ನಂದಿಕೂರಿನಲ್ಲಿ ಹೆಜಮಾಡಿ ಗ್ರಾಮ ಕೇಂದ್ರಿತವಾಗಿರುವ ಆ್ಯಂಬುಲೆನ್ಸ್ ಲೋಕಾರ್ಪಣೆ
(Hejamdi) ಹೆಜಮಾಡಿ : ಹೆಜಮಾಡಿ, ನಡ್ಸಾಲು ಗ್ರಾಮ ಕೇಂದ್ರಿತವಾಗಿ ಕಾರ್ಯ ನಿರ್ವಹಿಸಲಿರುವ ಜೀವರಕ್ಷಕ ಆ್ಯಂಬುಲೆನ್ಸ್ ಉಚಿತ ಸೇವೆಯನ್ನು ಭಾನುವಾರ ಬೆಳಿಗ್ಗೆ ನಂದಿಕೂರು ಕೈಗಾರಿಕಾ ವಲಯ ಪ್ಲಾಟ್ ನಂ. 41ಬಿ ಯಲ್ಲಿನ ಸಮಾರಂಭದಲ್ಲಿ ರಾಲ್ಫಿ ಡಿʼಕಾಸ್ಟ ಗೆಳೆಯರ ಬಳಗದ ನೂತನ ಆ್ಯಂಬುಲೆನ್ಸ್ನ ಅನಾವರಣ ಹಾಗೂ ಕೀ ಹಸ್ತಾಂತರದ ಮೂಲಕ ಲೋರ್ಕಾಣೆಗೈಯ್ಯಲಾಯಿತು.
ಮೂಲ್ಕಿ ಚರ್ಚ್ ನ ಧರ್ಮಗುರುಗಳಾದ ರೆ| ಫಾ| ಸಿಲ್ವೆಸ್ಟರ್ ಡಿ`ಕೋಸ್ಟ ಅವರು ಪ್ರಾರ್ಥನಾ ವಿಧಿಯನ್ನು ನೆರವೇರಿಸಿ ಹರಸಿದರು.
ಮಂಗಳೂರು ಕೆನರಾ ಬ್ಯಾಂಕಿನ ವಲಯ ಎಜಿಎಂ ಆ್ಯಂಟೊನಿ ಅವರು ಆ್ಯಂಬುಲೆನ್ಸ್ ಸೇವೆಯನ್ನು ಉದ್ಘಾಟಿಸಿದರು.
ಪಡುಬಿದ್ರಿಯ ಅಪರಾದ ವಿಭಾಗದ ಎಸ್ಐ ಸುದರ್ಶನ್ ದೊಡ್ಡಮನಿ ಅವರು ವಾಹನಕ್ಕೆ ಚಾಲನೆ ನೀಡಿ, ಗೆಳೆಯರ ಬಳಗಕ್ಕೆ ವಾಹನ ಕೀಲಿಗೈ ಹಸ್ತಾಂತರಿಸಿದರು
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುಂಶಿಕ ಅರ್ಚಕರಾದ ವೇ| ಮೂ| ಅನಂತ ಪದ್ಮನಾಭ ಆಸ್ರಣ್ಣ, ವೇ| ಮೂ| ಹರಿನಾರಾಯಣದಾಸ ಆಸ್ರಣ್ಣ, ಹೆಜಮಾಡಿಯ ಜುಮ್ಮಾ ಮಸೀದಿಯ ಧರ್ಮಗುರುಗಳಾದ ಹಾಜಿ ಅಶ್ರಫ್ ಸಖಾಫಿ, ಸೈಂಟ್ ಫಿಲೊಮಿನಾ ಕಾಲೇಜು ಪುತ್ತೂರಿನ ನಿವೃತ್ತ ಪ್ರಾಂಶುಪಾಲ ರೆ| ಫಾ| ಫ್ರಾನ್ಸಿಸ್ ಝ್ಸೇವಿಯರ್ ಗೋಮ್ಸ್, ಕಳವಾರು ಚರ್ಚ್ ಧರ್ಮಗುರುಗಳಾದ ರೆ| ಫಾ| ಮಾರ್ಸೆಲ್ ಸಲ್ದಾನ, ವಾಲ್ಟರ್ ಡಿ`ಸೋಜ, ಕೆನರಾ ಬ್ಯಾಂಕ್ ಮೂಲ್ಕಿಯ ವ್ಯವಸ್ಥಾಪಕ ಅತುಲ್, ಹಾಜಿ ಶೇಖಬ್ಬ ಕೋಟೆ, ನಾರಾಯಣ ಮೆಂಡನ್, ಪಡುಬಿದ್ರಿ ಗ್ರಾ ಪಂ. ಅಧ್ಯಕ್ಷೆ ಶಶಿಕಲಾ, ಹೆಜಮಾಡಿ ಗ್ರಾ ಪಂ. ಅಧ್ಯಕ್ಷೆ ರೇಶ್ಮಾ ಮಂಡನ್, ಸದಾಶಿವ ಕೋಟ್ಯಾನ್ ಮತ್ತು ಹೆಜಮಾಡಿಯ ರಾಲ್ಫಿ ಡಿʼಕಾಸ್ಟ ದಂಪತಿ ಮತ್ತು ಗೆಳೆಯರ ಬಳಗದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದಿವಾಕರ್ ಹೆಜ್ಮಾಡಿ ಕಾರ್ಯಕ್ರಮ ನಿರೂಪಿಸಿದರು

