ಪಡುಬಿದ್ರಿ ದೇಗುಲ ಬ್ರಹ್ಮಕಲಶೋತ್ಸವದ ಪ್ರಯುಕ್ತ ಅದ್ದೂರಿಯ ಹಸಿರು ಹೊರೆ ಕಾಣಿಕೆ
ಹೊರೆಕಾಣಿಕೆಗೆ ಚಾಲನೆ ನೀಡಿದ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರಕುಮಾರ್
(Padubidri) ಪಡುಬಿದ್ರಿ : ಪುರಾಣ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವೈಭವದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಬೃಹತ್ ಹಸಿರು ಹೊರೆಕಾಣಿಕೆ ಮೆರವಣಿಗೆಗೆ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ, ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಸಂಚಾಲಕತ್ವದಲ್ಲಿ ಪಡುಬಿದ್ರಿ ಗುಂಡ್ಲಾಡಿ ಕಟ್ಟೆಯಿಂದ ಭಾನುವಾರ ಸಂಜೆ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರಕುಮಾರ್ ಚಾಲನೆ ನೀಡಿದರು.
ಪಡುಬಿದ್ರಿ ಸಹಿತ ಕಾಪು ಕ್ಷೇತ್ರದ ಪ್ರತಿ ಗ್ರಾಮಗಳಿಂದ, ಉಡುಪಿ ಜಿಲ್ಲೆಯ ಉಡುಪಿ, ಕಾರ್ಕಳ, ಬೈಂದೂರು, ಕುಂದಾಪುರ, ಪೆರ್ಡೂರು, ಹಿರಿಯಡ್ಕ, ದ.ಕ ಜಿಲ್ಲೆಯ ವಿವಿದೆಡೆಗಳಿಂದ ಹೊರೆ ಕಾಣಿಕೆಯು ಆಗಮಿಸಿತ್ತು.
ಡಾ. ಮೋಹನ್ ಆಳ್ವ ನೇತೃತ್ವದಲ್ಲಿ ಮೂಡುಬಿದಿರೆಯ ಭಾಗದಿಂದ, ರಾಜ್ಯ ಕಂಬಳ ಅಸೋಸಿಯೇಶನ್ ಮೂಲಕ ಕಂಬಳದ ವ್ಯವಸ್ಥಾಪಕರು, ಕೋಣದ ಯಜಮಾನರು, ಕಾಪು ಹೊಸ ಮಾರಿಗುಡಿಯಿಂದ 99 ವಾಹನಗಳು, ಡಾ. ಜಿ. ಶಂಕರ್ ನೇತೃತ್ವದ ಮೊಗವೀರ ಮಹಾಜನ ಸಂಘ ಮತ್ತು ಉಚ್ಚಿಲ ಮಹಾಲಕ್ಷ್ಮೀ ಸನ್ನಿಧಾನದಿಂದ 100 ವಾಹನಗಳಲ್ಲಿ ಹೊರೆಕಾಣಿಕೆ, ಬಿಲ್ಲವರ ಯುವ ಬಳಗದಿಂದ 22 ಲಕ್ಷ ರೂ. ಮೌಲ್ಯದ 1200ಕ್ಕೂ ಮಿಕ್ಕಿ ಅಕ್ಕಿ ಚೀಲಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮತ್ತು, ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ನೇತೃತ್ವದ ಪುತ್ತಿಗೆ ಮಠದಿಂದ 7 ಲಕ್ಷ ವೆಚ್ಚದ 17 ಟನ್ ಅಕ್ಕಿ, ಅವಿಭಜಿತ ದ.ಕ. ಜಿಲ್ಲೆಯ ವಿವಿಧ ಸಮಾಜದ ಸಂಘ ಸಂಸ್ಥೆಗಳಿಂದ ಹೊರೆ ಕಾಣಿಕೆಗಳು ಸಮರ್ಪಣೆಗೊಂಡಿತು.
ಮೆರವಣಿಗೆಯಲ್ಲಿ ಸುಮಾರು 500 ಕ್ಕೂ ಅಧಿಕ ಹೊರೆ ಕಾಣಿಕೆ ತುಂಬಿದ ವಾಹನಗಳು, ಮಹಿಳೆಯರು ಮತ್ತು ಪುರುಷರ ಸರತಿ ಸಾಲು, ಕುಣಿತ ಭಜನಾ ತಂಡಗಳು, ಟ್ಯಾಬ್ಲೋಗಳು, ವಿಶೇಷ ಬಿರುದಾವಳಿಗಳು, ತಾಲೀಮುಗಳು ಮೆರವಣಿಗೆಗೆ ಮೆರುಗು ನೀಡಿತು.
