ದೈವದ ಭಂಡಾರ ಪಲ್ಲಕ್ಕಿಯಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ಕಾಲು ಸಂಕ ಮುರಿದು ಎಂಟು ಮಂದಿಗೆ ಗಾಯ
ಪಲ್ಲಕ್ಕಿ ಹೊತ್ತಿದ್ದ ಹರೀಶ್ ಎಂಬವರ ಎರಡು ಕಾಲು ಮುರಿದಿದು, ಮುಕ್ಕಾಲ್ದಿ ಸುನೀಲ್ ಶೆಟ್ಟಿಯವರಿಗೂ ಗಾಯಗಳಾಗಿವೆ
(Moodabidri) ಮೂಡಬಿದ್ರಿ: ಮೂಡಬಿದ್ರಿ ಪುಚ್ಚೆಮೊಗರು ಸಮೀಪದ ಬಾವದಬೈಲು ಎಂಬಲ್ಲಿ ದೈವದ ಭಂಡಾರ ಕೊಂಡೊಯ್ಯುತ್ತಿದ್ದ ವೇಳೆ ಕಾಲು ಸಂಕ ಮುರಿದು ಸಂಭವಿಸಿದ ಅವಘಡದಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ.
ಬಾವದ ಗುತ್ತುವಿನಿಂದ ಧರ್ಮನೇಮಕ್ಕೆ ಭಂಡಾರವನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆ ಸಾಗಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಪಲ್ಲಕ್ಕಿ ಹೊತ್ತಿದ್ದ ಹರೀಶ್ ಎಂಬವರ ಎರಡು ಕಾಲು ಮುರಿದಿದೆ. ದೈವದ ಮುಕ್ಕಾಲ್ದಿ ಸುನೀಲ್ ಶೆಟ್ಟಿ ಮಾರೂರು ಎಂಬವರಿಗೂ ತೀವ್ರ ಸ್ವರೂಪದ ಗಾಯಗಳಾಗಿವೆ. ಉಳಿದಂತೆ ರಾಜೇಶ್, ಯಶೋಧರ್, ಅಶೋಕ್, ದಿನೇಶ್, ಪ್ರವೀಣ್ ಶೆಟ್ಟಿ, ಲೋಕೇಶ್, ಉದಯ ಎಂಬವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಮೂಡಬಿದಿರೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಈ ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

