• Home  
  • ದೊಡ್ಡಣಗುಡ್ಡೆ ಶ್ರೀ ರಮಾನಂದ ಗುರೂಜಿ ಅವರಿಗೆ ಸಮ್ಮಾನ  (Tribute to Sri Ramananda Guruji Dodnagudde)
- ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ

ದೊಡ್ಡಣಗುಡ್ಡೆ ಶ್ರೀ ರಮಾನಂದ ಗುರೂಜಿ ಅವರಿಗೆ ಸಮ್ಮಾನ  (Tribute to Sri Ramananda Guruji Dodnagudde)

Share: ದೊಡ್ಡಣಗುಡ್ಡೆ ಶ್ರೀ ರಮಾನಂದ ಗುರೂಜಿ ಅವರಿಗೆ ಸಮ್ಮಾನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ನಯನ ರಂಗಮಂದಿರದಲ್ಲಿ ನಡೆದ ಸನ್ಮಾನ (Bengaluru) ಬೆಂಗಳೂರು: ಬೆಂಗಳೂರಿನ ಸುರ್ವೆ ಕಲ್ಚರಲ್‌ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ನಯನ ರಂಗಮಂದಿರದಲ್ಲಿ ಸೆ. 27ರಂದು ನಡೆದ ವಿಶ್ವ ಪ್ರವಾಸೋದ್ಯಮಕ್ಕೆ ಅಖಂಡ ಕರ್ನಾಟಕದ ಕೊಡುಗೆ ಕುರಿತು ವಿಚಾರ ಸಂಕಿರಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾಷ್ಟ್ರಮಟ್ಟದ 76ನೇ ಸಾಂಸ್ಕೃತಿಕ ಕಲಾ […]

(Bengaluru) ಬೆಂಗಳೂರು: ಬೆಂಗಳೂರಿನ ಸುರ್ವೆ ಕಲ್ಚರಲ್‌ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ನಯನ ರಂಗಮಂದಿರದಲ್ಲಿ ಸೆ. 27ರಂದು ನಡೆದ ವಿಶ್ವ ಪ್ರವಾಸೋದ್ಯಮಕ್ಕೆ ಅಖಂಡ ಕರ್ನಾಟಕದ ಕೊಡುಗೆ ಕುರಿತು ವಿಚಾರ ಸಂಕಿರಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾಷ್ಟ್ರಮಟ್ಟದ 76ನೇ ಸಾಂಸ್ಕೃತಿಕ ಕಲಾ ಪ್ರತಿಭೋತ್ಸವದಲ್ಲಿ ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಆಡಳಿತ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರು ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಸಮ್ಮಾನಿಸಲಾಯಿತು.

  ಚಿತ್ರದುರ್ಗಾ ಶ್ರೀ ಚಲುವಾದಿ ಮಹಾಸಂಸ್ಥಾನ ಚಲುವಾದಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಬಸವನಾಗಿದೇವ ಶರಣರು ಮಾತನಾಡಿ, ಆಧ್ಯಾತ್ಮಿಕತೆ, ಶಿಕ್ಷಣ, ಸಮಾಜ ಸೇವೆಯನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡು ಧಾರ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳ ಸಂವರ್ಧನೆಗೆ ಶ್ರೀ ರಮಾನಂದ ಗುರೂಜಿಯವರು ಸಲ್ಲಿಸುತ್ತಿರುವ ಸೇವೆ ಅನುಕರಣೀಯವಾದುದು ಎಂದು ಆಶೀರ್ವಚನ ನೀಡಿದರು.

