• Home  
  • ಈದ್ ಉಲ್ ಆಜ್ಹಾ — (ಬಕ್ರೀದ್) ಭ್ರಾತೃತ್ವವನ್ನು ನೆಲೆಗೊಳಿಸುವ  ಹಬ್ಬ(Eid ul Azha — (Bakrid) The festival of brotherhood)
- fastival

ಈದ್ ಉಲ್ ಆಜ್ಹಾ — (ಬಕ್ರೀದ್) ಭ್ರಾತೃತ್ವವನ್ನು ನೆಲೆಗೊಳಿಸುವ  ಹಬ್ಬ(Eid ul Azha — (Bakrid) The festival of brotherhood)

Share: ಈದ್ ಉಲ್ ಆಜ್ಹಾ — (ಬಕ್ರೀದ್) ಭ್ರಾತೃತ್ವವನ್ನು ನೆಲೆಗೊಳಿಸುವ  ಹಬ್ಬ ಬಕ್ರೀದ್‌ ಹಬ್ಬದ ಪ್ರಯುಕ್ತ ಅನ್ವರ್ ಅಲಿ  ಕಾಪುರವರ ವಿಶೇಷ ಲೇಖನ (Kaup) ಕಾಪು: ಈದ್ ಉಲ್ ಆಜ್ಹಾ ಅಥವಾ ಬಕ್ರೀದ್ ಇಸ್ಲಾಂ ಧರ್ಮದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ. ಇದು ಕೇವಲ ಹಬ್ಬದ ಆಚರಣೆ ಮಾತ್ರವಲ್ಲ ತ್ಯಾಗ, ವಿಧೇಯತೆ, ಸಹೋದರತ್ವ ಮತ್ತು ಮಾನವೀಯತೆಯ ಮಹಾನ್ ಸಂದೇಶವನ್ನು ಸಾರುವ ಪವಿತ್ರ ದಿನವಾಗಿದೆ.   ಪ್ರವಾದಿ ಇಬ್ರಾಹೀಮ್ (ಅ) ಮತ್ತು ಅವರ ಪುತ್ರ ಇಸ್ಮಾಯಿಲ್ (ಅ) ರವರ […]

(Kaup) ಕಾಪು: ಈದ್ ಉಲ್ ಆಜ್ಹಾ ಅಥವಾ ಬಕ್ರೀದ್ ಇಸ್ಲಾಂ ಧರ್ಮದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ. ಇದು ಕೇವಲ ಹಬ್ಬದ ಆಚರಣೆ ಮಾತ್ರವಲ್ಲ ತ್ಯಾಗ, ವಿಧೇಯತೆ, ಸಹೋದರತ್ವ ಮತ್ತು ಮಾನವೀಯತೆಯ ಮಹಾನ್ ಸಂದೇಶವನ್ನು ಸಾರುವ ಪವಿತ್ರ ದಿನವಾಗಿದೆ.

  ಪ್ರವಾದಿ ಇಬ್ರಾಹೀಮ್ (ಅ) ಮತ್ತು ಅವರ ಪುತ್ರ ಇಸ್ಮಾಯಿಲ್ (ಅ) ರವರ ತ್ಯಾಗದ ಸ್ಮರಣಾರ್ಥವಾಗಿ ಆಚರಿಸಲ್ಪಡುವ ಈ ಹಬ್ಬವು ಮುಸ್ಲಿಮರ ಮನಸ್ಸಿನಲ್ಲಿ ಅಲ್ಲಾಹನ ಭಯಭಕ್ತಿ ಹಾಗೂ ಪರಸ್ಪರ ಪ್ರೀತಿ-ವಿಶ್ವಾಸವನ್ನು ಹೆಚ್ಚಿಸುತ್ತದೆ.

  ಈದ್ ಉಲ್ ಆಜ್ಹಾದ ಪ್ರಮುಖ ಆಚರಣೆ ಕುರ್ಬಾನಿಯಾಗಿದೆ. ಕುರ್ಬಾನಿ ಎಂದರೆ ಕೇವಲ ಪ್ರಾಣಿಯನ್ನು ಬಲಿ ಕೊಡುವುದಲ್ಲ. ತನ್ನ ಸ್ವಾರ್ಥ, ಅಹಂಕಾರ ಮತ್ತು ದುರಭಿಪ್ರಾಯಗಳನ್ನು ತ್ಯಜಿಸುವ ಮನೋಭಾವವನ್ನು ಬೆಳೆಸುವುದಾಗಿದೆ.

   ಕುರ್ಬಾನಿಯ ಮಾಂಸವನ್ನು ಬಡವರು, ಬಂಧುಗಳು ಮತ್ತು ನೆರೆ ಹೊರೆಯವರೊಂದಿಗೆ ಹಂಚಿಕೊಳ್ಳುವ ಮೂಲಕ ಸಮಾಜದಲ್ಲಿ ಸಮಾನತೆ ಮತ್ತು ಭ್ರಾತೃತ್ವದ ಬಾಂಧವ್ಯ ಬಲವಾಗುತ್ತದೆ. ಶ್ರೀಮಂತರು ತಮ್ಮ ಸಂಪತ್ತನ್ನು ಸಮಾಜದ ದುರ್ಬಲ ವರ್ಗದವರೊಂದಿಗೆ ಹಂಚಿಕೊಳ್ಳುವಾಗ, ಬಡವರ ಮನಸ್ಸಿನಲ್ಲಿ ಸಂತೋಷ ಮತ್ತು ಆತ್ಮೀಯತೆ ಮೂಡುತ್ತದೆ.

