ಚಿತ್ರ ಕೃಪೆ : ರವಿ ಡಿಜಿಟಲ್ಸ್, ಪಡುಬಿದ್ರಿ
ಪಡುಬಿದ್ರಿ ದೇಗುಲ ಜೀರ್ಣೋದ್ಧಾರಕ್ಕೆ ಕಾಡಿಪಟ್ನ ಮೊಗವೀರ ಮಹಾಸಭಾ, ಹಳೆ ವಿದ್ಯಾರ್ಥಿಗಳಿಂದ ಸಹಾಯ ಹಸ್ತ
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಕೆ ಪ್ರಕಾಶ್ ಶೆಟ್ಟಿಯವರಿಗೆ ಚೆಕ್ ಹಸ್ತಾಂತರ
(Padubidri) ಪಡುಬಿದ್ರಿ: ಪುರಾಣ ಪ್ರಸಿದ್ದ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದ ಸಂಪೂರ್ಣ ಪುನರ್ ನಿರ್ಮಾಣ ಜೀರ್ಣೋದ್ಧಾರ ಕಾರ್ಯವು ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ಪ್ರಗತಿಯಲ್ಲಿದ್ದು, ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಸಹಿತ ಉತ್ಸವವು ಎ. 23 ರಿಂದ ಮೇ. 4ರವರೆಗೆ ನೆರವೇರಲಿದೆ.
ಶುಕ್ರವಾರ ಬೆಳಿಗ್ಗೆ ಕಾಡಿಪಟ್ನ ಮೊಗವೀರ ಮಹಾಸಭಾದ ವತಿಯಿಂದ ದೇವಸ್ಥಾನದ ನ್ಯೆವೇದ್ಯ ಶಾಲೆ ಪ್ರಾಯೋಜಕತ್ವವನ್ನು ವಹಿಸಿಕೊಂಡು, ಅದಕ್ಕಾಗಿ 24 ಲಕ್ಷ 45 ಸಾವಿರ ರುಪಾಯಿ ದೇಣಿಗೆಯ ಚೆಕ್ಕನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ. ಕೆ ಪ್ರಕಾಶ್ ಶೆಟ್ಟಿಯವರಿಗೆ ಹಸ್ತಾಂತರಿಸಿದರು.
ಇದೇ ಸಂದರ್ಭ ಪಡುಬಿದ್ರಿ ಗಣಪತಿ ಶಾಲಾ ಹಳೆ ವಿದ್ಯಾರ್ಥಿಗಳಿಂದ 7 ಲಕ್ಷ 7 ಸಾವಿರ ರುಪಾಯಿಯ ಚೆಕ್ಕನ್ನು ಡಾ. ಕೆ ಪ್ರಕಾಶ್ ಶೆಟ್ಟಿಯವರಿಗೆ ಸಂಘದ ಅಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ ಮತ್ತು ಸದಸ್ಯರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಕೆ ಪ್ರಕಾಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನವೀನ್ ಚಂದ್ರ ಜೆ. ಶೆಟ್ಟಿ, ಅನುವಂಶಿಕ ಅಡಳಿತ ಮೂಕ್ತೇಸರ ಭವಾನಿ ಶಂಕರ್ ಹೆಗ್ಡೆ, , ನವೀನ್ ಎನ್ ಶೆಟ್ಟಿ, ಕಾಡಿಪಟ್ನ ಮೊಗವೀರ ಮಹಾಸಭಾ ಅಧ್ಯಕ್ಷ ಅಶೋಕ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಪಡುಬಿದ್ರಿ , ಉಪಾಧ್ಯಕ್ಷ ಹೇಮಚಂದ್ರ ಸಾಲ್ಯಾನ್, ಕೋಶಾಧಿಕಾರಿ ಅಶೋಕ್ ಬಂಗೇರ, ಕಾಡಿಪಟ್ನ ಮೊಗವೀರ ಮಹಿಳಾ ಸಭಾ ಅಧ್ಯಕ್ಷೆ ಶ್ರೀಮತಿ ವಿಜಯ ಮೆಂಡನ್, ಮಾಲತಿ ಎನ್ ಸಾಲ್ಯಾನ್, ಉಡುಪಿ ಜಿಲ್ಲಾ ಕಾಂಗ್ರೆಸ್ ಮೀನುಗಾರರ ಸಮಿತಿ ಜಿಲ್ಲಾಧ್ಯಕ್ಷ ವಿಶ್ವಾಸ್ ವಿ. ಅಮೀನ್, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ಸುಧಾಕರ್ ಸಾಲ್ಯಾನ್, ಹೇಮಂತ್ ಕೋಟ್ಯಾನ್ ಮುಂಬಯಿ, ಮಾಜಿ ಗ್ರಾ.ಪಂ ಸದಸ್ಯೆ ಭವಾನಿ ಶ್ರೀಯಾನ್ ಉಪಸ್ಥಿತರಿದ್ದರು.