  ಅಧ್ಯಕ್ಷತೆ ವಹಿಸಿದ್ದ ಕನ್ನಡಪರ ಹೋರಾಟಗಾರ ಮಾಯಣ್ಣ ಅವರು, ಧರ್ಮದ ಸಂದೇಶವನ್ನು ಸಮಾಜಮುಖಿ ಚಿಂತನೆಯೊಂದಿಗೆ ಬೆಸೆದು ಶಿಕ್ಷಣಕ್ಕೆ ಪ್ರೋತ್ಸಾಹ, ಜನಪರ ಕಾಳಜಿ, ವಿವಿಧ ಸಮಾಜ ಸೇವಾ ಕಾರ್ಯಗಳ ಮೂಲಕ ಸಮಾಜದ ಒಳಿತಿಗೆ ನಿರಂತರವಾಗಿ ಶ್ರಮಿಸುತ್ತಿರುವ ರಮಾನಂದ ಗುರೂಜಿಯವರ ಸೇವಾ ಸಮರ್ಪಣೆ, ಸರಳತೆ, ಧೀಮಂತ ವ್ಯಕ್ತಿತ್ವ ಇತರರಿಗೆ ಪ್ರೇರಣೆಯಾಗಿದೆ ಎಂದರು.

  ಚಲನಚಿತ್ರ ನಟಿ ಮೀನಾ ಮಾತನಾಡಿ, ಚಲನಚಿತ್ರ ಹಾಗೂ ಧಾರಾವಾಹಿ ಕ್ಷೇತ್ರದಲ್ಲಿ ಕಲಾವಿದೆಯಾಗಿ ಯಶಸ್ಸು ಸಾಧಿಸುವಲ್ಲಿ ರಮಾನಂದ ಗುರೂಜಿಯವರ ಮಾರ್ಗದರ್ಶನ ಹಾಗೂ ಆಶೀರ್ವಾದ ಮಹತ್ವದ ಪಾತ್ರ ವಹಿಸಿದೆ. ಅವರ ಪ್ರೋತ್ಸಾಹ ಹಾಗೂ ಹಿತನುಡಿಗಳು ಕಲಾ ಪಯಣದಲ್ಲಿ ಸದಾ ಆತ್ಮವಿಶ್ವಾಸ ತುಂಬಿವೆ ಎಂದು ಸ್ಮರಿಸಿದರು.

  ಸುರ್ವೆ ಕಲ್ಚರಲ್‌ ಅಕಾಡೆಮಿಯ ಮಾರ್ಗದರ್ಶಕ ರಮೇಶ ಸುರ್ವೆ ಮಾತನಾಡಿ, ನಾಸ್ತಿಕ ಮನೋಭಾವದಿಂದ ಆಸ್ತಿಕತೆಯೆಡೆಗೆ ನನ್ನನ್ನು ಕರೆದೊಯ್ದು, ಬದುಕಿನ ಮೌಲ್ಯಗಳನ್ನು ಅರಿತು ಅಳವಡಿಸಿಕೊಳ್ಳುವಂತೆ ಮಾಡಿದವರು ರಮಾನಂದ ಗುರೂಜಿಯವರು. ಅವರ ಸಲಹೆ, ಮಾರ್ಗದರ್ಶನ ಹಾಗೂ ಹಿತನುಡಿಗಳು ನನ್ನ ಬದುಕಿಗೆ ದಾರಿದೀಪವಾಗಿ, ಉತ್ತಮ ಬದುಕಿನತ್ತ ಮುನ್ನಡೆಸಿವೆ ಎಂದು ಹೇಳಿದರು.

  ಮಾಜಿ ಶಾಸಕ ಡಾ. ನೆ.ಲ. ನರೇಂದ್ರಬಾಬು ಬೆಂಗಳೂರು, ಚಲನಚಿತ್ರ ನಟರಾದ ಶಂಕರ ಭಟ್‌, ಗಣೇಶ ರಾವ್‌ ಕೇಸರ್ಕರ್‌, ರಂಗಭೂಮಿ ಕಲಾವಿದೆ ಆಶಾ ಡೇನಿಯಲ್‌, ಅಕಾಡೆಮಿ ಅಧ್ಯಕ್ಷ ಕಿಶನ್‌ ಸುರ್ವೆ, ಪದಾಧಿಕಾರಿಗಳು, ಸದಸ್ಯರು, ಗಣ್ಯರು, ಅಭಿಮಾನಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.