• Home  
  • ನಾಳೆ ಡಿ 11 : ಎರ್ಮಾಳು ತೆಂಕ- ಬಡ ಕಂಬಳದ  ಪ್ರಥಮ, ಸಾಂಕೇತಿಕ ಕುದಿ (Yermal Tenka- Bada Kambala’s preliminary first Kudi)
- ಕ್ರೀಡೆ

ನಾಳೆ ಡಿ 11 : ಎರ್ಮಾಳು ತೆಂಕ- ಬಡ ಕಂಬಳದ  ಪ್ರಥಮ, ಸಾಂಕೇತಿಕ ಕುದಿ (Yermal Tenka- Bada Kambala’s preliminary first Kudi)

Share: ನಾಳೆ ಡಿ 11 : ಎರ್ಮಾಳು ತೆಂಕ- ಬಡ ಕಂಬಳದ  ಪ್ರಥಮ ಸಾಂಕೇತಿಕ ಕುದಿ ಫೆ 28 ಕ್ಕೆ ಎರ್ಮಾಳು ತೆಂಕ- ಬಡ ಕಂಬಳ ನಿಗದಿ  (Yermal) ಎರ್ಮಾಳು : ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳದ ಪ್ರಥಮ ಸಾಂಕೇತಿಕ ಕುದಿಯು ನಾಳೆ ಡಿ. 11(ಗುರುವಾರ) ರಂದು ಕಂಬಳ ಗದ್ದೆಯಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿಯ ಗೌರವಾಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಹೇಳಿದ್ದಾರೆ.   ಬಡಗೊಟ್ಟು ಬಾಕ್ಯಾರು ಕಂಬಳಕ್ಕೆ ಮಾತ್ರ ಉಪಯೋಗಿಸಬಹುದಾದ 12ಎಕರೆ ಜಾಗದಲ್ಲಿ ಈ ಬಾರಿ […]

ಫೆ 28 ಕ್ಕೆ ಎರ್ಮಾಳು ತೆಂಕ- ಬಡ ಕಂಬಳ ನಿಗದಿ

 (Yermal) ಎರ್ಮಾಳು : ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳದ ಪ್ರಥಮ ಸಾಂಕೇತಿಕ ಕುದಿಯು ನಾಳೆ ಡಿ. 11(ಗುರುವಾರ) ರಂದು ಕಂಬಳ ಗದ್ದೆಯಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿಯ ಗೌರವಾಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಹೇಳಿದ್ದಾರೆ.

  ಬಡಗೊಟ್ಟು ಬಾಕ್ಯಾರು ಕಂಬಳಕ್ಕೆ ಮಾತ್ರ ಉಪಯೋಗಿಸಬಹುದಾದ 12ಎಕರೆ ಜಾಗದಲ್ಲಿ ಈ ಬಾರಿ ಪ್ರಥಮಥವಾಗಿ ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳಕ್ಕಾಗಿ ನಿಗದಿ ಪಡಿಸಲಾಗಿದೆ. ಹಿಂದೆ ಜೈನ ಮತದವರು ಕಂಬಳ ಮಾಡುತ್ತಿದ್ದ ಜಾಗ ಇದಾಗಿತ್ತು. ಊರ ಜನರಿಗೆ ಯಾವುದೇ ತೊಂದರೆ ಬರದಂತೆ ನಾವು ವ್ಯಾಘ್ರ ಚಾಮುಂಡಿ ದೈವಕ್ಕೆ ಸೂಕ್ತ ನೆಲೆ ಕಲ್ಪಿಸಿ, ಇದೀಗ ಕಂಬಳ ಮಾಡಲು ಉದ್ದೇಶಿಸಿದ್ದೇವೆ.  

  ಕಂಬಳ ಜಾತ್ಯಾತೀತ ಜನಪದ ಕ್ರೀಡೆ. ಇದು ಕಂಬಳದ ಪ್ರಥಮ ಕುದಿಯಾಗಿದೆ. ಮೊದಲಿಗೆ ಎರ್ಮಾಳು ಶ್ರೀ ಲಕ್ಷ್ಮೀ ಜನಾರ್ದನ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಸಿದ ಬಳಿ ಸಾಂಕೇತಿಕವಾಗಿ ನಾಲ್ಕು ಜೋಡಿ ಕೋಣಗಳನ್ನು ಓಡಿಸಲಾಗುವುದು. ಇದರಿಂದ ಓಡುವ ಕೋಣಗಳು ಮತ್ತು ಓಟಗಾರರಿಗೆ ಕಂಬಳ ಗದ್ದೆಯ ಮೇಲಿನ ಹಿಡಿತ ಸಿಗಲಿದೆ ಎಂದ ರೋಹಿತ್ ಹೆಗ್ಡೆ ಮುಂದೆ ಹೆಚ್ಚಿನ ಕೋಣಗಳನ್ನು ಇಲ್ಲಿಗೆ ಕರೆಯಿಸಿ ಕುದಿ ಮಾಡಲಾಗುವುದು  ಎಂದರು.

ಈ ಸಂದರ್ಭ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ರಾಜ್ ಎರ್ಮಾಳು ಬೀಡು, ಎರ್ಮಾಳು ಜನಾರ್ಧನ ಜನಕಲ್ಯಾಣ ಸಮಿತಿ ಅಧ್ಯಕ್ಷ ಸುರೇಶ್ ಜಿ ಶೆಟ್ಟಿ, ಉದ್ಯಮಿಗಳಾದ ಬಾಲಚಂದ್ರ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಜಗಜೀವನ್ ಚೌಟ, ಎರ್ಮಾಳು ಹರೀಶ್‌ ಶೆಟ್ಟಿ, ಸಂತೋಷ್ ಶೆಟ್ಟಿ ಬರ್ಪಾಣಿ ಹಾಗೂ ಕಂಬಳ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.  

Leave a comment

Your email address will not be published. Required fields are marked *

eMedia Kannada  @2025. All Rights Reserved.