ಅದಾನಿ ಫೌಂಡೇಶನ್ : ನವೀಕರಿಸಲಾದ ಪಲಿಮಾರು ಗ್ರಾಮ ಪಂಚಾಯತ್ ಕಚೇರಿ ಉದ್ಘಾಟನೆ
ಉದ್ಘಾಟನೆ ನೆರವೇರಿಸಿದ ಅದಾನಿ ಗ್ರೂಪ್ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಅಳ್ವಾ
(Palimaru) ಪಲಿಮಾರು: ಅದಾನಿ ಪವರ್ ಲಿಮಿಟೆಡ್ – ಉಡುಪಿ ಥರ್ಮಲ್ ಪವರ್ ಪ್ಲಾಂಟ್ ಸಂಸ್ಥೆಯ ಸಿಎಸ್ಆರ್ ಘಟಕವಾದ ಅದಾನಿ ಫೌಂಡೇಶನ್ ಮೂಲಕ, ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ರೂ. ೨೦ ಲಕ್ಷ ವೆಚ್ಚದಲ್ಲಿ ನವೀಕರಿಸಲಾದ ಪಲಿಮಾರು ಗ್ರಾಮ ಪಂಚಾಯತ್ ಕಚೇರಿಯನ್ನು ಉದ್ಘಾಟಿಸಲಾಯಿತು.
ನವೀಕರಿಸಲಾದ ಕಚೇರಿ ಮೂಲ ಸೌಕರ್ಯ ಹಾಗೂ ಹೊಸದಾಗಿ ಅಳವಡಿಸಲಾದ ಫರ್ನೀಚರ್, ಮತ್ತು ಉಪಕರಣಗಳ ಉದ್ಘಾಟನೆಯನ್ನು ಅದಾನಿ ಗ್ರೂಪ್ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಅಧ್ಯಕ್ಷ ಕಿಶೋರ್ ಅಳ್ವಾ ಹಾಗೂ ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸೌಮ್ಯಲತಾ ಶೆಟ್ಟಿಯವರು ಸಂಯುಕ್ತವಾಗಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಿಶೋರ್ ಆಳ್ವ, ಪಲಿಮಾರು ಗ್ರಾಮ ಪಂಚಾಯತ್ ಸಲ್ಲಿಸಿದ್ದ ೨೦೨೫–೨೬ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಗೆ ಅನುಗುಣವಾಗಿ ಈ ಯೋಜನೆಯನ್ನು ಅದಾನಿ ಫೌಂಡೇಶನ್ ಮೂಲಕ ಅನುಷ್ಠಾನಗೊಳಿಸಲಾಗಿದೆ. ಅದಾನಿ ಪವರ್ ಲಿಮಿಟೆಡ್ ಸಂಸ್ಥೆಯು ಸುತ್ತಮುತ್ತಲಿನ ಏಳು ಗ್ರಾಮ ಪಂಚಾಯತ್ಗಳಲ್ಲಿ ಸಂಬಂಧಿಸಿದ ಪಂಚಾಯತ್ಗಳು ಗುರುತಿಸಿದ ಆದ್ಯತೆಗಳ ಆಧಾರದ ಮೇಲೆ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ನಿರಂತರವಾಗಿ ಬೆಂಬಲ ನೀಡುತ್ತಿರುವುದರ ಜೊತೆಗೆ, ಶಿಕ್ಷಣ, ಆರೋಗ್ಯ ಹಾಗೂ ಗ್ರಾಮೀಣ ಕ್ರೀಡೆಗಳ ಉತ್ತೇಜನ ಕ್ಷೇತ್ರಗಳಲ್ಲಿ ವಿವಿಧ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ.
ಕಳೆದ ಹಲವು ವರ್ಷಗಳಲ್ಲಿ ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮುದಾಯ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ಈಗಾಗಲೇ ಸುಮಾರು ರೂ. ೧.೮೦ ಕೋಟಿ ವೆಚ್ಚವನ್ನು ಕಂಪನಿ ವ್ಯಯಿಸಿದೆ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಪಲಿಮಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಯೇಶ್ವರ ಪೈ, ಮಾಜಿ ಅಧ್ಯಕ್ಷೆ ಗಾಯತ್ರಿ ಪ್ರಭು, ಹಾಲಿ ಸದಸ್ಯರಾದ ಪ್ರವೀಣ್ ಕುಮಾರ್, ಶಿವರಾಮ ಪೂಜಾರಿ, ಯೋಗಾನಂದ ಕುಕ್ಯಾನ್, ಸುಜಾತಾ, ಗ್ರಾಮ ಲೆಕ್ಕಾಧಿಕಾರಿಯಾದ ಸುನಿಲ್ ಹಾಗೂ ಕಚೇರಿ ಸಿಬ್ಬಂದಿಯಾದ ಕಲ್ಯಾಣಿ, ಅಧಿಕಾರಿಗಳು ಹಾಗೂ ಸ್ಥಳೀಯ ಸಮುದಾಯದ ಸದಸ್ಯರು, ಅದಾನಿ ಫೌಂಡೇಶನ್ನ ಅನುದೀಪ್ ಉಪಸ್ಥಿತರಿದ್ದರು.
ಅದಾನಿ ಪವರ್ ಲಿಮಿಟೆಡ್ನ ಸಹಾಯಕ ಮಹಾ ಪ್ರಬಂಧಕರಾದ ರವಿ ಆರ್. ಜೇರೆ ಸ್ವಾಗತಿಸಿದರು.

