ಕೂಡ್ಲಿಗಿ ಶಾಸಕ ಡಾ. ಎನ್ ಟಿ ಶ್ರೀನಿವಾಸ್‌ರವರ ಮನೆಗೆ ಇಡಿ ದಾಳಿ : ಅಭಿಮಾನಿಗಳ ಧರಣಿ
(Koodligi) ಕೂಡ್ಲಿಗಿ : ವಿಜಯನಗರ ಜಿಲ್ಲಾ ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಡಾ. ಎನ್ ಟಿ ಶ್ರೀನಿವಾಸರವರ ಸ್ವ ಗ್ರಾಮ ನರಸಿಂಹಗಿರಿಯಲ್ಲಿನ ನಿವಾಸದ ಮೇಲೆ, ಇಡಿ ಅಧಿಕಾರಿಗಳು ಇಂದು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದಾರೆ.
ದಾಳಿ ಸಂದರ್ಭದಲ್ಲಿ ಶಾಸಕರ ತಾಯಿಯವರು ಉಪಸ್ಥಿತರಿದ್ದು, ಅವರು ಅಧಿಕಾರಿಗಳಿಗೆ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ.
ನಸು ಮುಂಜಾನೆಯೇ ಶಾಸಕರ ಮನೆಯನ್ನು ಪ್ರವೇಶಿಸಿರುವ ಇಡಿ ಅಧಿಕಾರಿಗಳು , ಮನೆಯ ಬಾಗಿಲುಗಳನ್ನು ಭದ್ರವಾಗಿ ಬಂದ್ ಮಾಡಿದ್ದು ಸತತವಾಗಿ ಪರಿಶೀಲಿಸುತ್ತಿದ್ದಾರೆ.
ಇಡಿ ಆಧಿಕಾರಿಗಳೊಂದಿಗೆ ಆಗಮಿಸಿರುವ ಅರೆ ಸೇನಾಪಡೆ, ಸ್ಥಳೀಯ ಪೊಲೀಸ್ ಠಾಣಾಧಿಕಾರಿಗಳು ಮತ್ತು ಸಿಬ್ಬಂದಿಯವರು ಕರ್ಥವ್ಯ ನಿರತರಾಗಿದ್ದಾರೆ.
ಕೆಲ ಹೊತ್ತಲ್ಲೇ ದಾಳಿ ಸುದ್ದಿಯು ಗಾಳಿಗುಂಟ ಗ್ರಾಮದಲ್ಲೆಲ್ಲಾ ಹರಡಿದೆ. ನೆರೆ ಹೊರೆ ಗ್ರಾಮಗಳಿಂದ ನೂರಾರು ಜನ ಶಾಸಕರ ಅಭಿಮಾನಿಗಳು ಹಿತೈಷಿಗಳು ಶಾಸಕರ ನಿವಾಸದತ್ತ ಆಗಮಿಸಿದ್ದಾರೆ. ಇಡಿ ದಾಳಿಗೆ ಅವರು ತೀವ್ರ ಬೇಸರ ಹಾಗೂ ವಿಷಾದ ವ್ಯಕ್ತಪಡಿಸಿದ್ದಾರೆ.
ಮುಂಜಾನೆಯಿಂದ ಶಾಸಕರ ನಿವಾಸದತ್ತ ನೂರಾರು ಅವರ ಅಭಿಮಾನಿಗಳ ದಂಡು, ನಿರಂತರವಾಗಿ ಬಂದು ಕೆಲತಾಸುಗಳ ಕಾಲ ತಂಗಿ ಖೇದ ವ್ಯಕ್ತಪಡಿಸುತ್ತಿದ್ದಾರೆ.
ಅನಿವಾರ್ಯ ಕಾರಣಗಳಿಂದಾಗಿ ಅದರಲ್ಲಿ ಕೆಲವರು ಮರಳಿ ತಮ್ಮೂರಿಗೆ ತೆರಳಿದರೆ, ಬಹುತೇಕ ಶಾಸಕರ ಹಿತೈಷಿಗಳು ಶಾಸಕರ ಮನೆಯ ಅಂಗಳದಲ್ಲಿಯೇ ಮೌನವಾಗಿದ್ದು ತಮ್ಮ ಪ್ರತಿಭಟನೆ ಅಭಿವ್ಯಕ್ತಪಡಿಸುತ್ತಿದ್ದಾರೆ.
ಬಹುತೇಕರು ವಯೋ ಸಹಜ ಕಣ್ಣಿನ ಪೊರೆಯಿಂದ ಬಳಲಿ, ಶಾಸಕರಿಂದ ಉಚಿತ ಕಣ್ಣಿನ ಪೊರೆ ಚಿಕಿತ್ಸೆ ಔಷಧ ನೆರವನ್ನು ಪಡೆದ ವಯೋವೃದ್ಧರೇ ಹೆಚ್ಚಾಗಿದ್ದಾರೆ.
ನೂರಾರು ಶಾಸಕರ ಅಭಿಮಾನಿಗಳು ಶಾಸಕರ ಮನೆಯಂ ಹೊರಭಾಗದಲ್ಲಿ, ಮುಂಜಾನೆಯಿಂದ ಅನಿರ್ಧಿಷ್ಟಾವಧಿ ಧರಣಿ ನಿರತರಂತೆ ಮೌನವಾಗಿ ಕೂತ್ತಿದ್ದಾರೆ. ಹಲವು ಮಹಿಳಾ ವೃದ್ಧರು ತಮ್ಮ ಗ್ರಾಮೀಣ ಭಾಷೆಯಲ್ಲಿ ಶಾಸಕರ ಜನಪರ ಹಾಡಿ ಹೊಗಳುತ್ತಿದ್ದಾರೆ.