ಮೆರವಣಿಗೆಯುದ್ದಕ್ಕೂ ಸ್ವಚ್ಚತಾ ಕಾರ್ಯವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಭವ್ಯ ಹೊರೆಕಾಣಿಕೆ ಚಾಲನಾ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ, ಆಶಾ ಪ್ರಕಾಶ್ ಶೆಟ್ಟಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ದೇವಳದ ಅನುವಂಶಿಕ ಮೊಕ್ತೇಸರರಾದ ರತ್ನಾಕರ ರಾಜ ಅರಸು ಕಿನ್ನಕ್ಕ ಬಲ್ಲಾಳ್ ಪಡುಬಿದ್ರಿ ಬೀಡು, ಪೇಟೆಮನೆ ಭವಾನಿ ಶಂಕರ ಹೆಗ್ಡೆ, ಕೊರ್ನಾಯ ಶ್ರೀಪತಿ ರಾವ್, ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, , ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಅದಾನಿ ಸಮೂಹದ ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವ, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ದ. ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ವಿಶ್ವ ಹಿಂದೂಪರಿಷತ್ ನ ಪ್ರಮುಖರಾದ ಎಂ.ಬಿ. ಪುರಾಣಿಕ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ದ.ಕ. ಜಿಲ್ಲೆಯ ಸಂಚಾಲಕರಾದ ಚಂದ್ರಹಾಸ ಶೆಟ್ಟಿ ಬಂಟ್ವಾಳ, ದಯಾನಂದ ಹೆಜ್ಮಾಡಿ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ವೈ ಎನ್ ರಾಮಚಂದ್ರ ರಾವ್, ಕೊರ್ನಾಯ ಪದ್ಮನಾಭ ರಾವ್, ವೈ ಸುಧೀರ್ ಕುಮಾರ್, ಗಣೇಶ್ ಕೋಟ್ಯಾನ್, ಲೋಕೇಶ್ ಶೆಟ್ಟಿ ಬಂಟ್ವಾಳ, ಸಾಂತೂರು ಭಾಸ್ಕರ್ ಶೆಟ್ಟಿ, ಗಣೇಶ್ ಗುಜರನ್, ಭಾಸ್ಕರ್ ಕೆ, ಬಾಲಾಜಿ ಯೋಗೀಶ್ ಶೆಟ್ಟಿ, ಗೀತಾಂಜಲಿ ಸುವರ್ಣ, ಮಮತಾ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ, ನವೀನ್ ಚಂದ್ರ ಜೆ ಶೆಟ್ಟಿ, ಕೃಷ್ಣ ಪ್ಯಾಲೇಸ್ ಕೃಷ್ಣ ಶೆಟ್ಟಿ, ಸಾಯಿನಾಥ ಶೆಟ್ಟಿ, ವೈ.ಸುಕುಮಾರ್, ಮುರಳೀನಾಥ ಶೆಟ್ಟಿ, ಚಂದ್ರಹಾಸ್ ಶೆಟ್ಟಿ ರಂಗೋಲಿ, ಸಂತೋಷ್ ಶೆಟ್ಟಿ ಕುರ್ಕಿಲ್ ಬೆಟ್ಟು, ಸುಧೀರ್ ಶೆಟ್ಟಿ, ಪುಚ್ಚೊಟ್ಟು ಬೀಡು ಚಂದ್ರಹಾಸ ಶೆಟ್ಟಿ, ಸಂತೋಷ್ ಶೆಟ್ಟಿ ಪಲ್ಲವಿ, ಕಲ್ಯ ಶ್ರೀಕರ ಶೆಟ್ಟಿ, ಅರುಣ್ ಶೆಟ್ಟಿ ಪಾದೂರು, ಹರೀಶ್ ರಾವ್, ಪ್ರಕಾಶ್ ದೇವಾಡಿಗ, ಕೊಂಡೆಟ್ಟು ಸುಕುಮಾರ್ ಶೆಟ್ಟಿ, ಉಮೇಶ್ ಪೂಜಾರಿ, ನವೀನ್ ಎನ್ ಶೆಟ್ಟಿ, ಪ್ರೇಮ್ ನಾಥ್ ಶೆಟ್ಟಿ, ಮಾಧವ ಶೆಟ್ಟಿ, ಕೊಳಕೆ ಇರ್ವತ್ತೂರು ಭಾಸ್ಕರ್ ಕೋಟ್ಯಾನ್, ಉದಯ ಕೋಟ್ಯಾನ್, ಗಣೇಶ್ ಶೆಟ್ಟಿ ಸಾಂತೂರು, ರಮಾಕಾಂತ ರಾವ್, ನಡಿಕೆರೆ ರತ್ನಾಕರ ಶೆಟ್ಟಿ, ಮಾಧವ ಪಾಲನ್, ವಿಠಲ ಗುರಿಕಾರ, ಪ್ರಶಾಂತ್ ಶೆಣೈ, ಮಟ್ಟಾರು ರತ್ನಾಕರ ಹೆಗ್ಡೆ, ವಿಷ್ಣು ಮೂರ್ತಿ ಆಚಾರ್ಯ, ಜಿತೇಂದ್ರ ಫುಟಾರ್ಡೋ, ಶಶಿಕಾಂತ್ ಪಡುಬಿದ್ರಿ, ವಿಶ್ವಾಸ್ ವಿ. ಅಮೀನ್, ಅಶೋಕ್ ಸಾಲ್ಯಾನ್, ಮನೋಹರ ಶೆಟ್ಟಿ, ಮಿಥುನ್ ಆರ್ ಹೆಗ್ಡೆ, ಹರೀಶ್ ಪುತ್ರನ್, ಕರುಣಾಕರ ಶೆಟ್ಟಿ, ರಚನ್ ಸಾಲ್ಯಾನ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಬಾಲಚಂದ್ರ ಶೆಟ್ಟಿ, ಬಾಲಗೋಪಾಲ್ ಬಲ್ಲಾಳ್, ವಿಶು ಕುಮಾರ್ ಶೆಟ್ಟಿ ಬಾಲ್, ರಾಜೇಶ್ ಪಡುಬಿದ್ರಿ, ಪೇಟೆಮನೆ ಪ್ರಕಾಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪೋಲಿಸ್, ಆರೋಗ್ಯ, ಅಗ್ನಿ ಶಾಮಕ ದಳ ಇಲಾಖೆಗಳು ಸಹಕರಿಸಿದ್ದವು.

