ರಶೀದ್ ಸಖಾಫಿ ಅಲ್-ಖಾಮಿಲ್ ದುವಾ ನೆರವೇರಿಸಿ ಶುಭಹಾರೈಸಿದರು.

   ಈ ಸಂದರ್ಭದಲ್ಲಿ ಮಸ್ಜಿದ್ ಉಪಾಧ್ಯಕ್ಷ ಹಸನಬ್ಬ ಮಜೂರು, ಪ್ರಧಾನ ಕಾರ್ಯದರ್ಶಿ ಅಶ್ರಫ್ ಮೂಸಾ, ಕಾರ್ಯದರ್ಶಿಗಳಾದ ಅಶ್ರಫ್ ಕರಂದಾಡಿ, ರಜಬ್ ಕರಂದಾಡಿ, ಕೋಶಾಧಿಕಾರಿ ಪಿ. ಎಂ ಇಬ್ರಾಹಿಂ, ಸದಸ್ಯರಾದ ಅಬ್ದುಲ್ಲ ಚಂದ್ರನಗರ, ಹಸನಬ್ಬ ಗುಡ್ಡೆಕೇರಿ, ಅಬ್ದುಲ್ ರಝಕ್ ಕೊಪ್ಪಲ್ತೋಟ, ಅಬ್ದುಲ್ ರೆಹಮಾನ್ ಕೊಂಬಗುಡ್ಡೆ, ನೆಹಮತ್ ಅಚ್ಚಲ್, ಹಸನಬ್ಬ ಪಕೀರಣಕಟ್ಟೆ, ಸಮೀರ್ ಕೆ.ಪಿ ಹಾಗೂ ಜಮಾತ್ ಸದಸ್ಯರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.