  ಈ ಹಬ್ಬವು “ನಾವು ಎಲ್ಲರೂ ಒಂದೇ ಕುಟುಂಬ”ಎಂಬ ಸಂದೇಶವನ್ನು ಸಾರುತ್ತದೆ. ಜಾತಿ, ಭಾಷೆ, ಪ್ರದೇಶ, ವರ್ಗ ಎಂಬ ಬೇಧಗಳನ್ನು ಮರೆತು ಎಲ್ಲರೂ ಒಂದಾಗಿ ಈದ್ ನಮಾಝ್‌ನಲ್ಲಿ ಭಾಗವಹಿಸುವುದು ಮುಸ್ಲಿಂ ಸಮುದಾಯದ ಏಕತೆಯ ಸುಂದರ ದೃಶ್ಯವಾಗಿದೆ. ಪರಸ್ಪರ ಕೈಕುಲುಕಿ “ಈದ್ ಮುಬಾರಕ್”ಎಂದು ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಮನಸ್ಸಿನ ಅಂತರಗಳನ್ನು ಕಡಿಮೆ ಮಾಡುತ್ತದೆ.

  ಇಂದಿನ ಸಮಾಜದಲ್ಲಿ ಭಿನ್ನಾಭಿಪ್ರಾಯ, ದ್ವೇಷ ಮತ್ತು ವೈಮನಸ್ಯ ಹೆಚ್ಚುತ್ತಿರುವ ಸಂದರ್ಭದಲ್ಲಿ ಈದ್ ಉಲ್ ಆಜ್ಹಾ ಭ್ರಾತೃತ್ವದ ಅಗತ್ಯವನ್ನು ಇನ್ನಷ್ಟು ನೆನಪಿಸುತ್ತದೆ. ಕುಟುಂಬಗಳಲ್ಲಿ, ಸಮಾಜದಲ್ಲಿ ಹಾಗೂ ದೇಶದ ಮಟ್ಟದಲ್ಲಿಯೂ ಶಾಂತಿ ಮತ್ತು ಸೌಹಾರ್ದತೆ ಬೆಳೆಸಲು ಪರಸ್ಪರ ಸಹಾನುಭೂತಿ ಮತ್ತು ಕ್ಷಮೆಯ ಮನೋಭಾವ ಅತ್ಯಗತ್ಯ. ಈ ಹಬ್ಬವು ಅದನ್ನೇ ಕಲಿಸುತ್ತದೆ.

  ಪ್ರವಾದಿ ಮುಹಮ್ಮದ್ (ಸ) ರವರು “ಒಬ್ಬ ಮುಸ್ಲಿಂ ಇನ್ನೊಬ್ಬ ಮುಸ್ಲಿಮನ ಸಹೋದರನು”ಎಂದು ಬೋಧಿಸಿದ್ದಾರೆ. ಆದ್ದರಿಂದ ಈದ್ ಹಬ್ಬವು ಕೇವಲ ಹೊಸ ಬಟ್ಟೆ ಧರಿಸುವುದು ಅಥವಾ ಸವಿಯ ಊಟ ಮಾಡುವ ದಿನವಲ್ಲ. ಹೃದಯಗಳನ್ನು ಒಂದಾಗಿಸುವ, ಸಂಬಂಧಗಳನ್ನು ಗಟ್ಟಿಗೊಳಿಸುವ ಹಾಗೂ ಸಮಾಜದಲ್ಲಿ ಪ್ರೀತಿ ಮತ್ತು ಸಹೋದರತ್ವವನ್ನು ಬೆಳೆಸುವ ಪವಿತ್ರ ಅವಕಾಶವಾಗಿದೆ.

  ಈದ್ ಉಲ್ ಆಜ್ಹಾದ ನಿಜವಾದ ತಿರುಳನ್ನು ಅರ್ಥಮಾಡಿಕೊಂಡು ನಾವು ಪರಸ್ಪರ ಪ್ರೀತಿ, ಸಹಕಾರ ಮತ್ತು ಮಾನವೀಯತೆಯನ್ನು ಬೆಳೆಸಿದರೆ ಸಮಾಜದಲ್ಲಿ ಶಾಂತಿ ಮತ್ತು ಏಕತೆ ಖಂಡಿತವಾಗಿ ಸ್ಥಾಪನೆಯಾಗುತ್ತದೆ. ಅಲ್ಲಾಹನು ನಮಗೆ ಈ ಹಬ್ಬದ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸೌಭಾಗ್ಯ ನೀಡಲಿ.

ಈದ್ ಮುಬಾರಕ್! ಹಬ್ಬದ ಶುಭಾಶಯಗಳು.

Leave a comment

Your email address will not be published. Required fields are marked *

eMedia Kannada  @2025. All Rights Reserved.