• Home  
  • ಪಕ್ಷಿಕೆರೆಯ ಮುಲ್ಲಟ್ಟದಲ್ಲಿ ಚಿರತೆ ಸಂಚರಣೆ – ಸಿಸಿ ಟಿವಿಯಲ್ಲಿ ದೃಶ್ಯ ದಾಖಲು (Leopard roaming in the Mullatta of Pakshikere – CCTV footage captured)
- PROBLEMS

ಪಕ್ಷಿಕೆರೆಯ ಮುಲ್ಲಟ್ಟದಲ್ಲಿ ಚಿರತೆ ಸಂಚರಣೆ – ಸಿಸಿ ಟಿವಿಯಲ್ಲಿ ದೃಶ್ಯ ದಾಖಲು (Leopard roaming in the Mullatta of Pakshikere – CCTV footage captured)

Share: ಪಕ್ಷಿಕೆರೆಯ ಮುಲ್ಲಟ್ಟದಲ್ಲಿ ಚಿರತೆ ಸಂಚರಣೆ – ಸಿಸಿ ಟಿವಿಯಲ್ಲಿ ದೃಶ್ಯ ದಾಖಲು ಮಧ್ಯರಾತ್ರಿ ವೇಳೆ ಮನೆಯ ಜಗಲಿಯಲ್ಲಿ ಚಿರತೆಯ ದರ್ಶನ : ಸ್ಥಳೀಯರಲ್ಲಿ ಆತಂಕ  (Kinnigoli) ಕಿನ್ನಿಗೋಳಿ: ಪಕ್ಷಿಕೆರೆ ಗ್ರಾಮದ ಮುಲ್ಲಟ್ಟ ಪ್ರದೇಶದಲ್ಲಿ ಚಿರತೆ ಸಂಚರಿಸಿರುವ ಘಟನೆ ಆತಂಕ ಮೂಡಿಸಿದೆ. ಸ್ಥಳೀಯರೊಬ್ಬರ ಮನೆಯ ಬಾಗಿಲಲ್ಲಿ ಚಿರತೆ ಕುಳಿತಿರುವ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದೆ.    ಮಧ್ಯರಾತ್ರಿ ವೇಳೆ ಮನೆ ಎದುರು ಭಾಗದ ಜಗಲಿಯಲ್ಲಿ ಚಿರತೆ ಕೆಲವು ಕ್ಷಣಗಳು ತಂಗಿದ್ದು, ಬಳಿಕ ಸುತ್ತಮುತ್ತ ನೋಡಿಕೊಂಡು ತೆರಳಿರುವುದು ದೃಶ್ಯಗಳಲ್ಲಿ […]

(Kinnigoli) ಕಿನ್ನಿಗೋಳಿ: ಪಕ್ಷಿಕೆರೆ ಗ್ರಾಮದ ಮುಲ್ಲಟ್ಟ ಪ್ರದೇಶದಲ್ಲಿ ಚಿರತೆ ಸಂಚರಿಸಿರುವ ಘಟನೆ ಆತಂಕ ಮೂಡಿಸಿದೆ. ಸ್ಥಳೀಯರೊಬ್ಬರ ಮನೆಯ ಬಾಗಿಲಲ್ಲಿ ಚಿರತೆ ಕುಳಿತಿರುವ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದೆ.

   ಮಧ್ಯರಾತ್ರಿ ವೇಳೆ ಮನೆ ಎದುರು ಭಾಗದ ಜಗಲಿಯಲ್ಲಿ ಚಿರತೆ ಕೆಲವು ಕ್ಷಣಗಳು ತಂಗಿದ್ದು, ಬಳಿಕ ಸುತ್ತಮುತ್ತ ನೋಡಿಕೊಂಡು ತೆರಳಿರುವುದು ದೃಶ್ಯಗಳಲ್ಲಿ ಕಾಣಿಸಿಕೊಂಡಿದೆ. ಬೆಳಗ್ಗೆ ಸಿಸಿ ಟಿವಿ ಪರಿಶೀಲಿಸಿದ ಮನೆಯವರು ಆತಂಕಕ್ಕೆ ಒಳಗಾಗಿ, ಈ ವಿಷಯವನ್ನು  ಅಕ್ಕಪಕ್ಕದ ನಿವಾಸಿಗಳಿಗೆ ಮಾಹಿತಿ ನೀಡಿದ್ದಾರೆ.

   ಘಟನೆಯಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮಕ್ಕಳು ಮತ್ತು ಹಿರಿಯರು ರಾತ್ರಿ ವೇಳೆಯಲ್ಲಿ ಹೊರಗೆ ಓಡಾಡದಂತೆ ಸ್ಥಳೀಯರು ಎಚ್ಚರಿಕೆ ವಹಿಸಿದ್ದಾರೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಚಿರತೆಯನ್ನು ಪತ್ತೆಹಚ್ಚಲು ಮತ್ತು ಹಿಡಿಯಲು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

  ಗ್ರಾಮಸ್ಥರು ಪಶುಗಳನ್ನು ಸುರಕ್ಷಿತವಾಗಿ ಕಟ್ಟಿಡಲು ಹಾಗೂ ರಾತ್ರಿ ವೇಳೆ ಅನಗತ್ಯವಾಗಿ ಹೊರಗೆ ಓಡಾಡದಂತೆ ಎಚ್ಚರಿಕೆ ನೀಡಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.